ಶಾಲು ತಂದಿತು ತೆಲಂಗಾಣ ಹೋರಾಟದ ನೆನಪು
ರಾಯಚೂರು: ಅಲ್ಲಿ ಎಲ್ಲರೂ ತಿಳಿ ಗುಲಾಬಿ ಬಣ್ಣದ ಶಾಲು ಹೊದ್ದಿದ್ದರು. ವೇದಿಕೆಗೆ ಆಗಮಿಸುವ ಎಲ್ಲರಿಗೂ ಅದೇ ಬಣ್ಣದ ಶಾಲು ಹೊದಿಸಲಾಗುತ್ತಿತ್ತು. ಸಚಿವ ಕೃಷ್ಣ ಭೈರೇಗೌಡರು ಆಗಮಿಸುತ್ತಿದ್ದಂತೆಯೇ ಅವರಿಗೂ ಅದೇ ಶಾಲು ಹೊದಿಸಲಾಯಿತು. ಶಾಲಿನ ಬಣ್ಣ ಕಂಡ ಸಚಿವರು ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ನಡೆಯುತ್ತಿರುವ ಹೋರಾಟದ ನೆನಪು ಮಾಡಿಕೊಂಡರು.
ನಗರದಲ್ಲಿ ಭಾನುವಾರ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಎರಡನೇ ದಿನದ ಸಮಾರಂಭದಲ್ಲಿ ಇಂಥ ಪ್ರಸಂಗ ನಡೆಯಿತು.
ಮುನ್ನೂರು ಕಾಪು ಸಮಾಜದವರು ಬಳಸುವ ತಿಳಿ ಗುಲಾಬಿ ಬಣ್ಣದ ಶಾಲು ಅತಿಥಿಗಳಿಗೆ ಗೌರವಪೂರ್ವಕವಾಗಿ ಹೊದಿಸುವುದು ರೂಢಿ. ಆದರೆ ಸಚಿವ ಕೃಷ್ಣ ಬೈರೇಗೌಡರಿಗೆ ಶಾಲು ನೋಡುತ್ತಿದ್ದಂತೆಯೇ ತೆಲಂಗಾಣ ಹೋರಾಟದ ನೆನಪು ಕಾಡಿರಬೇಕು. ಹಾಗಾಗಿ ಅವರು ತಮ್ಮ ಭಾಷಣದಲ್ಲಿ ನಾವೆಲ್ಲರೂ ಶಾಲು ಹೊದ್ದು ಪ್ರತ್ಯೇಕ ತೆಲಂಗಾಣ ಹೋರಾಟಕ್ಕೆ ನಿಂತ ನಾಯಕರಂತೆ ಕಾಣುತ್ತಿದ್ದೇವೆ. ಹತ್ತಿರದಲ್ಲಿಯೇ ಆಂಧ್ರ ಬೇರೆಯಿದೆ. ತೆಲುಗು ಇಲ್ಲಿ ಹಾಸುಹೊಕ್ಕಾಗಿದೆ. ಅದಕ್ಕಾಗಿ ಈ ಅನುಮಾನ ಬಂತು ಎಂದು ನಕ್ಕರು.
ತಮಾಷೆಗೆ ಹಾಗೆಂದಿದ್ದಾಗಿ ತಿಳಿಸಿದ ಅವರು, ತೆಲಂಗಾಣ ಹೋರಾಟಗಾರರೂ ಇಂಥದ್ದೇ ಶಾಲು ಹೊದ್ದುಕೊಂಡಿರುತ್ತಾರೆಂದು ಸಮಜಾಯಿಷಿ ನೀಡಿದರು. ವೇದಿಕೆಯಲ್ಲಿದ್ದವರೂ ನಕ್ಕು ಸುಮ್ಮನಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

