ಇಂದು ದತ್ತಿ ಕಾರ್ಯಕ್ರಮ
ರಾಯಚೂರು: ಹನುಮಂತಪ್ಪ ಸಂಜೀವಪ್ಪ ಮ್ಯಾದಾರ್ ಸ್ಮಾರಕ ದತ್ತಿ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಮಾ.17 ರಂದು ಚಿತ್ರಕಲೆ ಪ್ರಾತ್ಯಕ್ಷಿಕೆ, ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ. ತಾಲೂಕು ಕಸಾಪ, ಮ್ಯಾದಾರ್ ಲಲಿತಕಲಾ ಪ್ರತಿಷ್ಠಾನಗಳ ಸಂಯುಕ್ತಾಶ್ರಯದಲ್ಲಿ ನಗರದ ಟಾಗೋರ್ ಸಭಾಂಗಣದಲ್ಲಿ ಅಂದು ಸಂಜೆ 4ಕ್ಕೆ ನಡೆಯುವ ಸಮಾರಂಭವನ್ನು ಹಿರಿಯ ಕಲಾವಿದ ಹೀರಾಲಾಲ್ ಮಲ್ಕಾರಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಟಾಗೋರ್ ಸ್ಮಾರಕ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆರ್.ಕೆ. ಅಮರೇಶ್ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಎಚ್.ಎಚ್. ಮ್ಯಾದಾರ್ ವಹಿಸಲಿದ್ದಾರೆ. ಚಿತ್ರಕಲೆ ಪ್ರಾತ್ಯಕ್ಷಿಕೆಯನ್ನು ಭೋಜರಾಜ ಬಡಿಗೇರ್ ನಡೆಸಿಕೊಡಲಿದ್ದಾರೆ. ಈ ವೇಳೆ ಈರಣ್ಣ ಬೆಂಗಾಲಿಯವರ ಕಮರಿದ ಕನಸು ಕೃತಿ ಬಿಡುಗಡೆ ನಡೆಯಲಿದೆ. ವೀರಹನುಮಾನ್ ಮತ್ತು ಹೇಮರೆಡ್ಡಿ, ಚಿದಾನಂದ ಸಾಲಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
ನಾಳೆಯಿಂದ ಬೆಳ್ಳಿಹಬ್ಬ
ರಾಯಚೂರು: ಆರ್‌ಟಿಪಿಎಸ್ ಎಂಪ್ಲಾಯಿಸ್ ಯೂನಿಯನ್ ಬೆಳ್ಳಿಹಬ್ಬ ಸಮಾರಂಭವನ್ನು ಮಾ.18, 19ರಂದು ಶಕ್ತಿನಗರದಲ್ಲಿ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10.30ಕ್ಕೆ ಶಕ್ತಿನಗರದ ಅಂಬೇಡ್ಕರ್ ಭವನದಲ್ಲಿ ನಡೆಯುವ ಸಮಾರಂಭವನ್ನು ಹಿಂದ್ ಮಜ್ದೂರ್ ಕಿಸಾನ್ ಪಂಚಾಯತ್ ಸಂಘಟನೆಯ ಅಧ್ಯಕ್ಷ ಮೈಕೆಲ್ ಫರ್ನಾಂಡಿಸ್ ಉದ್ಘಾಟಿಸಲಿದ್ದಾರೆ. ಸ್ಮರಣ ಸಂಚಿಕೆಯನ್ನು ಕೆಪಿಸಿ ಎಂಡಿ ಎಂ.ಆರ್. ಕಾಂಬ್ಳೆ ಬಿಡುಗಡೆಗೊಳಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಕೆಪಿಸಿ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಷಡಕ್ಷರಿಸ್ವಾಮಿ, ತಾಂತ್ರಿಕ ನಿರ್ದೇಶಕ ಪಿ.ಭಾಸ್ಕರ್, ನಿವೃತ್ತ ತಾಂತ್ರಿಕ ನಿರ್ದೇಶಕ ನಾರಾಯಣ ಪ್ರಸಾದ್ ಮತ್ತಿತರರು ಪಾಲ್ಗೊಳ್ಳುವರು. ನೌಕರರ ಸಂಘದ ಅಧ್ಯಕ್ಷ ಜೆ.ವಿ.ಎಲ್. ರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಆರ್‌ಟಿಪಿಎಸ್ ನೌಕರರ ಸಂಘದ ಮಾಜಿ ಪದಾಧಿಕಾರಿಗಳನ್ನು ಈ ವೇಳೆ ಸನ್ಮಾನಿಸಲಾಗುತ್ತಿದೆ. ಅದೇ ದಿನ ಸಂಜೆ 6.30ಕ್ಕೆ ಖ್ಯಾತ ಹಾಡುಗಾರ್ತಿ ಸಂಗೀತಾ ಕಟ್ಟಿ ಅವರಿಂದ ಸಂಗೀತ ಸಂಜೆ ಆಯೋಜಿಸಲಾಗಿದೆ. ಮಾ.19ರಂದು ಸಂಜೆ 7ಕ್ಕೆ ಸಮಾರೋಪ ಆಯೋಜಿಸಿದ್ದು ಪ್ರಮುಖರು ಪಾಲ್ಗೊಳ್ಳುವರು.
ಜನಪರ ಸಿರಿ ಯಶಸ್ವಿ
ಸಿಂಧನೂರು: ನಗರದ ಆದರ್ಶ ಕಾಲೋನಿಯ ಶಾರದಾ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜನಪರ ಸಿರಿ ವಿಶಿಷ್ಟ ಕಾರ್ಯಕ್ರಮವನ್ನೂ ಎನ್.ಅಮರೇಶ ಉದ್ಘಾಟಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈರಮ್ಮ ಹಿರೇಮಠ, ಕಾಲೇಜಿನ ಪ್ರಾಚಾರ್ಯ ಬಸವರಾಜ ಬಾದರ್ಲಿ, ವೆಂಕನಗೌಡ ವಟಗಲ್, ಎಸ್.ದೇವೇಂದ್ರಗೌಡ, ಉಪನ್ಯಾಸಕರಾದ ಮಂಜುನಾಥ, ಸಂಗೀತಾ, ರಾಜಣ್ಣ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

