ಕಲ್ಯಾಣ ಮಂಟಪ ನಿರ್ಮಾಣಕ್ಕೆ ವೀರಶೈವ ಸಮಾಜ ಪಣ ತೊಡಲಿ
ಸಿಂಧನೂರು: ತಾಲೂಕಿನ ವೀರಶೈವ ಸಮಾಜ ಸುಮಾರು 50 ಸಾವಿರಕ್ಕೂ ಜನಸಂಖ್ಯೆಯನ್ನು ಹೊಂದಿದ್ದರೂ ಮದುವೆ ಸಮಾರಂಭಗಳಿಗೆ ಬೇರೆ ಬೇರೆ ಕಲ್ಯಾಣ ಮಂಟಪಗಳಿಗೆ, ಇಲ್ಲವೆ ಲಕ್ಷಾಂತರ ರು. ವ್ಯಯಿಸಿ ಪೆಂಡಾಲ್ಗಳನ್ನು ಹಾಕಿಸುವ ಸ್ಥಿತಿ ನಿರ್ಮಾಣವಾಗಿದೆ. ಒಳಪಂಗಡ, ಗುಂಪುಗಾರಿಕೆ, ವೈಮನಸ್ಸುಗಳನ್ನು ಮರೆತು ಸುಸಜ್ಜಿತ ಕಲ್ಯಾಣ ಮಂಟಪ ಕಟ್ಟುವಂತೆ ರೌಡಕುಂದಾ ಸಂಸ್ಥಾನಮಠದ ಮರಿಸಿದ್ಧಲಿಂಗ ಶಿವಾಚಾರ್ಯರು ಆಶಯ ವ್ಯಕ್ತಪಡಿಸಿದರು.
ನಗರದ ಸತ್ಯ ಗಾರ್ಡನ್ನಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಅಭಿನವ ರೇಣುಕಾಚಾರ್ಯರರೆಂದೇ ಖ್ಯಾತರಾದ ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ವೀರಶೈವ ಸಮಾಜದವರು ಕಲ್ಯಾಣ ಮಂಟಪ ಕಟ್ಟಲು ದೃಢನಿಶ್ಚಯ ಮಾಡಿ ಪ್ರಮಾಣ ಮಾಡಬೇಕೆಂದು ಸಲಹೆ ನೀಡಿದರು.
ರಾಜ್ಯದಲ್ಲಿ ಜಂಗಮರ ಪರಿಸ್ಥಿತಿ ಚಿಂತಾಜನಕವಾಗಿದೆ. ಬರೀ ಕಾಲಿಗೆ ನಮಸ್ಕಾರ ಮಾಡಿ ಹತ್ತು, ಇಪ್ಪತ್ತು ರೂಪಾಯಿ ದಕ್ಷಿಣಿ ನೀಡಿದೆ. ಇಂದಿನ ದಿನಮಾನಗಳಲ್ಲಿ ಬದುಕು ನಿರ್ವಹಿಸುವುದು ಕಷ್ಟವಾಗುತ್ತದೆ. ಜಂಗಮರೆಂದರೆ ಪಾಕಶಾಲೆಗೆ ಸೀಮಿತರು ಎಂಬ ಅಪವಾದವಿದೆ. ಇದನ್ನು ಮೀರಿ ಜಂಗಮರು ಬದುಕಬೇಕಾಗಿದೆ ಎಂದರು.
ಕೋಟಿಗಟ್ಟಲೆ ಬೆಲೆ ಬಾಳುವ ನಾಲ್ಕು ಎಕರೆ ಜಮೀನನ್ನು ದಾನ ಮಾಡಿರುವ ಜಂಗಮ ಸಮಾಜದ ಹಿರಿಯ ಸಂಗಯ್ಯಸ್ವಾಮಿ ಸರಗಣಾಧೀಶ್ವರಮಠ ಬೇಡುವವರಲ್ಲ, ಕೊಡುವವರು ಎಂಬುದನ್ನು ಸಾಬೀತು ಮಾಡಿದ್ದಾರೆ. ಅವರ ತಂದೆ ಕರಿಬಸಯ್ಯರ ಹೆಸರಿನಲ್ಲಿ ಇಂದು ಆರಂಭಗೊಂಡಿರುವ ಸಂಸ್ಕೃತ ಜ್ಯೋತಿಷ್ಯ ಪಾಠಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಒತ್ತಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

