ರಾಯಚೂರು

ವಾರ್ಡ್‌ಗಳಲ್ಲಿ ಮಹಿಳೆಯರಿಂದ ಶಾಸಕ ವಜ್ಜಲರಿಗೆ ಮುಖಭಂಗ

Published On :

ಕನ್ನಡಪ್ರಭ ವಾರ್ತೆ, ಮುದಗಲ್, ಮಾ.4
ಸ್ಥಳೀಯ ಪಟ್ಟಣ ಪಂಚಾಯಿತಿ ಚುನಾವಣೆ ನಿಮಿತ್ತ ವಿವಿಧ ವಾರ್ಡ್‌ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಮತ ಯಾಚನೆಗೆ ಆಗಮಿಸಿದ ಶಾಸಕ ಮಾನಪ್ಪ ವಜ್ಜಲರಿಗೆ ವಾರ್ಡ್ 12ರಲ್ಲಿ  ಮಹಿಳೆಯರಿಂದ ಮುಖಭಂಗ ಅನುಭವಿಸುವಂತಾಯಿತು.
ವಾರ್ಡ 12 ರಲ್ಲಿ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ ಇಲ್ಲದೆ ಮಹಿಳೆಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ವಾರ್ಡಿಗೆ ಮಂಜೂರಾದ ಶೌಚಾಲಯ ಕಾಮಗಾರಿ ಪೂರ್ಣಗೊಳಿಸುವ ಮುನ್ನವೇ  ವೈಯಕ್ತಿಕ ಜಗಳದಿಂದಾಗಿ ಅಪೂರ್ಣಗೊಂಡಿದೆ. ಇಷ್ಟಿದ್ದರೂ ಶಾಸಕರಾದ ತಾವು ಈ ಬಗ್ಗೆ ಕಾಳಜಿ ವಹಿಸಲಿಲ್ಲ. ಈಗ ಚುನಾವಣೆ ಬಂದಿದೆ ಎಂದು ಮತ ಕೇಳಲು ಬಂದಿದ್ದಿರಿ. ಮತ್ತೆ ತಿರುಗಿ ಇತ್ತಕಡೆ ಸುಳಿಯುವುದಿಲ್ಲ ಎಂದು ಮಾತಿಗೆಳೆದರು.
ಮಹಿಳೆಯರನ್ನುದೇಶಿಸಿ ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ, ಇನ್ನು ಮುಂದೆ ವಾರ್ಡ್‌ಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿದರು. ಜೆಡಿಎಸ್ ಅಧ್ಯಕ್ಷ ಅಮೀರಬೇಗ ಉಸ್ತಾದ್, ಎಪಿಎಂಸಿಸಿ ಉಪಾಧ್ಯಕ್ಷ ಎಸ್.ಆರ್. ರಸೂಲ್, ಎಂ.ಡಿ. ರಜಾಕ್, ಸೈಯ್ಯದ್ ಸಾಬ್, ಶರಣಪ್ಪ ವಡ್ಡರ್, ವೀರೇಶ ವಡ್ಡರ್ ಉಪಸ್ಥಿತರಿದ್ದರು.

'ವಜ್ಜಲ್ ಪ್ರಬುದ್ಧ ರಾಜಕಾರಣಿಯಲ್ಲ'
ಮುದಗಲ್: ಬಿಜೆಪಿ ಶಾಸಕನಾಗಿ ಇನ್ನೊಂದು ಪಕ್ಷದ ಅಭ್ಯರ್ಥಿ ಪರ ಚುನಾವಣೆ ಪ್ರಚಾರ ನಡೆಸುವ ಮೂಲಕ ಅದನ್ನು ಸಮರ್ಥಿಕೊಳ್ಳುತ್ತಿರುವ ವಜ್ಜಲರ ನಡೆ ಪ್ರಬುದ್ಧ ರಾಜಕಾರಣಿಗೆ ಸೇರಿದ್ದಲ್ಲ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರಮೇಶ ಜೋಷಿ ಹೇಳಿದರು. ಪಟ್ಟಣದಲ್ಲಿ ಶನಿವಾರ ಮತದಾರರ ಪರ ಮತಯಾಚಿಸಿ ಪತ್ರಕರ್ತರೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಕೇಶವ ರೆಡ್ಡಿ, ರಾಘವೇಂದ್ರ ಸುರುಪುರ, ಕೃಷ್ಣಾ ಇದ್ದರು.


ಪಕ್ಷಕ್ಕಿಂತ ವ್ಯಕ್ತಿತ್ವ ನೋಡಿ ಮತ ಹಾಕಿದ್ದಾರೆ: ವಜ್ಜಲ್
ಕನ್ನಡಪ್ರಭ ವಾರ್ತೆ, ಮುದಗಲ್, ಮಾ.4
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಲಿಂಗಸ್ಗೂರು ಕ್ಷೇತ್ರದ ಜನರು ಬಿಜೆಪಿಗಿಂತಲೂ ನನ್ನ ವ್ಯಕ್ತಿತ್ವ ನೋಡಿ ಓಟು ಹಾಕಿ ಗೆಲ್ಲಿಸಿದ್ದಾರೆ ಎಂದು ಶಾಸಕ ಮಾನಪ್ಪ ವಜ್ಜಲ್ ಸ್ಪಷ್ಟಪಡಿಸಿದರು.  ಪಟ್ಟಣ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಪರ ಮತಯಾಚಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಈಗಲೂ ನಾನು ಬಿಜೆಪಿ ಶಾಸಕನೇ. ಆದರೆ ಮುಂದಿನ ಚುನಾವಣೆಯಲ್ಲಿ ನೀವು ಬಿಜೆಪಿಯಲ್ಲಿದ್ದು ಚುನಾವಣೆ ಎದುರಿಸಬೇಡಿ ಎಂದು ಕಾರ್ಯಕರ್ತರ ಒತ್ತಡ ಹೆಚ್ಚಿದ್ದರಿಂದ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಇಳಿದಿದ್ದೆನೆ ಎಂದರು. ಸ್ಥಳೀಯ ಚುನಾವಣೆ ಮತ ಎಣಿಕೆಯ ನಂತರ ನನ್ನ ನಡೆ ಬದಲಾಗಲಿದೆ. ಅಲ್ಲಿವರೆಗೆ ಕಾಯಿರಿ ಎಂದರು. ಆದರೆ ನಿಮ್ಮ ನಡೆ ಬಗ್ಗೆ ಕಾರ್ಯಕರ್ತರಲ್ಲಿ, ಮತದಾರರಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎಂಬ ಪ್ರಶ್ನೆಗೆ ಆ ರೀತಿ ನಡೆಯುವುದಿಲ್ಲ ಎಂದರು. ಕಳೆದ ತಾ.ಪಂ, ಜಿ.ಪಂ.ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಬೆಂಬಲಿಸಿ ಮತ ಯಾಚಿಸಿದ್ದವರು, ಈ ಚುನಾವಣೆಯಲ್ಲಿ ಜೆಡಿಎಸ್ ಪರ ಪ್ರಚಾರಕ್ಕೆ ಬಂದಿದ್ದು ಯಾಕೆ ಎಂಬ ಪ್ರಶ್ನೆಗೆ ನನ್ನಿಷ್ಟ ಎಂದು ಚುಟುಕಾಗಿ ಉತ್ತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.