ಬಸವ ಜಯಂತಿಗೆ ನಿರ್ಧಾರ
ಕ.ಪ್ರ. ವಾರ್ತೆ , ಬೀದರ್ , ಮೇ 4
ವಿಶ್ವಗುರು ಬಸವಣ್ಣ ಜಯಂತಿ ಉತ್ಸವವನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.
ನಗರದ ಗಾಂಧಿ ಗಂಜ್ನಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಶಿವಶರಣಪ್ಪ ವಾಲಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಕಾಶೆಪ್ಪ ಧನ್ನೂರ, ಅಧ್ಯಕ್ಷರಾಗಿ ಗುರುನಾಥ ಕೊಳ್ಳೂರ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮಹಿಳಾ ಅಧ್ಯಕ್ಷರಾಗಿ ಶಕುಂತಲಾ ವಾಲಿ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ ಚನಶೆಟ್ಟಿ, ಕೋಶಾಧ್ಯಕ್ಷ ಜಯರಾಜ ಖಂಡ್ರೆ, ಮೆರವಣಿಗೆ ಸಮಿತಿ ಅಧ್ಯಕ್ಷ ಡಾ. ರಜನೀಶ ವಾಲಿ, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಸಿದ್ರಾಮಯ್ಯ ಸ್ವಾಮಿ ಆಯ್ಕೆ ಮಾಡಲಾಯಿತು.
ಈ ವರ್ಷದ ಬಸವಜಯಂತಿಯನ್ನು ಅರ್ಥಪೂರ್ಣವಾಗಿ ವಚನ ಸಂಗೀತ್ಸೊವ, ನಾಟಕೋತ್ಸವ ಹಾಗೂ ಉಪನ್ಯಾಸ ಕಾರ್ಯಕ್ರಮಗಳು ಏರ್ಪಡಿಸಲು ಅನೇಕ ಗಣ್ಯರು ಸಲಹೆ ಸೂಚನೆ ನೀಡಿದರು. ಮುಂದಿನ ಸಭೆಯಲ್ಲಿ ವಿವಿಧ ಸಮಿತಿ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ನಿರ್ಧರಿಸಲಾಯಿತು. ಸಭೆಯಲ್ಲಿ ಬಿ.ಜಿ. ಶೆಟಕಾರ, ಚಂದ್ರಶೇಖರ ಪಾಟೀಲ್ ಗಾದಗಿ, ಸೂರ್ಯಕಾಂತ ಶೆಟಕಾರ, ಶರಣಪ್ಪ ಮಿಠಾರೆ, ದೀಪಕ ವಾಲಿ, ಪ್ರಕಾಶ ಮಠಪತಿ, ರಾಜಶೇಖರ್ ಮಠ, ಶಶಿಕುಮಾರ ಪಾಟೀಲ್ ಸಂಗಮ, ಆನಂದ ದೇವಪ್ಪ, ಬಸವರಾಜ ಧನ್ನೂರ, ಮಲ್ಲಿಕಾರ್ಜುನ್ ಮೊಳಕೇರಿ, ಭರತ ಶೆಟಕಾರ, ವಿಶ್ವನಾಥ ಕಾಜಿ, ಪ್ರಕಾಶ ಸಾವಳಗಿ ಅಲ್ಲದೇ ನೂರಾರು ಬಸವ ಭಕ್ತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

