30ರಂದು ಪಾಲಿಕೆ ಸದಸ್ಯರೊಂದಿಗೆ ನಾಗರಿಕರ ಸಮಾಲೋಚನಾ ಸಭೆ
ಗುಲ್ಬರ್ಗ: ಮಹಾನಗರ ಹಲವಾರು ಮೂಲ ಸಮಸ್ಯೆಗಳಿಂದ ಬಳಲುತ್ತಿದೆ. ಸಮಸ್ಯೆಗಳನ್ನು ಪಾಲಿಕೆ ಸದಸ್ಯರ ಗಮನಕ್ಕೆ ತಂದು ಸೂಕ್ತ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಗುಲ್ಬರ್ಗ ನಾಗರಿಕ ಹೋರಾಟ ಸಮಿತಿಯು ಜೂ.30ರಂದು ನಗರದಲ್ಲಿ ಪಾಲಿಕೆ ಸದಸ್ಯರೊಂದಿಗೆ ನಾಗರಿಕರ ಸಮಾಲೋಚನಾ ಸಭೆ ನಡೆಸಲು ನಿರ್ಧರಿಸಿದೆ.
ನಗರಕ್ಕೆ ಭೀಮಾ ಮತ್ತು ಬೆಣ್ಣೆತೊರೆ ನದಿಗಳ ನೀರಿನ ಮೂಲಗಳಿದ್ದರೂ ಇಲ್ಲಿಯ ಜನತೆಗೆ ನಿರಂತರವಾಗಿ ಶುದ್ಧ ಹಾಗೂ ಸಮರ್ಪಕ ನೀರು ದೊರೆಯುತ್ತಿಲ್ಲ. ಇರುವ ರಸ್ತೆಗಳು ಹದಗೆಟ್ಟು ಹೋಗಿವೆ. ಹಲವಾರು ವರ್ಷಗಳಿಂದ ಜನ ವಾಸಿಸುತ್ತಿರುವ ಬಡಾವಣೆಗಳಲ್ಲಿ ಸಹ ಒಳರಸ್ತೆಗಳನ್ನು ನಿರ್ಮಿಸಿಲ್ಲ. ಮುಖ್ಯ ರಸ್ತೆಗಳಲ್ಲಿ ನಡೆಯುತ್ತಿರುವ ಅಲ್ಪ ಸ್ವಲ್ಪ ಕಾಮಗಾರಿಗಳು ಆಮೆಗತಿಯಲ್ಲಿರುವುದರಿಂದ ಸಂಚರಿಸುವ ಪಾದಚಾರಿಗಳಿಗೆ, ವಾಹನಗಳಿಗೆ ತೊಂದರೆಯಾಗಿದ್ದು, ಇವುಗಳ ಕುರಿತು ಪಾಲಿಕೆ ಸದಸ್ಯರ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಸಮಿತಿ ಮಾಡುತ್ತಿದೆ ಎಂದು ಸಮಿತಿ ಸಂಚಾಲಕಿ ವಿ. ನಾಗಮ್ಮಾಳ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗುಲ್ಬರ್ಗ ಮಹಾನಗರದ ಎಲ್ಲ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ ನಗರದ ಅಭಿವೃದ್ಧಿಯನ್ನು ತ್ವರಿತವಾಗಿ ಕೈಗೊಳ್ಳುವ ನಿಟ್ಟಿನಲ್ಲಿ ಜೂ.30ರಂದು ನಗರದ ಹೊಸ ಜೇವರ್ಗಿ ರಸ್ತೆಯಲ್ಲಿರುವ ಶೆಮ್ಸ್ ಫಂಕ್ಷನ್ ಹಾಲ್ನಲ್ಲಿ ಬೆಳಗ್ಗೆ 10 ಗಂಟೆಗೆ ಮಹಾನಗರ ಪಾಲಿಕೆ ಸರ್ವ ಸದಸ್ಯರೊಂದಿಗೆ ಸಮಾಲೋಚನಾ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಅಂದು ನಡೆಯುವ ಸಭೆಯಲ್ಲಿ ವಿ. ನಾಗಮ್ಮಾಳ್, ಹಿರಿಯ ನ್ಯಾಯವಾದಿ ಕೆ.ಎ. ಕಲಬುರ್ಗಿ, ಪ್ರಾಧ್ಯಾಪಕ ಪ್ರೊ. ಸಂಜಯ ಮಾಕಲ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ನಿವೃತ್ತ ಉಪನ್ಯಾಸಕ ಪ್ರೊ. ಅಂಬಾರಾಯ ಉಪಳಾಂವಕರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಅಹವಾಲು ಕೇಳುವರಿಲ್ಲ: ಯಾಕಾಪುರ
ಚಿಂಚೋಳಿ: ತಾಲೂಕಿನ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರದೇ ದಿನಾಲೂ ಗುಲ್ಬರ್ಗ, ಬೀದರ್, ಸೇಡಂ ಮುಂತಾದ ನಗರ ಪ್ರದೇಶಗಳಿಂದ ತಡವಾಗಿ ಬರುತ್ತಿರುವುದರಿಂದ ಗ್ರಾಮೀಣ ಜನರ ಮತ್ತು ಸಾರ್ವಜನಿಕರ ಅಹವಾಲು ಕೇಳುವವರೇ ಇಲ್ಲದಂತಾಗಿದೆ ಎಂದು ಸುಲೇಪೇಟ್ ಮತಕ್ಷೇತ್ರ ಬಿಜೆಪಿ ಜಿಪಂ ಸದಸ್ಯ ಸಂಜೀವನ್ ಯಾಕಾಪುರ ದೂರಿದ್ದಾರೆ.
ಪಟ್ಟಣದ ಚಂದಾಪುರ ನಗರದಲ್ಲಿ ವಿವಿಧ ಇಲಾಖೆಗಳಿವೆ. ಆದರೆ, ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಮಧ್ಯಾಹ್ನ 12ಗಂಟೆ ನಂತರ ಕಾಟಾಚಾರಕ್ಕೆ ಸೇವೆಗೆ ಹಾಜರಾಗಿ ನಂತರ ಊಟಕ್ಕೆಂದು ಹೋದವರು ಮರಳಿ ಕಚೇರಿಗೆ ಬರುವುದಿಲ್ಲ. ಕಚೇರಿಯಲ್ಲಿದ್ದ ಸಿಬ್ಬಂದಿಯನ್ನು ವಿಚಾರಿಸಿದರೆ ಸಾಹೇಬರು ಊಟಕ್ಕೆ ಹೋಗಿದ್ದಾರೆ. ಕೆಲವು ಇಲಾಖೆಗಳಲ್ಲಿ ಸೈಟಿಗೆ ಹೋಗಿದ್ದಾರೆಂಬ ಉತ್ತರ ನೀಡುತ್ತಾರೆ ಎಂದು ತಿಳಿಸಿದ್ದಾರೆ.
ಸರ್ಕಾರಿ ಅಧಿಕಾರಿಗಳನ್ನು ಸೇವೆಗೆ ಬರಲು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ಕ್ಕೆ ಇರುತ್ತದೆ. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದರೆ ಗ್ರಾಮೀಣ ಪ್ರದೇಶ ಜನರ ಸಮಸ್ಯೆ ಮತ್ತು ಅಹವಾಲುಗಳನ್ನು ಸ್ವೀಕರಿಸಲು ಅನುಕೂಲವಾಗುತ್ತದೆ. ಆದರೆ ಅಧಿಕಾರಿಗಳು ಸರ್ಕಾರದ ಆದೇಶಗಳಿಗೆ ಗಾಳಿಗೆ ತೂರಿದ್ದಾರೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸವಾಗಿದ್ದು, ಸಾರ್ವಜನಿಕರ ಅಹವಾಲು ಮತ್ತು ಮನವಿ ಸ್ವೀಕರಿಸಲು ಸಮಯ ನಿಗದಿ ಪಡಿಸಬೇಕೆಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

