ಬಳ್ಳಾರಿಯ ಎತ್ತುಗಳಿಗೆ ಪ್ರಥಮ, ದ್ವಿತೀಯ ಸ್ಥಾನ
ಕ.ಪ್ರ. ವಾರ್ತೆ , ರಾಯಚೂರು , ಜೂ.22
ನಗರದಲ್ಲಿ ಶನಿವಾರ ನಡೆದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಮೊದಲ ದಿನದ ಒಂದೂವರೆ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಬಳ್ಳಾರಿ ಅಹಂಭಾವಿಯ ವೆಂಕಟರಾವ್ ಅವರ ಎತ್ತುಗಳು ಪ್ರಥಮ ಸ್ಥಾನ ಗಳಿಸಿವೆ.
ನಗರದ ರಾಜೇಂದ್ರ ಗಂಜ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ವೆಂಕಟರಾವ್ ಅವರ ಎತ್ತುಗಳು ನಿಗದಿತ 20 ನಿಮಿಷದ ಅವಧಿಯಲ್ಲಿ 2700 ಅಡಿ ದೂರ ಕಲ್ಲು ಎಳೆದು 45 ಸಾವಿರ ಬಹುಮಾನ ಪಡೆದವು.
ಅದೇ ರೀತಿ ಎರಡನೇ ಸ್ಥಾನದಲ್ಲಿ ಬಳ್ಳಾರಿಯ ರವಿಕುಮಾರ್ ಅವರ ಎತ್ತುಗಳು ನಿಗದಿತ ಸಮಯದಲ್ಲಿ 2400 ಅಡಿ ದೂರ ಕಲ್ಲು ಎಳೆದು 35 ಸಾವಿರ ಬಹುಮಾನ ಪಡೆದರೆ, ಮೂರನೇ ಸ್ಥಾನದಲ್ಲಿ ಕೊಡೇಕಲ್ನ ಬಬ್ಲುಗೌಡ ಅವರ ಎತ್ತುಗಳು 2398 ಅಡಿ ದೂರ ಕಲ್ಲು ಎಳೆದು ರು. 25ಸಾವಿರ ಪಡೆದವು.
ಹಾಗೆಯೇ ನಾಲ್ಕನೇ ಸ್ಥಾನದಲ್ಲಿ ದೇವದುರ್ಗ ತಾಲೂಕಿನ ರಾಮದುರ್ಗದ ಆಂಜಿನೇಯ್ಯ ಅವರ ಎತ್ತುಗಳು 2660 ಅಡಿ ದೂರ ಎಳೆದು 15 ಸಾವಿರ ಬಹುಮಾನ ಪಡೆದರೆ, ಐದನೇ ಸ್ಥಾನದಲ್ಲಿ ರಾಯಚೂರು ತಾಲೂಕಿನ ಪೋತ್ಗಲ್ನ ಮುನ್ನಾಬಾಷಾ ಅವರ ಎತ್ತುಗಳು 2150 ಅಡಿ ದೂರ ಕಲ್ಲು ಎಳೆದು 10 ಸಾವಿರ ಬಹುಮಾನ ಪಡೆದವು. ಸೋಮವಾರ ಆಯೋಜಿಸಿದ್ದ ಕರ್ನಾಟಕದ ಎತ್ತುಗಳ ಸ್ಪರ್ಧೆಯಲ್ಲಿ ಒಟ್ಟು 21 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

