ಮತದಾರರ ಪಟ್ಟಿಗೆ 350 ಬೋಗಸ್ ಹೆಸರು; ಆರೋಪ
ಸಿಂಧನೂರು: ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ವಾರ್ಡ್ 30ರಲ್ಲಿ 350 ಬೋಗಸ್ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ, ಜೆಡಿಯು ಅಭ್ಯರ್ಥಿ ಶಾಂತಗೌಡ ಜಾಗೀರದಾರ, ಪಕ್ಷೇತರ ಅಭ್ಯರ್ಥಿಗಳಾದ ನಾಗರಾಜ, ಮಹೆಬೂಬಸಾಬ ಆರೋಪಿಸಿದ್ದಾರೆ.
ಆರ್ಎಚ್ ಕ್ಯಾಂಪ್ 3ರ ಪಂಚಾಯಿತಿಯ 350 ಮತದಾರರನ್ನು ನಗರಸಭಾ ವ್ಯಾಪ್ತಿಯ ವಾರ್ಡ್ 30ರ ಮತದಾರರ ಪಟ್ಟಿಯಲ್ಲಿ ಸೇರಿಸಿದ್ದಾರೆ. ನೂತನವಾಗಿ ಸೇರ್ಪಡೆಯಾದ ಮತದಾರರ ಪಟ್ಟಿಯಲ್ಲಿನ ಹೆಸರಿನವರು ಈ ವಾರ್ಡ್ನಲ್ಲಿ ವಾಸವಾಗಿಲ್ಲ. ಇದು ಚುನಾವಣಾ ಅಕ್ರಮ. ಇದರಿಂದಾಗಿ ಚುನಾವಣೆ ಫಲಿತಾಂಶ ನ್ಯಾಯಯುತವಾಗಿ ಹೊರಬರುವುದಿಲ್ಲ.
ಆದ್ದರಿಂದ 2007ರ ಮೀಸಲಾತಿ ಮತದಾರರ ಯಾದಿ ಪ್ರಕಾರ ನಡೆಯಬೇಕು. ಈ ಬಗ್ಗೆ ಆದೇಶ ನೀಡಬೇಕೆಂದು ಚುನಾವಣಾಧಿಕಾರಿ, ತಹಸೀಲ್ದಾರ್ ಚಂದ್ರಶೇಖರ ಅವರನ್ನು ಜಂಟಿಯಾಗಿ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

