ಗುಟ್ಕಾ ಮಾರುತ್ತಿದ್ದ ಅಂಗಡಿಗಳ ಮೇಲೆ ದಾಳಿ
ಸಿಂಧನೂರು: ನಗರದ ವಿವಿಧ ಪಾನ್ ಶಾಪ್, ಗುಟ್ಕಾ ಏಜೆನ್ಸಿಗಳ ಅಂಗಡಿಗಳು, ಅನಧಿಕೃತ ನೀರು ಮಾರಾಟದ ಅಂಗಡಿಗಳ ಮೇಲೆ ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ ಗುರುವಾರ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದರು.
ರಾಜ್ಯ ಸರ್ಕಾರ ಗುಟ್ಕಾ ನಿಷೇಧಿಸಿದರೂ ಕೆಲ ಅಂಗಡಿಗಳಲ್ಲಿ ಅಕ್ರಮವಾಗಿ ಗುಟ್ಕಾ ಮಾರಾಟ ಮಾಡುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಸೈಯದ್ ಹಸೇನ್ ಹುಸೇನ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್, ಆಹಾರ ಸುರಕ್ಷತಾ ಅಧಿಕಾರಿ ಪರಮೇಶ್ವರ, ಆಹಾರ ಶಿರಸ್ತೇದಾರ ಆನಂದ ಮತ್ತಿತರ ಅಧಿಕಾರಿಗಳು ದಾಳಿ ನಡೆಸಿದರು.
ದೂರು ದಾಖಲಿಸಲು ಸೂಚನೆ: ನಗರದ ಗುಟ್ಕಾ ಮಾರಾಟದ ಏಜೆನ್ಸಿ ನಡೆಯುತ್ತಿರುವ ಗಣೇಶ ಸ್ಟೋರ್ಸ್, ಗಣೇಶ ಅಡಿಕೆ ಅಂಗಡಿ, ಮಹಾಲಕ್ಷ್ಮೀ ಏಜೆನ್ಸಿ, ನಂದಿನಿ ಪಾನಶಾಪ್ಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವಿಮಲ್, ಸ್ಟಾರ್, ಆರ್ಎಂಡಿ ಸಿದ್ದು ಮತ್ತಿತರ ಗುಟ್ಕಾಗಳನ್ನು ವಶಪಡಿಸಿಕೊಂಡು ದೂರು ದಾಖಲಿಸುವಂತೆ ತಹಸೀಲ್ದಾರ್ ಅಧಿಕಾರಿಗಳಿಗೆ ಸೂಚಿಸಿದರು.
ವಾಟರ್ ಪ್ಲಾಂಟ್ ಮೇಲೂ ದಾಳಿ: ಅದೇ ರೀತಿ ಅನಧಿಕೃತವಾಗಿ, ಐಎಸ್ಐ ಮುದ್ರೆ ಇಲ್ಲದೆ ನೀರಿನ ಕ್ಯಾನ್ಗಳನ್ನು ಮಾರಾಟ ಮಾಡುತ್ತಿದ್ದ ಡೈಮಂಡ್, ಭಾರತ, ಶ್ರೀಸಾಯಿ, ಅನ್ನಪೂರ್ಣ, ಗಂಗಾಜಲ ವಾಟರ್ ಪ್ಲಾಂಟರ್ಗಳ ಮೇಲೂ ದಾಳಿ ಮಾಡಿ ನೀರಿನ ಕ್ಯಾನ್ಗಳನ್ನು ವಶಪಡಿಸಿಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಹಸೀಲ್ದಾರ್ ಕುಮಾರಸ್ವಾಮಿ, ಇನ್ನೂ ಹಲವಡೆ ಗುಟ್ಕಾ ಹಾಗೂ ನೀರಿನ ಮಾರಾಟದ ಅಂಗಡಿಗಳ ಮೇಲೆ ದಾಳಿ ಮಾಡುತ್ತೇನೆ. ಹೆಚ್ಚಿನ ದರದಲ್ಲಿ ಕೆಲವು ಪಾನಶಾಪ್ಗಳಲ್ಲಿ ಗುಟ್ಕಾಗಳು ಮಾರಾಟವಾಗುತ್ತಿರುವ ಬಗ್ಗೆಯೂ ತಮಗೆ ಮಾಹಿತಿ ಇದ್ದು ಮುಂದಿನ ವಾರದಲ್ಲಿ ಅಕ್ರಮ ಗುಟ್ಕಾಗಳನ್ನು ವಶಪಡಿಸಿಕೊಂಡು ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

