ರಾಯಚೂರು

'ಜಲ ನಿರ್ಮಲ ಕಾಮಗಾರಿ ವಿಳಂಬವಾದರೆ ಕಠಿಣ ಕ್ರಮ'

Published On :

ಸಿಂಧನೂರು: ತಾಲೂಕಿನ ವಿವಿಧ ಗ್ರಾಪಂ.ಗಳಲ್ಲಿ ಜಾರಿಯಾಗಿರುವ ಜಲ ನಿರ್ಮಲ ಯೋಜನೆ ಕಾಮಗಾರಿಗಳು ವಿಳಂಬವಾಗುತ್ತಿದ್ದು, ಕೂಡಲೇ ಕಾಮಗಾರಿ ಕೈಗೆತ್ತಿಕೊಂಡು ಸರಿಯಾದ ಸಮಯದಲ್ಲಿ ಮುಗಿಸದಿದ್ದರೆ ಗುತ್ತೇದಾರ, ಪಿಡಿಒಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಲನಿರ್ಮಲ ಯೋಜನೆಯ ಉಪಯೋಜನಾ ವ್ಯವಸ್ಥಾಪಕ ಅಣ್ಣಾಯಪ್ಪ ಎಚ್ಚರಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ಜಲನಿರ್ಮಲ ಯೋಜನೆ ಪ್ರಗತಿಗೆ ಸಂಬಂಧಿಸಿದಂತೆ ಗ್ರಾಪಂ.ಗಳ ಅಧ್ಯಕ್ಷರು, ಪಿಡಿಒಗಳ ಹಾಗೂ ಗುತ್ತೇದಾರರ ಸಭೆ ನಡೆಸಿದರು. ಯಾವ ಕ್ಷಣದಲ್ಲಾದರೂ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಬಹುದಾಗಿದೆ. ಚುನಾವಣೆ ಘೋಷಣೆಯಾದರೆ ಅನುದಾನ ಬಿಡುಗಡೆಯಾಗುವುದಿಲ್ಲ. ಗುತ್ತೇದಾರರು ಕಾಮಗಾರಿ ಗುಣಮಟ್ಟದೊಂದಿಗೆ ಚುರುಕಿನಿಂದ ಕಾರ್ಯನಿರ್ವಹಿಸಬೇಕಿದೆ. ಪಿಡಿಒಗಳು ಹಾಗೂ ಅಭಿಯಂತರರು ಆಗಾಗ ವೀಕ್ಷಣೆ ಮಾಡಬೇಕು.
ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಮುಂಬರುವ ಬೇಸಿಗೆಯಲ್ಲಿ ಕುಡಿವ ನೀರಿನ ಬವಣೆ ಉಂಟಾಗಲಿದೆ. ಕೂಡಲೇ ಕಾಮಗಾರಿಗಳನ್ನು ಮಾಡುವಂತೆ ಗುತ್ತೇದಾರರಿಗೆ ಸೂಚಿಸಿದರು. ಜಲ ನಿರ್ಮಲ ಯೋಜನೆ ಉಪನಿರ್ದೇಶಕ ಆರ್.ಕೆ. ಕೊಳೆಕಾರ, ತಾಂತ್ರಿಕ ಉಪನಿರ್ದೇಶಕ ಉಮೇಶ  ಯೋಜನೆಗೆ ಸಂಬಂಧಿಸಿದಂತೆ ಆಯಾ ಗ್ರಾಪಂ.ಗಳ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು, ಗುತ್ತೇದಾರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.