31ನೇ ವಾರ್ಡ್ನಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆ
ಕನ್ನಡಪ್ರಭ ವಾರ್ತೆಸಿಂಧನೂರುಮಾ.23
ನಗರಸಭೆ ನೂತನ ಸದಸ್ಯರಾದ 31ನೇ ವಾರ್ಡಿನ ಶೇಖರಪ್ಪ ಗಿಣಿವಾರ ಹಾಗೂ 29ನೇ ವಾರ್ಡಿನ ಸದಸ್ಯ ಮಹ್ಮದ್ ಶಫಿಯೊದ್ದೀನ್ ಇಬ್ಬರೂ ಸೇರಿ 29, 30 ಮತ್ತು 31ನೇ ವಾರ್ಡಿನ ಸಾರ್ವಜನಿಕರ ಕೆಲಸ ಮಾಡುವ ಉದ್ದೇಶದಿಂದ ಕಾರ್ಯಾಲಯವನ್ನು ಪ್ರಾರಂಭಿಸಿದ್ದು, ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಉದ್ಘಾಟಿಸಿದರು.
ನಂತರ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಣ್ಣಪುಟ್ಟ ಕೆಲಸಗಳನ್ನು ನಗರಸಭೆ ಸದಸ್ಯರು ಮಾಡಿಸುತ್ತಾರೆ. ಎರಡು ತಿಂಗಳವರೆಗೆ ನೂತನ ಆಡಳಿತ ಮಂಡಳಿ ಜಾರಿಗೆ ಬರುವ ಸಂಭವಗಳಿಲ್ಲ. ಕಾರಣ ಸಾರ್ವಜನಿಕರು ಸಹಕರಿಸಬೇಕು. ಮುಂಬರುವ ವಿಧಾನಸಭಾ ಚುನಾವಣೆಗೆ ನಗರಸಭೆ ಅಭ್ಯರ್ಥಿಗಳನ್ನು ಬೆಂಬಲಿಸಿದಂತೆ ತಮ್ಮನ್ನು ಸಹ ಬೆಂಬಲಿಸುವಂತೆ ಮನವಿ ಮಾಡಿದರು.
ಸದಸ್ಯರಾದ ಶೇಖರಪ್ಪ ಗಿಣಿವಾರ, ಶಫಿಯುದ್ದೀನ್ ನವಾಬ್ಸಾಬ, ಪ್ರಭು ರಾಜ, ಜಾಫರ್ ಜಾಗೀರದಾರ, ಜಿಪಂ ಸದಸ್ಯರಾದ ಚಂದುಸಾಬ ಮುಳ್ಳೂರು, ಶಿವನಗೌಡ ಎಲೆಕೂಡ್ಲಗಿ, ಮುಖಂಡರಾದ ಅಲ್ಲಮಪ್ರಭು, ಯಮನಪ್ಪ ಮಲ್ಲಾಪುರ, ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ ಇದ್ದರು.
ಇದೇ ವೇಳೆ ವಾರ್ಡ್ನ ಮುಖಂಡರಾದ ರಸೂಲಮ್ಮ, ಬಿ.ಉಮಾ ಅವರು ಕುಡಿವ ನೀರು, ಮಹಿಳಾ ಶೌಚಾಲಯ, ಒಳರಸ್ತೆಗಳನ್ನು ಸುಧಾರಿಸಬೇಕು. ಪ್ರಥಮವಾಗಿ ಕುಡಿವ ನೀರಿಗೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.
ಪ್ರಚಾರ ಆರಂಭ: ಸುದ್ದಿಗಾರರೊಂದಿಗೆ ಮಾತನಾಡಿದ ಚಂದುಸಾಬ ಮುಳ್ಳೂರು, ವಿಧಾನಸಭಾ ಚುನಾವಣೆ ಪ್ರಚಾರವನ್ನು ಇಂದಿನಿಂದಲೇ ಆರಂಭಿಸಿದ್ದು, ಗುಡದೂರು ಜಿಪಂ ಕ್ಷೇತ್ರದ ಬೂತಲದಿನ್ನಿ, ಕಲ್ಲೂರು, ಮುಳ್ಳೂರು, ಮುಳ್ಳೂರುಕ್ಯಾಂಪ್, ರಾಮರೆಡ್ಡಿಕ್ಯಾಂಪ್, ಕುನ್ನಟಗಿ ಕ್ಯಾಂಪ್, ಕುನ್ನಟಗಿ, ಪೈಕ್ಯಾಂಪ್ಗಳಲ್ಲಿ ಪ್ರಚಾರ ಕೈಗೊಂಡಿದ್ದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

