ರಾಯಚೂರು

ಚರ್ಮವಾದ್ಯ ತಯಾರಿಕೆ, ತರಬೇತಿಗೆ ಮಾಹಿತಿ ಸಂಗ್ರಹ

Published On :

ಬೀದರ್: ಇತ್ತೀಚೆಗೆ ಕರ್ನಾಟಕ ಜನಪದ ಸಂಗೀತ ಕ್ಷೇತ್ರದಲ್ಲಿ ಕಲಾವಿದರು ಮೂಲ ಪರಂಪರೆಯ ಚರ್ಮವಾದ್ಯಗಳನ್ನು ಬಿಟ್ಟು ಪ್ಲಾಸ್ಟಿಕ್, ಫೈಬರ್ ವಾದ್ಯಗಳನ್ನು ಬಳಸುತ್ತಿರುವುದು ಕಂಡುಬರುತ್ತಿದೆ. ಪರಂಪರೆಯ ಮೂಲ ಚರ್ಮವಾದ್ಯಗಳನ್ನು ತಯಾರಿಸಿಕೊಂಡು ಬಾರಿಸುವ ನಾದಕ್ಕೂ ಫೈಬರ್ ವಾದ್ಯಗಳ ನಾದಕ್ಕೂ ಬಹಳಷ್ಟು ವ್ಯತ್ಯಾಸವಿರುತ್ತದೆ.
ಯುವಜನರಿಗೆ ಈ ವಾದ್ಯಗಳ ತಯಾರಿಕೆಯನ್ನು ತಿಳಿಸಿಕೊಡಲು ಕರ್ನಾಟಕ ಜನಪದ ಅಕಾಡೆಮಿಯ ರಾಜ್ಯಮಟ್ಟದ ಚರ್ಮವಾದ್ಯ ತಯಾರಿಕಾ ಕಮ್ಮಟ, ರಾಜ್ಯಮಟ್ಟದ ಚರ್ಮವಾದ್ಯ ಸಮ್ಮೇಳನ ಮತ್ತು ವಿದ್ವಾಂಸರಿಂದ ಜನಪದ ಚರ್ಮವಾದ್ಯಗಳ ಕುರಿತ ವಿಚಾರ ಸಂಕಿರಣ ಆಯೋಜಿಸಲು ತೀರ್ಮಾನಿಸಿದೆ.  ಚರ್ಮವಾದ್ಯ ಮೇಳಗಳ ಮುಖ್ಯಸ್ಥರು ತಮ್ಮ ಸಂಪೂರ್ಣ ವಿಳಾಸದೊಂದಿಗೆ ಸಂಪೂರ್ಣ ಮಾಹಿತಿಯನ್ನು ಮೇ 30ರ ಒಳಗೆ ರಿಜಿಸ್ಟರ್ ಕರ್ನಾಟಕ ಜನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು ಇಲ್ಲಿಗೆ ಕಳುಹಿಸಿಕೊಡುವಂತೆ ಅಕಾಡೆಮಿಯ ರಿಜಿಸ್ಟರ್ ತಿಳಿಸಿದ್ದಾರೆ.
ವಾದ್ಯಗಳ ವಿವರ: ಹಲಿಗೆ ವಾದನ, ಢಮರುಗವಾದನ (ಗೊರವರಮೇಳ), ಡೊಳ್ಳಿನ ಕೈ ಪೆಟ್ಟು, ನಗಾರಿ ವಾದ್ಯ, ಗುಮಟೆ ವಾದ್ಯ, ಚಂಡೆ ವಾದ್ಯ, ಸೂರ್ಯ ವಾದ್ಯ, ಕರಡಿ ಮಜಲು, ಡೊಳ್ಳುವಾದ, ತಮಟೆ ವಾದನ, ಜಗ್ಗಲಿಗೆ ವಾದನ, ಮದ್ದಲೆ ವಾದನ, ಡಪ್ಪುವಾದನ (ಗೀಗಿ ಮೇಳ), ಮುದ್ದಲೆ ವಾದನ, ತಾರಸಿ ವಾದ್ಯ, ಚಂದ್ರ ವಾದ್ಯ, ಚೌಡಿಕೆ ವಾದ್ಯ, ಉರುಮೆ (ಅರೆವಾದ್ಯ), ಚಿಟ್ ಹಲಗೆ ವಾದನ, ಕೋಣಿಮಿವಾದ್ಯ, ದುಡಿ ವಾದ್ಯ, ಕಂಜರಿ ವಾದನ, ತಾಸೇ ವಾದನ, ಸಂಪ್ರದಾನಿ ವಾದನ, ರಣಹಲಿಗೆ ವಾದನ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.