ಅಲೆಮಾರಿಗಳ ಅರಿವಿನ ಶಿಬಿರಕ್ಕೆ ಚಾಲನೆ
ರಾಯಚೂರು: ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯಿಂದ ಈಚೆಗೆ ನಗರದಲ್ಲಿ ಅಲೆಮಾರಿ ಜನಾಂಗದವರಿಗೆ ನಾಯಕತ್ವ ಮತ್ತು ಮೂಲಸೌಲಭ್ಯಗಳ ಅರಿವಿನ ಶಿಬಿರವನ್ನು ಆಯೋಜಿಸಲಾಗಿತ್ತು.
ರಾಜ್ಯದ ಅಲೆಮಾರಿ ಜನಾಂಗ ಸಂಘಟನೆಯ ಮಹಿಳಾ ಸಂಚಾಲಕಿ ರಾಮಕ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ರಾಜ್ಯದಲ್ಲಿ 60 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಅಲೆಮಾರಿಗಳಿದ್ದು ಅವರಲ್ಲಿ ಕೇವಲ 20 ಲಕ್ಷ ಜನರಿಗೆ ಮತದಾನದ ಹಕ್ಕು ಲಭ್ಯವಾಗಿದೆ. ಸರ್ಕಾರಗಳು ಅಲೆಮಾರಿಗಳನ್ನು ಮತ ಬ್ಯಾಂಕ್ ಆಗಿ ಬಳಸಿ ನಂತರದಲ್ಲಿ ನಿರ್ಲಕ್ಷಿಸಿವೆ ಎಂದು ಆರೋಪಿಸಿದರು.
ಪಕ್ಷಗಳ ಗಮನ ಸೆಳೆಯಬೇಕಿದೆ: ಅಲೆಮಾರಿಗಳಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ಸರ್ಕಾರಗಳು ಅಸಡ್ಡೆ ತೋರಿವೆ. ಈ ಹಿನ್ನೆಲೆಯಲ್ಲಿ 45 ಅಲೆಮಾರಿ ಸಮುದಾಯದ ಜನತೆ ಒಗ್ಗೂಡಿ ಅಲೆಮಾರಿ ಶಕ್ತಿಯನ್ನು ರಾಜಕೀಯ ಪಕ್ಷಗಳಿಗೆ ಮತ್ತು ಸರ್ಕಾರಗಳ ಗಮನ ಸೆಳೆಯುವ ಕಾರ್ಯ ಮಾಡಬೇಕಿದೆ ಎಂದು ಹೇಳಿದರು.
ಅಲೆಮಾರಿ ಜನಾಂಗದವರು ನಗರ ಪ್ರದೇಶದಲ್ಲಿ ಬದುಕು ಕಟ್ಟಿಕೊಳ್ಳುವುದು ಇಂದಿನ ದಿನಮಾನದಲ್ಲಿ ಕಷ್ಟ ಸಾಧ್ಯ. ಸಮಾಜದಲ್ಲಿ ತೀರಾ ಹಿಂದುಳಿದ ಸಮುದಾಯಕ್ಕೆ ಸೌಲಭ್ಯಗಳ ಬಗ್ಗೆ ಅರಿವಿಲ್ಲ. ಅಧಿಕಾರಿಗಳೂ ಸಹ ಜನತೆಯೆಡೆಗೆ ಗಮನಹರಿಸುತ್ತಿಲ್ಲ. ನಿವೇಶನ ನೀಡದೇ ವಂಚಿಸಲಾಗುತ್ತಿದೆ ಎಂದು ದೂರಿದರು.
ಕಾರ್ಯಕ್ರಮದಲ್ಲಿ ಬುಡುಗ ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಶಿವರಾಜ್ ರುದ್ರಾಕ್ಷಿ, ಸಮಾರಂಭದ ಅಧ್ಯಕ್ಷತೆಯನ್ನು ತಾಯಣ್ಣ ಹೊಸೂರು ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ನಗರಸಭೆ ಮಾಜಿ ಸದಸ್ಯ ಭೀಮಣ್ಣ, ಅಲೆಮಾರಿ ದರವೇಶಿ ಜನಾಂಗದ ಅಧ್ಯಕ್ಷ ಶೇಕ್ಷಾವಲಿ, ಸೂಗೂರುನಾಥ, ಅಮರನಾಥ್, ಮೊಹಿನುದ್ದೀನ್, ಮರ್ದಾನ್ ಅಲಿ, ವೇದಿಕೆಯ ಜನಾರ್ದನ ಹಳ್ಳಿಬೆಂಚಿ, ಚಂದ್ರಶೇಖರ್ ಎಕ್ಲಾಸಪುರ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

