ರಾಯಚೂರು

ಬಿಜೆಪಿಗೆ ಅಭ್ಯರ್ಥಿಗಳ ಬರ: ಡಾ. ಅಜಯ್

Published On :

ಜೇವರ್ಗಿ: ಮತಕ್ಷೇತ್ರದಲ್ಲಿ ಶಾಸಕರ ದುರಾಡಳಿತದಿಂದ ಬಿಜೆಪಿ ಸಂಪೂರ್ಣ ದುರ್ರ್ಬಲ ಎಂದು ಕೆಪಿಸಿಸಿ ಸದಸ್ಯ ಡಾ. ಅಜಯಸಿಂಗ್ ಆರೋಪಿಸಿದರು.ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು, ಪಟ್ಟಣ ಪಂಚಾಯಿತಿ ಚುನಾವಣೆಗೆ ಬಿಜೆಪಿಯಲ್ಲಿ ಸ್ಪರ್ಧಿಸುವರೇ ಇಲ್ಲದಂತಾಗಿದೆ. ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಪಕ್ಷ ವಾಗಿದ್ದರು ಜೇವರ್ಗಿಯಲ್ಲಿ ನೆಲ ಕಚ್ಚುವ ಹಂತ ತಲುಪಿದೆ, ಜೇವರ್ಗಿ ಕ್ಷೇತ್ರದಲ್ಲಿ ಕಮಲ ಕೆಸರಲ್ಲಿ ಕುಸಿದು ಬಿದಿದೆ ಎಂದು ಲೇವಡಿ ಮಾಡಿದರು.ಜೇವರ್ಗಿ ಬಿಜೆಪಿ ಶಾಸಕ ದೊಡ್ಡಪ್ಪಗೌಡ ಪಾಟೀಲ ಅವರ ನಡೆಯಿಂದ ಜನತೆ ಭ್ರಮನಿರಸನಗೊಂಡಿದ್ದಾರೆ. ಅದೆ ಕಾರಣಕ್ಕಾಗಿ ಶಾಸಕರು ಸೋಲಿನ ಭೀತಿಯಿಂದ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ.ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ತಮ್ಮ ಪ್ರಚಾರ ಭಾಷಣದಲ್ಲಿ ಬಿಜೆಪಿ ಕೋಮುವಾದಿ ಪಕ್ಷ ಹಾಗೂ ಭ್ರಷ್ಟರ ಪಕ್ಷವೆಂದು ಹರಿಹಾಯುತ್ತಾರೆ. ಆದರೆ ಅದೇ ಕೋಮುವಾದಿ ಪಕ್ಷದ ಜೊತೆಗೆ ಸ್ಥಳಿಯ ಪಪಂ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದರೊಂದಿಗೆ ಜೆಡಿಎಸ್ ಕೂಡಾ ಭ್ರಷ್ಟಾಚಾರದ ಒಂದು ಅಂಗ ಎಂದು ಸಾಬೀತು ಪಡಿಸಿದ್ದಾರೆಂದು ಡಾ. ಅಜಯಸಿಂಗ್ ಬಲವಾಗಿ ಆರೋಪಿಸಿದರು.ಆಡಳಿತ ಪಕ್ಷವಾಗಿರುವ ಬಿಜೆಪಿ ಜನರಿಂದ ದೂರವಾಗಿದೆ. ಕ್ಷೇತ್ರದಲ್ಲಿ ಪ್ರತಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ಜನಮನ್ನಣೆಗೆ ಪಾತ್ರವಾಗಿದ್ದು, ಪಪಂ ಚುನಾವಣೆಯಲ್ಲಿ 20 ಸ್ಥಾನಗಳಲ್ಲಿ ಸ್ಪರ್ಧೆಗೆ ಇಳಿದಿದೆ.ಕಳೆದ ವಿಧಾನಸಭೆ ಚುನಾವಣೆ  ನಂತರ ಕಾಂಗ್ರೆಸ್‌ನ್ನು ಜನತೆ ಅಪ್ಪಿಕೊಂಡಿದ್ದು, ಜಿಪಂ, ತಾಪಂ, ಗ್ರಾಪಂ ಚುನಾವಣೆಯಲ್ಲಿ ಸ್ಥಾನಗಳನ್ನು ಪಡೆದುಕೊಂಡಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.