ನೆಪ ಬಿಡಿ, ನಿಷ್ಠೆಯಿಂದ ಕಾರ್ಯ ನಿರ್ವಹಿಸಿ
ಕನ್ನಡಪ್ರಭ ವಾರ್ತೆ ಚಿತ್ತಾಪುರ ಜೂ.25
ತಾಲೂಕಿನಲ್ಲಿ ಭೂ ಸೇನಾ ನಿಗಮದ ಕಾಮಗಾರಿಗಳು ಮಂದಗತಿಯಲ್ಲಿ ನಡೆಯುತ್ತಿದ್ದು, ಅಧಿಕಾರಿಗಳು ನೆಪ ಹೇಳದೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿ ಧನ್ಯಕುಮಾರ ಅವರಿಗೆ ಶಾಸಕ ಪ್ರಿಯಾಂಕ್ ಖರ್ಗೆ ತಾಕೀತು ಮಾಡಿದರು.
ತಾಪಂ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸಭೆಗೆ ಬರುವಾಗ ಇಲಾಖೆ ಸಂಪೂರ್ಣ ಮಾಹಿತಿ ತರಬೇಕು ಎಂದರು.
ಕಳೆದ 4 ವರ್ಷಗಳಿಂದ ಹಲವು ಕಾಮಗಾರಿಗಳನ್ನು ಅರಂಭಿಸದೇ ಇರುವುದರಿಂದ ಮಂದಗತಿಯಲ್ಲಿ ಕಾಮಗಾರಿ ನಡೆಯುತ್ತಿವೆ. ತಾಲೂಕಿನಲ್ಲಿ ಭೂ ಸೇನಾ ನಿಗಮ ಇಲಾಖೆ ಕಾಮಗಾರಿ ನಿರ್ಲಕ್ಷ್ಯತನ ಮಾಡುತ್ತಿದೆ ಎಂಬ ದೂರುಗಳಿದ್ದರೂ ತಾಪಂ ಸಭೆಗಳಿಗೆ ಸತತ ಗೈರು ಹಾಜರಾಗುತ್ತೀರಿ. ನಿಗಮವು ಕೇವಲ ನಿಮ್ಮ ವೈಯಕ್ತಿಕ ಏಜನ್ಸಿಯಂತೆ ಕಾರ್ಯನಿರ್ವಹಿಸುತ್ತಿದೆ. 1 ಲಕ್ಷ ಅಥವಾ 2 ಲಕ್ಷದಲ್ಲಿ ಸಿಸಿ ರಸ್ತೆ ಆಗುವುದಿಲ್ಲ. ಅದಕ್ಕೆ ಬೇಕಾಗುವ ಅಗತ್ಯ ಹಣದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು.
ಸುವರ್ಣ ಗ್ರಾಮ ಯೋಜನೆಯ ಹಲವು ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಅಧಿಕಾರಿಗಳು ಯಾವಗಲೂ ಕಚೇರಿಯಲ್ಲಿ ಕುಳಿತುಕೊಳ್ಳದೆ ಕ್ಷೇತ್ರದಲ್ಲಿ ಸಂಚರಿಸಿ ಕೆಲಸ ಮಾಡಲು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದು ಕೆಲಸ ಮಾಡಿದರೆ ಗುಣಮಟ್ಟದ ಕಾಮಗಾರಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಾಸಕರು ಗರಂ: ತಾಲೂಕಿನಲ್ಲಿ ಭೂ ಮಾಪನ ಇಲಾಖೆಯಲ್ಲಿ ತುಂಬಾ ಅವ್ಯವಹಾರ ನಡೆಯುತ್ತಿರುವ ದೂರಿನ ಮೇಲೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ರೈತರು ತಮ್ಮಲ್ಲಿ ಬಂದರೆ ಅವರಿಗೆ ವಿನಾಕಾರಣ ತೊಂದರೆ ನೀಡುವುದಲ್ಲದೆ ಹೆಚ್ಚಿಗೆ ಹಣ ನೀಡಿದವರಿಗೆ ಮೊದಲು ಸರ್ವೇ ಮಾಡುತ್ತಿರುವ ಕುರಿತು ದೂರು ಬಂದಿವೆ ಎಂದು ತರಾಟೆಗೆ ತೆಗೆದುಕೊಂಡರು.
ನಿರ್ಲಕ್ಷ್ಯ ಕಾರಣ ಯೋಜನೆ ಸ್ಥಳಾಂತರ: ಚಿತ್ತಾಪುರದಲ್ಲಿ ಸ್ಥಾಪಿಸಲು ಉದ್ದೇಶಿಸಿದ ಏಕಲವ್ಯ ಶಾಲೆಯನ್ನು ನಿಮ್ಮ ಇಲಾಖೆಯವರು ಸರಿಯಾದ ಸಮಯದಲ್ಲಿ ಜಮೀನು ತೋರಿಸದೆ ಇರುವುದರಿಂದ ಅದನ್ನು ಬೇರೆ ಕಡೆ ಸ್ಥಳಾಂತರಿಸಬೇಕಾಯಿತು. ಅಲ್ಲದೆ ಸೀಮಾ ಶಸಸ್ತ್ರದಳಕ್ಕೆ 65 ಎಕರೆ ಜಮೀನು ನೀಡುವಲ್ಲೂ ತಾವು ನಿರ್ಲಕ್ಷ್ಯ ತೋರಿಸಿರುವುದರಿಂದ ಅದು ಬೇರೆ ಕಡೆ ಹೋಗಿರುವುದರಿಂದ ಇಲ್ಲಿನ ಸ್ಥಳೀಯ ಅನೇಕರಿಗೆ ಉದ್ಯೋಗ ವಂಚಿತರಾಗಬೇಕಾಯಿತೆಂದು ತರಾಟೆಗೆ ತೆಗೆದುಕೊಂಡರು.
ಮುಂದೆ ರೈತರಿಂದ ದೂರುಗಳು ಬಂದರೆ ಕಚೇರಿಗೆ ಬಂದು ಪರೀಶೀಲನೆ ಮಾಡಿ ತಪ್ಪಿತಸ್ಥ ಅಧಿಕಾರಿಯನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಪಂ ಸದಸ್ಯ ರಮೇಶ ಮರಗೋಳ, ತಾಪಂ ಅಧ್ಯಕ್ಷ ಶರಣಗೌಡ ಭಾಗೋಡಿ, ಎಪಿಎಂಸಿ ಅಧ್ಯಕ್ಷ ಶಿವಯೋಗಿ ಸಾಹು ಗುಂಡಗುರ್ತಿ, ಕೃಷಿಕ ಸಮಾಜ ಅಧ್ಯಕ್ಷ ಚಂದ್ರಶೇಖರ ಪರಸರೆಡ್ಡಿ, ತಾಪಂ ಇಒ ಸುರೇಶ ಬಿರಾದಾರ, ಲೆಕ್ಕಾಧಿಕಾರಿ ಲಕ್ಷ್ಮಣ ಶೃಂಗೇರಿ, ಅಧಿಕಾರಿಗಳಾದ ಎಸ್.ಕೆ. ಕನಕ, ರವಿಕುಮಾರ, ಡಾ. ಪ್ರಭುಲಿಂಗ ಮಾನಕರ್, ಧನ್ಯಕುಮಾರ, ಎಚ್.ಕೆ. ರಾಜಣ್ಣ, ಆರ್.ಎಸ್. ರತ್ನಾಕರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

