ರಾಯಚೂರು

ಮತಗಟ್ಟೆಗೆ ಭೇಟಿ; ನಟಿ ಪೂಜಾ ಗಾಂಧಿಗೆ ನೀತಿಪಾಠ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 5
ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳು ಪ್ರಚಾರ ಮಾಡುವಂತಿಲ್ಲ. ಮತದಾರರ ಮೇಲೆ ಪ್ರಭಾವ ಕಾರ್ಯ ಮಾಡುವಂತಿಲ್ಲ ಎಂಬುದು ಚುನಾವಣೆ ಆಯೋಗದ ಎಚ್ಚರಿಕೆ. ಆದರೆ ನಗರ ಕ್ಷೇತ್ರದ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಪೂಜಾ ಗಾಂಧಿ ಗೊತ್ತಿದ್ದೋ ಇಲ್ಲವೇ ಗೊತ್ತಿಲ್ಲದೆಯೋ ಮತಗಟ್ಟೆಯೊಳಗೆ ತೆರಳಲು ಯತ್ನಿಸಿದ ಪ್ರಸಂಗ ನಡೆದಿದ್ದು, ಪೊಲೀಸರು ಅವರನ್ನು ಮತಗಟ್ಟೆಯಿಂದ ಹೊರಗೆ ಕಳಿಸಿದ ಘಟನೆ ನಡೆಯಿತು.
ನಗರ ವಿಧಾನಸಭೆ ಕ್ಷೇತ್ರದ ಮಂಗಳವಾರಪೇಟೆ ಬಡಾವಣೆಯ ಸರ್ಕಾರಿ ಶಾಲೆಯಲ್ಲಿರುವ ಮತಗಟ್ಟೆಗೆ ಭಾನುವಾರ ಬೆಳಗ್ಗೆ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಪೂಜಾ ಗಾಂಧಿ ಆಗಮಿಸಿದರು. ಈ ವೇಳೆ ಪೊಲೀಸರು, ಸೇನಾ ಪಡೆಯ ಸಿಬ್ಬಂದಿಯೂ ಅಲ್ಲಿದ್ದರು.
ಆದರೆ ಅವರು ಪೂಜಾ ಗಾಂಧಿ ಆಗಮನವನ್ನು ಅಷ್ಟಾಗಿ ಗಮನಿಸಲಿಲ್ಲ. ಇದರಿಂದ ಮತಗಟ್ಟೆ 100 ಮೀಟರ್ ವ್ಯಾಪ್ತಿಯನ್ನು ಮೀರಿ ಮತಗಟ್ಟೆಯೊಳಗೆ ತೆರಳಲು ಮುಂದಾದರು. ಈ ವೇಳೆ ಮತಗಟ್ಟೆಯ ಭದ್ರತೆ ವೀಕ್ಷಿಸಲು ಆಗಮಿಸಿದ ಎಎಸ್‌ಪಿ ಡಾ. ದಿವ್ಯಾ ಗೋಪಿನಾಥ್ ಅವರು ಅಭ್ಯರ್ಥಿ ಪೂಜಾ ಗಾಂಧಿ ಅವರಿಗೆ ಮತದಾನ ಮಾಡಲು ಬಂದಿರುವ ಬಗ್ಗೆ ವಿಚಾರಿಸಿದ್ದಾರೆ.
ಆದರೆ ತಮ್ಮ ಮತ ಬೆಂಗಳೂರಿನಲ್ಲಿದೆ ಎಂದು ನಟಿ ಪೂಜಾ ಗಾಂಧಿ ತಿಳಿಸಿದ್ದರಿಂದ, ಅಭ್ಯರ್ಥಿಗಳು ಮತಗಟ್ಟೆಯೊಳಗೆ ಪ್ರವೇಶಿ ಸುವಂತಿಲ್ಲ. ಹಾಗೆಯೇ ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿರದಂತೆ ಆಯೋಗದ ಸೂಚನೆಯಿದೆ ಎಂದು ತಿಳಿ ಹೇಳಿ ಅವರನ್ನು ಮತಗಟ್ಟೆಯಿಂದ ಹೊರಗೆ ಕರೆತಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.