ರಾಯಚೂರು

ಬಿಸಿಲ ನಾಡಿನ ಮತಗಟ್ಟೆಯಲ್ಲಿ ಫ್ಯಾನ್‌ಗೆ ಹೊದಿಕೆ; ಪರೇಶಾನ್

Published On :

ಕ.ಪ್ರ. ವಾರ್ತೆ, ರಾಯಚೂರು, ಮೇ 5
ಒಂದೆಡೆ ಬಿರುಬಿಸಿಲ ತಾಪ. ಮತ್ತೊಂದೆಡೆ ರಾಜಕೀಯ ನಾಯಕರ ಜಿದ್ದಾಜಿದ್ದಿ. ಸ್ವಲ್ಪ ಮೈಮರೆತರೆ ನೌಕರಿಗೆ ಕಂಟಕ ಎಂಬ ಭಯದ ವಾತಾವರಣ. ಪರಿಣಾಮ ಚುನಾವಣೆಯ ಕಾರ್ಯದಲ್ಲಿ ಪಾಲ್ಗೊಂಡ ಸಿಬ್ಬಂದಿ ಮತಗಟ್ಟೆಯಲ್ಲಿದ್ದ ಸೀಲಿಂಗ್ ಫ್ಯಾನ್‌ಗಳನ್ನೂ ಬಳಸದೇ ಉಸ್ಸಪ್ಪಾ, ಈ ನೌಕರಿ ಶತ್ರುವಿಗೂ ಬೇಡ ಎಂದು ಹೇಳಿದ ಘಟನೆ ಭಾನುವಾರ ನಡೆಯಿತು.
ತಾಲೂಕಿನ ಮರ್ಚೆಡ್ ಗ್ರಾಮದ ಮತಗಟ್ಟೆಯಲ್ಲಿ ಎರಡು ಸೀಲಿಂಗ್ ಫ್ಯಾನ್‌ಗಳಿದ್ದರೂ ಮತಗಟ್ಟೆಯಲ್ಲಿದ್ದ ಸಿಬ್ಬಂದಿ ಬೆ.  7ರಿಂದ ಸಂಜೆ ಜಿಲ್ಲಾ ಕೇಂದ್ರಕ್ಕೆ ಮರಳುವರೆಗೆ ಬೆವರಿಳಿಸಿಕೊಂಡೇ ಚುನಾವಣೆ ಕಾರ್ಯ ನಿರ್ವಹಿಸಿದರು.
ಆಯೋಗದ ಆದೇಶ ಗೊತ್ತಿಲ್ಲವೇ?: ಬಿಎಸ್ಸಾರ್ ಕಾಂಗ್ರೆಸ್ ಚಿಹ್ನೆಯಾಗಿರುವ ಸೀಲಿಂಗ್ ಫ್ಯಾನ್ ಮತಗಟ್ಟೆ ಕೇಂದ್ರದಲ್ಲಿ ಬಳಕೆ ಮಾಡುವಂತಿಲ್ಲ ಎಂಬ ಯಾರದೋ ಮಾತಿಗೆ ಸಿಲುಕಿದ ಮತಗಟ್ಟೆ ಸಿಬ್ಬಂದಿ ದಿನವಿಡೀ ಪ್ರಯಾಸ ಪಡುತ್ತಲೇ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು ಕಂಡುಬಂದಿತು.
ಮತಗಟ್ಟೆಯಲ್ಲಿದ್ದ ಎರಡೂ ಫ್ಯಾನ್‌ಗಳಿಗೆ ಚಾದರ ಹೊದಿಸಿ ಮುಚ್ಚಿದ್ದು ಕಂಡುಬಂದಿತು. ಚುನಾವಣೆ ಆಯೋಗವೇ ಫ್ಯಾನ್ ಬಳಸಬಹುದೆಂದು ತಿಳಿಸಿದ್ದರೂ, ಸಿಬ್ಬಂದಿ ಯಾರಾದರೂ ಫ್ಯಾನ್ ಬಳಸಿದ ಬಗ್ಗೆ ದೂರು ಸಲ್ಲಿಸಿದರೆ ತಮ್ಮ ನೌಕರಿ ಹೋಗೋದು ಗ್ಯಾರಂಟಿ ಎಂದುಕೊಂಡು ಫ್ಯಾನ್‌ಗೆ ಚಾದರ ಹೊದಿಸಿರುವುದಾಗಿ ತಿಳಿಸಿದರು. ಬಿರುಬಿಸಿಲ ತಾಪ, ರಾಜಕೀಯದ ಕಾವು, ನೌಕರಿಗೆ ಕಂಟಕದ ಭೀತಿಯ ಮಧ್ಯೆ ಸಿಬ್ಬಂದಿಯೊಬ್ಬರು ನಮ್ಮ ಶತ್ರುವಿಗೂ ಚುನಾವಣೆ ನೌಕರಿ ಬರಬಾರ್ದು ಸರ್ ಎಂದಿದ್ದು ನೌಕರರ ಪಾಡು ಸ್ಪಷ್ಟವಾಗಿ ಹೇಳುವಂತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.