ರಾಯಚೂರು

ಅಕ್ಷರಲೋಕದ ನಕ್ಷತ್ರ ಪ್ರಶಸ್ತಿ ಪ್ರದಾನ ಇಂದು

Published On :

ಗುರುಮಠಕಲ್: ಇಲ್ಲಿಯ ಸಿರಿಗನ್ನಡ ಪ್ರತಿಷ್ಠಾನ ಕೇಂದ್ರ ಸಂಘವು ರಾಜ್ಯಮಟ್ಟದಲ್ಲಿ 2012-13ನೇ ಸಾಲಿಗೆ ದಿ. ಕಿಶನ್ರಾವ್ ಮಹೇಂದ್ರಕರ ಸ್ಮರಣಾರ್ಥವಾಗಿ ಕೊಡಮಾಡುವ ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿ ಪ್ರದಾನ ಸಮಾರಂಭ ಮಾ.29 ರಂದು ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂಜೆ 6ಕ್ಕೆ ನಡೆಯಲಿದೆ.
ಕಾರ್ಯಕ್ರಮವನ್ನು ಗುಲ್ಬರ್ಗ ವಿವಿ ಕುಲಪತಿ ಪುಟ್ಟಯ್ಯ ಉದ್ಘಾಟಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಜಿ.ಮಜಹರ್ ಹುಸೇನ್, ಪಪಂ ಮಾಜಿ ಅಧ್ಯಕ್ಷ ಭೀಮರಡ್ಡಿ ಉಟ್ಕೂರ್, ಗುಂಡಣ್ಣ ಡಿಗ್ಗಿ ಪಾಲ್ಗೊಳ್ಳಲಿದ್ದಾರೆ. ವಸಂತರಾವ್ ಮಹೇಂದ್ರಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಖಾಸಮಠದ ಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ತುಮಕೂರು ಜಿಲ್ಲೆಯ ವಿಜಯಾ ಮೋಹನ್ ಅವರ ಕಣ್ಣಿ ಕಥಾ ಸಂಕಲನ, ಸೇಡಂನ ಬಿದರಿ ಚಂದ್ರಕಲಾ ಅವರ ಬೆಳ್ಳಿ ಚುಕ್ಕಿ ಜನಪದ ಗೀತೆಗಳು ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರಿಗೆ ತಲಾ 5 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುತ್ತಿದೆ.
ದಶಮಾನೋತ್ಸವದ ಗೌರವ ಪ್ರಶಸ್ತಿಗೆ ಗುಲ್ಬರ್ಗದ ಎ.ಕೆ. ರಾಮೇಶ್ವರ ಅವರ ಬಿಚ್ಚಿ ಮಾರಯಾವ ಬಿಳಿ ಹೂವು ಜನಪದ ಗೀತೆಗಳ ಸಂಕಲನ, ಬಳ್ಳಾರಿ ಜಿಲ್ಲೆಯ ಶಿವರಾಮ ಆಸುಂಡಿಯವರ ತಳ ಸಂಸ್ಕೃತಿ ಸಂಶೋಧನಾ ಕೃತಿಗೆ, ಶಹಾಪುರದ ಶಿವರಂಜನ್ ಸತ್ಯಂಪೇಟೆ ಅವರ ಒಂದು ಮುಂಜಾವು ಕೃತಿಗೆ, ಕೊಪ್ಪಳದ ಜಿ.ಎಚ್.ಪಾಟೀಲ್ರ ವಚನ ಸಿರಿಗೆ, ಶಿವಮೊಗ್ಗದ ಲಕ್ಷ್ಮಣ ಕೊಡಸೆ ಅವರ ಪಾಡು ಕಾದಂಬರಿ, ಯಾದಗಿರಿಯ ಶ್ರೀಶೈಲ್ ಪೂಜಾರಿ ಅವರ ನಿತ್ಯ ಸತ್ಯ ಹನಿಗವನಗಳ ಸಂಕಲನ, ಗುಲ್ಬರ್ಗದ ಡಾ.ಗುಬ್ಬಿ ಅವರ ಚೈತನ್ಯ ಕವನ ಸಂಕಲನ, ಗದಗ ಜಿಲ್ಲೆಯ ಲಕ್ಷ್ಮೀ ಶಂಕರ ಜೋಶಿ ಅವರ ಗುಮ್ಮನ ಕರೆಯದಿರೆ ಲಲಿತ ಪ್ರಬಂಧಗಳ ಕೃತಿಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.