ಮಿನರಲ್ ವಾಟರ್ ಪ್ಲಾಂಟ್ ಮೇಲೆ ದಾಳಿ: 49 ಕ್ಯಾನ್ ವಶ
ಸಿಂಧನೂರು: ನಗರದಲ್ಲಿ ಪಿಡಬ್ಲ್ಯುಡಿ ಕ್ಯಾಂಪ್ನಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮಿನರಲ್ ವಾಟರ್ ಪ್ಲಾಂಟ್ ಮೇಲೆ ಆರೋಗ್ಯ ನೀರಿಕ್ಷಕ ಪರಮೇಶ್ವರಪ್ಪ ದಾಳಿ ನಡೆಸಿ ಸ್ಥಳದಲ್ಲಿದ್ದ 49 ನೀರಿನ ಕ್ಯಾನ್ಗಳನ್ನು ವಶಪಡಿಸಿ ಕೊಂಡಿದ್ದಾರೆ.
ನಗರದ ಕೃಷ್ಣಮೂರ್ತಿ ಮತ್ತು ಸುರೇಶ ಎನ್ನುವರು ಅಕ್ರಮ ಮಿನರಲ್ ನೀರಿನ ಪ್ಲಾಂಟ್ ನಡೆಸುತ್ತಿದ್ದರೆನ್ನಲಾಗಿದೆ. ಮಾಹಿತಿ ಹಿನ್ನೆಲೆಯಲ್ಲಿ ಆರೋಗ್ಯ ನಿರೀಕ್ಷಕರ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ.
ಕೃಷ್ಣಮೂರ್ತಿ ಎನ್ನುವ ವ್ಯಕ್ತಿ ಕಾರಟಗಿ ವೆಂಕಿಸ್ ಮಿನರಲ್ ವಾಟರ್ ಅಧಿಕೃತ ಮಾರಾಟಗಾರರಲ್ಲಿ ಸುಮಾರು ದಿನಗಳಿಂದ ವಾಟರ್ ಕ್ಯಾನ್ ಖರೀದಿಸಿ ಮಾರಾಟ ಮಾಡುತ್ತಿದ್ದರು. ನಂತರ 180 ವಾಟರ್ ಕ್ಯಾನ್ಗಳನ್ನು ಪಡೆದು, ಅವುಗಳನ್ನು ಮರಳಿಸಿರಲಿಲ್ಲ. ಪಿಡಬ್ಲ್ಯುಡಿ ಕ್ಯಾಂಪ್ನ್ಲ್ಲಿ ಸುರೇಶ ಎನ್ನುವರ ಜೊತೆ ಸೇರಿ ಕೊಂಡು ಅಕ್ರಮ ಮಿನರಲ್ ವಾಟರ್ ತಯಾರಿಸಿ ನಗರದಲ್ಲಿ ಮಾರಾಟ ಮಾಡಿದ್ದಾರೆ.
ಆರೋಗ್ಯ ನಿರೀಕ್ಷಕರು ತಮಗೆ ಮಿನಿರಲ್ ವಾಟರ್ ಬೇಕಾಗಿದೆ ಎಂದು ದೂರವಾಣಿ ಮೂಲಕ ಕೇಳಿದಾಗ ವಾಹನದಲ್ಲಿ ಮಿನರಲ್ ವಾಟರ್ ತೆಗೆದುಕೊಂಡು ಬಂದಿದ್ದರು. ಸ್ಥಳದಲ್ಲೇ ವಾಟರ್ ಕ್ಯಾನ್ ಸಮೇತ ಸಿಕ್ಕಿಬಿದ್ದಿದ್ದಾರೆ. ಆದರೆ ಆರೋಪಿಗಳಾದ ಕೃಷ್ಣಮೂರ್ತಿ, ಸುರೇಶ ತಪ್ಪಿಸಿಕೊಂಡಿದ್ದಾರೆ. ಈ ಕುರಿತು ಆರೋಗ್ಯ ನಿರೀಕ್ಷಕ ಪರಮೇಶ್ವರಪ್ಪ ಪ್ರಕರಣವನ್ನು ಪೊಲೀಸರಿಗೆ ಒಪ್ಪಿಸಿದ್ದು ತನಿಖೆ ನಡೆದಿದೆ. ಈ ಕುರಿತು ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

