ರಾಯಚೂರು

ನನ್ನ ಸೋಲಿಂದ ತಾಲೂಕಿಗೇ ನಷ್ಟ: ಟಿ.ಆರ್. ನಾಯಕ್

Published On :

ಮುದಗಲ್: ಲಿಂಗಸ್ಗೂರು ಮೀಸಲು ಕ್ಷೇತ್ರದಲ್ಲಿ ನನ್ನ ಸೋಲು ನನಗೆ ನಷ್ಟವಿಲ್ಲ, ತಾಲೂಕಿನ ಮತದಾರರಿಗೆ, ಜನತೆಗೆ ನಷ್ಟವಾಗಿದೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಟಿ.ಆರ್. ನಾಯಕ ಹೇಳಿದರು.
ಸಮೀಪದ ಆಶೀಹಾಳ ತಾಂಡಾದ ತಮ್ಮ ನಿವಾಸದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಸಲುವಾಗಿ ತಮ್ಮ ಜೀವನವನ್ನು ಮುಡಿಪಾಗಿಡಲು ಜನ ಸೇವೆ ಮಾಡಲು ಚುನಾವಣ ಕಣದಲ್ಲಿ ಇಳಿದಿದ್ದೆ. ಕ್ಷೇತ್ರದ ಜನತೆಯ ಓಡನಾಡಿಯಾಗಿ, ಕಷ್ಟ- ಸುಖದಲ್ಲಿ ಭಾಗಿಯಾಗಿ ಸೇವೆ ಮಾಡಬೇಕು ಎನ್ನುವ ಮಹಾದಾಸೆಯನ್ನು ಹೊಂದಿದ್ದೆ. ಆದರೆ ತಾಲೂಕಿನ ಮತದಾರರ ತೀರ್ಪಿಗೆ ತಲೆಭಾಗುತ್ತೆನೆ ಎಂದರು.
ಪ್ರಜ್ಞಾವಂತ, ವಿದ್ಯಾವಂತ, ಅನುಭವ ಹೊಂದಿದ್ದ ನನ್ನನ್ನು ಸೋಲಿಸಲು ತಾಲೂಕಿನ ಎಲ್ಲ ಪಕ್ಷಗಳ ಹಿರಿಯ ಮುಖಂಡರು ಕಾರಣರು. ಅಲ್ಲದೆ ಬೇರೆ ತಾಲೂಕಿನಲ್ಲಿ ಸ್ಪರ್ಧಿಸಿದ್ದ ಮುಖಂಡರು ನನಗೆ ಬೆಂಬಲಿಸದ ಕಾರಣ ಅವರ ಸೋಲು ಕಂಡಿದ್ದಾರೆಂದು ಪರೋಕ್ಷವಾಗಿ ಅರೇಗೌಡ ಬಯ್ಯಾಪುರ, ದೊಡ್ಡನಗೌಡ ಲೇಕ್ಕೀಹಾಳ, ರಾಜಾ ರಾಯಪ್ಪ ನಾಯಕ, ಅಮರೇಶ್ವರ ನಾಯಕ, ಬಸವರಾಜ ಪಾಟೀಲ್ ಅನ್ವರಿ ಮೇಲೆ ದೂರಿದರು.
ದೇವರು ಎನ್ನುವವನು ಓಬ್ಬ ಇದ್ದಾನೆ ನನಗೆ ಮೋಸ ಮಾಡಿದವರಿಗೆ ತಕ್ಕ ಪಾಠ ಕಲಿಸಿದ್ದಾನೆ ಎಂದು ಬಾಹುಕರಾಗಿ ಹೇಳಿದರು. ಈ ಚುನಾವಣೆಯಲ್ಲಿ ಹಣ, ಮದ್ಯದ ಪ್ರಭಾವ ಹೆಚ್ಚಾಗಿತ್ತು, ಮತದಾರರು ಹಣಕ್ಕೆ ಮರುಳಾಗಿದ್ದರಿಂದ ಅಲ್ಪ ತೃಪ್ತಿಗೆ ಮತ ಚಲಾಯಿಸಿದ್ದರಿಂದ ನಿಷ್ಠವಂತನಾದ ನಾನು ಸೋಲಬೇಕಾಯಿತು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.