ಶಿವನಗೌಡ ಅಧಿಕಾರದಾಸೆಗೆ ವಂಚನೆ: ನಾಯಕ ಆರೋಪ
ಕನ್ನಡಪ್ರಭ ವಾರ್ತೆ, ದೇವದುರ್ಗ, ಮಾ.31
ಅಧಿಕಾರ, ಹಣಕ್ಕಾಗಿ ತಾಲೂಕಿನ ಮತದಾರರಿಗೆ ಮೋಸ ಮಾಡಿ ಶಾಸಕ ಸ್ಥಾನ ಮಾರಿಕೊಂಡವರಿಗೆ ಕ್ಷೇತ್ರದ ಮತದಾರರು ಈ ಭಾರಿ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕೆಂದು ಕಾಂಗ್ರೆಸ್ ಯುವ ಮುಖಂಡ ಬಿ.ವಿ. ನಾಯಕ ಕರೆ ನೀಡಿದರು.
ಅವರು ಭಾನುವಾರ ಪಟ್ಟಣದ ಅಬು ಮೊಹಲ್ಲಾದಲ್ಲಿ ಏರ್ಪಡಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಹಿಂದೆ ಶಾಸಕ ಕೆ. ಶಿವನಗೌಡ ನಾಯಕ ಕೇವಲ 36 ದಿನಗಳಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದು, ಮುಂದೆ ಕೂಡ ಅಧಿಕಾರ ಮತ್ತು ಹಣಕ್ಕಾಗಿ ಅವರು ಯಾವ ಪಕ್ಷಕ್ಕಾದರೂ ಸೇರಲಿದ್ದಾರೆಂದು ಲೇವಡಿ ಮಾಡಿದರು.
ನಾಯಕ ವೈಯಕ್ತಿಕ ಅಭಿವೃದ್ಧಿ: ಕಳೆದ ನಾಲ್ಕೂವರೆ ವರ್ಷದಲ್ಲಿ ದೇವದುರ್ಗ ಕ್ಷೇತ್ರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಅಪಾರ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಶಿವನಗೌಡ ನಾಯಕ, ತಾಲೂಕಿನ ಅಭಿವೃದ್ಧಿಗಿಂತ ವೈಯಕ್ತಿಕ ಅಭಿವೃದ್ಧಿಯನ್ನು ಹೆಚ್ಚು ಸಾಧಿಸಿದ್ದಾರೆಂದು ಅವರು ಟೀಕಿಸಿದರು.
ಅಧಿಕಾರ ದುರ್ಬಳಕೆ ಮಾಡಿಕೊಂಡು ಅಮಾಯಕರ ಮೇಲೆ ಸುಳ್ಳು ಕೇಸ್ಗಳನ್ನು ಹಾಕಿಸಿರುವ ಶಾಸಕ ಶಿವನಗೌಡ ನಾಯಕ ದೌರ್ಜನ್ಯ ಎಸಗುತ್ತಿದ್ದಾರೆ. ಭ್ರಷ್ಟಾಚಾರಿ, ಜನದ್ರೋಹಿಗೆ ಮತದಾರರು ತಕ್ಕಪಾಠ ಕಲಿಸಬೇಕಿದೆ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಸೇರ್ಪಡೆ: ಈ ಸಂದರ್ಭ ಮೊಹಲ್ಲಾದ ಪಾಟೀಲ್ ಓಣಿ, ನೇತಾಜಿ ಓಣಿಯ ಅನೇಕ ಬಿಜೆಪಿ ಕಾರ್ಯಕರ್ತರು ಮತ್ತು ಜೆಡಿಎಸ್ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ ಸೇರಿದರು.
ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಯಕ್ಬಾಲ್ ಸಾಬ್ ಹೌದುಡಿ, ಮಾಜಿ ತಾಲೂಕು ಯುವ ಅಧ್ಯಕ್ಷ ಬಾಪೂಗೌಡ ಪಾಟೀಲ್, ಅಮ್ಜದ್ ಅಲಿ, ನೂತನವಾಗಿ ಪಕ್ಷ ಸೇರ್ಪಡೆಗೊಂಡ ಜಿ. ನಾಗರಾಜ ನಾಯಕ ಮಾತನಾಡಿದರು.
ಪುರಸಭೆ ಮಾಜಿ ಅಧ್ಯಕ್ಷರಾದ ಚಂದಪ್ಪ ಅಕ್ಕರಕಿ, ರಂಗಪ್ಪ ಗೋಸಲ, ಪುರಸಭೆ ಮಾಜಿ ಸದಸ್ಯರಾದ ಸಿದ್ದಪ್ಪ ಮಜ್ಗಿ, ಅನ್ವರಸಾಬ ದುಬೈ, ಬಾಬಾ ಸೈಕಲ್, ಮಹ್ಮದ ರಫೀ, ಲೋಕೇಶ ಜೋಗಿ, ಮಹಿಬೂಬ್, ಕರೀಂ ಸೇಠ್, ಅಕ್ಬರ ಸೇಠ್, ಶಾಂತಪ್ಪ ಸೇರಿ ಯುವ ಮುಖಂಡರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

