ರಾಯಚೂರು

'ಮಹಿಳೆಯರು ವೈಚಾರಿಕತೆ ಬೆಳೆಸಿಕೊಳ್ಳಲಿ'

Published On :

ಸಿಂಧನೂರು: ಮಹಿಳೆಯರನ್ನು ಗೌರವದಿಂದ ಕಾಣಬೇಕು. ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಸೇವೆ ಸಲ್ಲಿಸುತ್ತಾ ಕೌಟುಂಬಿಕ ಜೀವನದ ಜೊತೆಗೆ ಸಮಾಜದ ಪರಿವರ್ತನೆಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾಳೆ. ಸಮಾಜದಲ್ಲಿ ಮೇಲು ಕೀಳೆನ್ನದೆ ಎಲ್ಲರೂ ಸಮಾನರಾಗಿ ಭಗವಂತನ ಪ್ರೀತಿಯ ಪಾತ್ರಕ್ಕೆ ಕಾರಣೀಕರ್ತರಾಗಬೇಕು. ಸಮಾಜದಲ್ಲಿಯ ಅನಿಷ್ಟ ಪದ್ಧತಿಗಳು, ಮೂಢ ನಂಬಿಕೆಗಳಿಂದ ಮಹಿಳೆಯರು ಹೊರಬಂದು ವೈಚಾರಿಕತೆ ಬೆಳೆಸಿಕೊಳ್ಳಬೇಕೆಂದು ಸಿಂಧನೂರಿನ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬ್ರಹ್ಮಕುಮಾರಿ ಪಾರ್ವತಿ ಅಕ್ಕ ಹೇಳಿದರು. ತಾಲೂಕಿನ ಗೋರೆಬಾಳ ಗ್ರಾಮದಲ್ಲಿ ಭಾರತ ರಾಷ್ಟ್ರೀಯ ಮಹಿಳಾ ಒಕ್ಕೂಟ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಜಿಲ್ಲಾಮಟ್ಟದ ಮಹಿಳಾ ಸಮಾವೇಶ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಮಹಿಳೆ ಮನೆ ಬೆಳಗಿಸುವ ಮಹಾಲಕ್ಷ್ಮಿ ಅನ್ನಪೂರ್ಣೆಶ್ವರಿ. ಅವಳನ್ನು ಎಲ್ಲರೂ ಪ್ರೀತಿ ವಿಶ್ವಾಸದಿಂದ ಕಾಣಬೇಕು ಎಂದು ಸಲಹೆ ನೀಡಿದರು. ಸನ್ಮಾನಿತರ ಪರವಾಗಿ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಹ್ಲಾದಗುಡಿ ಮಾತನಾಡಿದರು. ಭಾರತ ರಾಷ್ಟ್ರೀಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಎಮ್.ಸಿ.ಸೀತಮ್ಮ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ರಮಾದೇವಿ ಶಂಭೋಜಿ, ಉಪನ್ಯಾಸಕಿ ವಿಜಯಲಕ್ಷ್ಮೀ ಗುರಿಕಾರ, ವೆಂಕಮ್ಮ ಗೋರೆಬಾಳ, ಡಾ.ಶಾಂತಲಾ ಮುಕ್ಕುಂದಿಮಠ, ಬ್ರಹ್ಮಕುಮಾರಿ ಸೀಮಾ ಅಕ್ಕ, ಸಿಂಧೂರಬಿಂಬ ಪತ್ರಿಕೆಯ ಸಂಪಾದಕ ಎಮ್.ವೀರಭದ್ರಪ್ಪ, ನಿವೃತ್ತ ಮುಖ್ಯಗುರು ಹೆಚ್.ಧರಯ್ಯ, ಮಲ್ಲನಗೌಡ ಗೋರೆಬಾಳ, ರಾಮಣ್ಣ ಸಾಸಲಮರಿಕ್ಯಾಂಪ್, ಸಮಾಜ ಸೇವಕ ಅಜೀತ್ ಓಸ್ತವಾಲ್, ಹುಲಿಗೇಶ ಹಂಚಿನಾಳ, ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ ಶಾಂತಾ ಎಸ್.ಗೋರೆಬಾಳ, ರಾಜ್ಯಯುವ ಪ್ರಶಸ್ತಿ ವಿಜೇತ ವೀರೇಶ ಯರದಿಹಾಳ, ಭರತನಾಟ್ಯ ಕಲಾವಿದೆ ಕು.ಮಾನ್ಯ ಹೂಗಾರ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಕೆ.ಬಾಳಪ್ಪ ಸ್ವಾಗತಿಸಿದರು. ಪತ್ರಕರ್ತೆ ಶಿವಲೀಲಾ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.