ರಾಯಚೂರು

ಉರ್ದು ಶಾಲೆ ತೆರವು ನೋಟಿಸ್‌ಗೆ ಖಂಡನೆ

Published On :

ರಾಯಚೂರು: ನಗರದ ಖೌಮಿಯಾ ಮಸೀದಿಗೆ ಹೊಂದಿಕೊಂಡಿರುವ ನ್ಯೂ ಎಜುಕೇಷನ್ ಸೊಸೈಟಿಯಿಂದ ನಿರ್ವಹಿಸುತ್ತಿರುವ ಉರ್ದು ಶಾಲೆ ತೆರವಿಗೆ ಬೆಂಗಳೂರಿನ ವಕ್ಫ್ ಮಂಡಳಿಯು ನೋಟಿಸ್ ನೀಡಿರುವುದು ಖಂಡನೀಯ ಎಂದು ಮಾಜಿ ಸಂಸದ ಸಮದ್ ಸಿದ್ದಿಖಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಕ್ಫ್ ಮಂಡಳಿಗೆ ಸೇರಿದ ಜಾಗದಲ್ ಉರ್ದು ಶಾಲೆಯನ್ನು ನಡೆಸಲಾಗುತ್ತಿದೆ. ಆದರೆ ಈ ಶಾಲೆಯ ಜಾಗವನ್ನು ಕೂಡಲೇ ತೆರವುಗೊಳಿಸುವಂತೆ ಈಚೆಗೆ ಬೆಂಗಳೂರಿನ ವಕ್ಫ್ ಮಂಡಳಿಯು ನೋಟಿಸ್ ಜಾರಿ ಮಾಡಿದೆ. ಇದರ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಅವರು ಆರೋಪಿಸಿದರು.
ವೈಯಕ್ತಿಕ ದ್ವೇಷ ಸಾಧಿಸುವ ಹುನ್ನಾರ?: ಈಗಾಗಲೇ ಈ ವಿಷಯವು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ನ್ಯಾಯಾಲಯದ ತೀರ್ಪು ಹೊರಬೀಳುವ ಮೊದಲೇ ಬೆಂಗಳೂರಿನ ವಕ್ಫ್ ಮಂಡಳಿನೋಟಿಸ್ ನೀಡಿರುವುದು ವೈಯಕ್ತಿಕ ದ್ವೇಷ ಸಾಧಿಸುವ ಹುನ್ನಾರ ಎಂದು ಸಿದ್ದಿಖಿ ದೂರಿದರು.
 ಶಾಲೆಯಲ್ಲಿ 320ಕ್ಕೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಉರ್ದು ಕಲಿಸಲಾಗುತ್ತಿದೆ.  ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ವಕ್ಫ್ ಮಂಡಳಿ  ಚೆಲ್ಲಾಟವಾಡುತ್ತಿದೆ ಎಂದರು.
ವಿದ್ಯಾಭ್ಯಾಸಕ್ಕೆ ತೊಂದರೆ: ಸದ್ಯ ಉರ್ದು ಶಾಲೆ ತೆರವಿಗೆ ಏಕಾಏಕಿ ಮಂಡಳಿಯಿಂದ ನೋಟಿಸ್ ಜಾರಿ ಮಾಡಿರುವುದರ ಹಿಂದೆ ಶಾಸಕ ಸೈಯದ್ ಯಾಸೀನ್ ಅವರ ಕೈವಾಡವಿದೆ. ಶಾಲೆ ವಿಚಾರದಲ್ಲಿ ಅವರು ಕಳೆದ ಅನೇಕ ವರ್ಷಗಳಿಂದ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ.
ಜಾಗ ತೆರವುಗೊಳಿಸುವ ಹೆಸರಿನಲ್ಲಿ ನೋಟಿಸ್ ಜಾರಿ ಮಾಡಿಸುವ ಕಾರ್ಯ ಮಾಡಿರುವ ಅವರು, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡಿದ್ದಾರೆಂದು ದೂರಿದರು.
ಈಗಿನ ವಕ್ಫ್ ಮಂಡಳಿ ಜಿಲ್ಲಾಧ್ಯಕ್ಷರು ಹಾಗೂ ಶಾಸಕ ಯಾಸೀನ್ ಸೇರಿ ಈ ನೋಟಿಸ್ ನೀಡುವ ಹುನ್ನಾರ ಮಾಡಿದ್ದಾರೆ. ವಕ್ಫ್ ಮಂಡಳಿ ಈ ರೀತಿಯ ಕ್ರಮದ ವಿರುದ್ಧ ತಾವು ನ್ಯಾಯಾಲಯದಲ್ಲಿ ಹೋರಾಡುವುದಾಗಿ ತಿಳಿಸಿದರು.
ಪರೀಕ್ಷೆ ವೇಳೆ ನೋಟಿಸ್: ಉರ್ದು ಶಾಲೆಯಲ್ಲಿ ಸದ್ಯ ಪರೀಕ್ಷೆ ನಡೆಯುತ್ತಿದ್ದು, ಈಗ ನೋಟಿಸ್ ಜಾರಿ ಮಾಡಿದ್ದು ಅಕ್ರಮ. 10 ದಿನದಲ್ಲಿ ಕಟ್ಟಡ ತೆರವುಗೊಳಿಸುವಂತೆ ಸೂಚಿಸಿರುವುದು ಸರಿಯಾದ ಕ್ರಮವಲ್ಲ. ಮಂಡಳಿ ವಿರುದ್ಧ ಕಾನೂನು ಹೋರಾಟ ಈಗ ಅನಿವಾರ್ಯವಾಗಿದೆ ಎಂದು ಮಾಜಿ ಸಂಸದ ಸಮದ್ ಸಿದ್ದಿಖಿ ತಿಳಿಸಿದರು.ಹ್ಯಾರಿಸ್ ಸಿದ್ದಿಖಿ, ಪ್ರಾಚಾರ್ಯ ಅಬ್ದುಲ್ ರಜಾಕ್, ಮೋಸ್ ಹಸನ್ ಮೊಹಸೀನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.