ಉಭಯ ಶ್ರೀಗಳ ಮಂತ್ರಾಲಯ ಪ್ರವೇಶ, ಭಕ್ತರ ಹರ್ಷೋದ್ಗಾರ
ಕ.ಪ್ರ. ವಾರ್ತೆ ರಾಯಚೂರು ಜೂ. 1
ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ನೂತನ ಉತ್ತರಾಧಿಕಾರಿಗಳಾದ ಸುಬುಧೇಂದ್ರ ತೀರ್ಥರ ಪುರಪ್ರವೇಶದ ಅಂಗವಾಗಿ ಭವ್ಯ ಮೆರವಣಿಗೆ ಆಯೋಜಿಸಲಾಗಿತ್ತು.
ಕೊಪ್ಪಳ ಜಿಲ್ಲೆ ಗಂಗಾವತಿಯಿಂದ ಸಂಜೆ ಮಂತ್ರಾಲಯಕ್ಕೆ ಆಗಮಿಸುವ ಮಾರ್ಗದಲ್ಲಿ ಮಾಧವರಂ ನಲ್ಲಿ ಉಭಯ ಶ್ರೀಗಳಾದ ಸುಯತೀಂದ್ರ ತೀರ್ಥರು ಹಾಗೂ ಅವರ ಉತ್ತರಾಧಿಕಾರಿ ಸುಬುಧೇಂದ್ರ ತೀರ್ಥರನ್ನು ಭಕ್ತರು ಬೈಕ್ ರ್ಯಾಲಿ ಮೂಲಕ ಬರಮಮಾಡಿಕೊಂಡರು.
ನಂತರ ಮಂತ್ರಾಲಯ ಗ್ರಾಮ ಪ್ರವೇಶಿಸುತ್ತಿದ್ದಂತೆಯೇ ಸಾವಿರಾರು ಸಂಖ್ಯೆಯ ಅನುಯಾಯಿಗಳು ತೆರೆದ ವಾಹನದಲ್ಲಿ ಭಕ್ತಿ- ಭಾವದೊಂದಿಗೆ ಭವ್ಯ ಮೆರವಣಿಗೆಯಲ್ಲಿ ಶ್ರೀಗಳನ್ನು ಶ್ರೀಮಠಕ್ಕೆ ಕರೆ ತಂದರು. ಮೆರವಣಿಗೆಯಲ್ಲಿ ವಿವಿಧ ಭಜನಾ ತಂಡಗಳು ಹಾಗೂ ಜಾನಪದ ಕಲಾವಿದರ ತಂಡಗಳು ಪಾಲ್ಗೊಂಡಿದ್ದವು.
ನಂತರ ಶ್ರೀಗಳು ರಾಘವೇಂದ್ರ ತೀರ್ಥರ ಮೂಲಬೃಂದಾವನದ ದರ್ಶನ ಪಡೆದರು. ಬಳಿಕ ವಾದೀಂದ್ರ ತೀರ್ಥರು, ಸುಶಮೀಂದ್ರ ತೀರ್ಥರು ಸೇರಿದಂತೆ ವಿವಿಧ ಯತಿಗಳ ಬೃಂದಾವನದ ದರ್ಶನ ಪಡೆದರು. ಈ ವೇಳೆ ಶ್ರೀಮಠದ ಪ್ರಮುಖರಾದ ರಾಜಾ ರಾಜಗೋಪಾಲಾಚಾರ್ಯ, ಸುಯಮೀಂದ್ರಾಚಾರ್ಯ, ಆನಂದರಾವ್, ಶ್ರೀಪತಿ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

