ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ
ಕನ್ನಡಪ್ರಭ ವಾರ್ತೆ,ರಾಯಚೂರು,ಮಾ.26
ಪ್ರತಿ ಮನುಷ್ಯನ ಜೀವನದಲ್ಲಿ ದೈವತ್ವವನ್ನು ಪಡೆಯಲು ತತ್ವ ಪದಗಳು ಹಾಗೂ ದೇವರ ಹಾಡುಗಳನ್ನು ಆಲಿಸುವುದು ಅವಶ್ಯ. ಸನ್ಮಾರ್ಗದಲ್ಲಿ ಸಾಗಲು ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಚಿತ್ರದುರ್ಗದ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಸಲಹೆ ನೀಡಿದರು.
ಅವರು ಇತ್ತೀಚೆಗೆ ಜಿಲ್ಲಾ ಉಪ್ಪಾರ ಸಮಾಜದಿಂದ ನಗರದ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಬಸನಗೌಡ ಬುರಾನಪುರ ಅವರು ರಚಿಸಿದ ಕೈವಲ್ಯಯಡಿಮುರಿ ಕಲ್ಪವಲ್ಲರಿ ತತ್ವ ಪದಗಳ ಸಿಡಿ ಬಿಡುಗಡೆಗೊಳಿಸಿ ಮಾತನಾಡಿದರು.
ಮಾನವ ಹುಟ್ಟಿನಿಂದಲೇ ಜ್ಞಾನಿಯಾಗಲಾರ. ಜೀವನದಲ್ಲಿ ಪ್ರಗತಿ ಸಾಧಿಸಿದಂತೆ ಮಾನವ ಜ್ಞಾನ ಪಡೆಯುತ್ತಲೇ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯುತ್ತಾನೆ. ಜ್ಞಾನದ ಬಲದಿಂದಲೇ ಮಾನವನ ಸರ್ವ ಪ್ರಗತಿ ಸಾಧ್ಯ ಎಂದ ಅವರು, ಜೀವನದಲ್ಲಿ ಅನುಭವದಿಂದ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಹೇಳಿದರು.
ಗುಲ್ಬರ್ಗ ವಿವಿ ಹಣಕಾಸು ನಿಯಂತ್ರಕ ಡಾ. ಬಿ.ಎಂ. ಕನ್ನಳ್ಳಿ ಮಾತನಾಡಿ, ಉಪ್ಪಾರ ಸಮಾಜ ಏಳಿಗೆಗೆ ಪಾಲಕರು ತಮ್ಮ ಮಕ್ಕಳಿಗೆ ತಪ್ಪದೇ ಶಿಕ್ಷಣ ಕೊಡಿಸುವಂತೆ ಮನವಿ ಮಾಡಿದರು.
ಸಮಾರಂಭದ ಸಾನ್ನಿಧ್ಯವನ್ನು ಉಪಾಸಿ ಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ಸಮಾಜದ ಮುಖಂಡ ವೈ.ಶ್ರೀಕಾಂತ ವಕೀಲರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗಿರೆಣ್ಣ, ಜೂಕೂರು ವೀರಣ್ಣ, ವರದರಾಜ್, ವೆಂಕಟೇಶ್, ಗದಾರ್ ನರಸರೆಡ್ಡಿ, ವೆಂಕಟಗಿರಿಯಪ್ಪ, ಅಯ್ಯಣ್ಣ ಹಾಗೂ ಉಪನ್ಯಾಸಕ ಬಿ.ಜಿ. ಹುಲಿ ಇದ್ದರು.
ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಾಶ್ವತಯ್ಯ ಸ್ವಾಮಿ ಮುಕ್ಕುಂದಿಮಠ, ಅಮರೇಶ್ ಅದೋನಿ, ಶರಣಪ್ಪ ಗೋನಾಳ, ಪ್ರತಿಭಾ ಗೋನಾಳ, ಡಾ. ಬಿ.ಎಂ. ಕನ್ನಳ್ಳಿ ಅವರನ್ನು ಸನ್ಮಾನಿಸಲಾಯಿತು.
ಉಪ್ಪಾರ ಸಮಾಜದ ಮುಖಂಡರಾದ ಮಿರ್ಜಾಪುರ ಪಾಗುಂಟಪ್ಪ, ವೆಂಕೋಬ, ವೀರೇಶ್, ದೇವಣ್ಣ ನವಲಕಲ್, ರಾಮಣ್ಣ ಜಾಲಹಳ್ಳಿ, ಮೌನೇಶ್, ಚಂದ್ರಮೌಳಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

