ದೇವಿಕ್ಯಾಂಪ್ನಲ್ಲಿ ಹಸೆಮಣೆಗೆ 71 ಜೋಡಿ
ಸಿಂಧನೂರು: ತಾಲೂಕಿನ ದೇವಿಕ್ಯಾಂಪಿನಲ್ಲಿ ಹೇರೂರು ವಿರುಪನಗೌಡ ಶರಣರ ಪುರಾಣ ಮಹಾಮಂಗಳ ಮತ್ತು ನಿರುಪಾದಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ 71 ಜೋಡಿ ಸಾಮೂಹಿಕ ವಿವಾಹ ಜರುಗಿತು. ಮುಂಜಾನೆ ನಿರುಪಾದಿ ಬಸವೇಶ್ವರ ಮೂರ್ತಿಗೆ ರಾಚಯ್ಯಸ್ವಾಮಿ ಹಿರೇಮಠ ರುದ್ರಾಭಿಷೇಕ ನೆರವೇರಿಸಿದರು. ನಂತರ ಗಣಾರಾಧನೆ ನಡೆಯಿತು. ಸಂಜೆ ರಥೋತ್ಸವ ಸಕಲ ವಾದ್ಯ ವೈಭವದೊಂದಿಗೆ ಅದ್ಧೂರಿಯಾಗಿ ನೆರವೇರಿತು.
ದೇವಿಕ್ಯಾಂಪ್ ನೆರೆಹೊರೆಯ ಗ್ರಾಮಗಳಾದ ದೇವರಗುಡಿ, ಅರಳಹಳ್ಳಿ, ಬೊಮ್ಮನಾಳ, ಚಿರತನಾಳ, ಗೀತಕ್ಯಾಂಪ್, ಕುರುಕುಂದಿ, ತಿಡಿಗೋಳ, ನಿಡಿಗೋಳ, ಉಪ್ಪಲದೊಡ್ಡಿ, ಮಾಟೂರು, ಕಾನಿಹಾಳ ಮತ್ತಿತರ ಕಡೆಗಳಿಂದ ಸಾವಿರಾರು ಭಕ್ತಾದಿಗಳು ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು. ಅಂಕಲಿಮಠದ ವೀರಭದ್ರ ಮಹಾಸ್ವಾಮಿ, ಕಾಂಗ್ರೆಸ್ ಮುಖಂಡರಾದ ಪಂಪನಗೌಡ ಬಾದರ್ಲಿ, ಶಿವಕುಮಾರ ಜವಳಿ, ಪ್ರಭುರಾಜ, ವಿವಿಧ ಮಠಾಧೀಶರು ಇದ್ದರು.
ಪ್ರಮಾಣ ಪತ್ರಕ್ಕೆ ಅಫಿಡವಿಟ್ ಅಗತ್ಯವಿಲ್ಲ
ಕೆಂಭಾವಿ: ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ನೂತನವಾಗಿ ಹೋಬಳಿ ಮಟ್ಟದಲ್ಲಿ ಪ್ರಾರಂಭಿಸಿರುವ ಅಟಲ್ಜಿ ಜನಸ್ನೇಹಿ ಕೇಂದ್ರಗಳ ಮೂಲಕ ಆದಾಯ, ಜಾತಿ ಇನ್ನಿತರ ಪ್ರಮಾಣ ಪತ್ರ ಪಡೆಯಲು ನೋಟರಿ ಮತ್ತು ಇ ಸ್ಟ್ಯಾಂಪಿಂಗ್ ಅಗತ್ಯವಿಲ್ಲ ಎಂದು ಸರ್ಕಾರ ಆದೇಶಿಸಿದೆ.
ಉಪ ತಹಸೀಲ್ದಾರ ಕಾರ್ಯಾಲಯ ಇದ್ದರೂ ಕೂಡಾ ಜಾತಿ, ಆದಾಯ, ವಾಸಸ್ಥಳ ಇತ್ಯಾದಿ ಪ್ರಮಾಣ ಪತ್ರಗಳನ್ನು ಪಡೆಯಲು ನೋಟರಿ ಅಫಿಡವಿಟ್ ಮಾಡಿಕೊಂಡು ಬರುವಂತೆ ಅಧಿಕಾರಿಗಳು ತಿಳಿಸುತ್ತಿದ್ದರು. ಇದರಿಂದ ತಾಲೂಕಾ ಕೇಂದ್ರಗಳಿಗೆ ಹೋಗಿ ಬರಲು ರು. 150-200 ಖರ್ಚು ಮಾಡಬೇಕಾಗುತ್ತದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಮತ್ತು ಹೋಬಳಿ ಮಟ್ಟದಲ್ಲಿ ಇ ಸ್ಟಾಂಪಿಂಗ್ ಹಾಗೂ ನೋಟರಿ ವ್ಯವಸ್ಥೆ ಇಲ್ಲದ ಕಾರಣದಿಂದ ಜನರಿಗೆ ಆಗುತ್ತಿರುವ ತೊಂದರೆ ಗಮನಿಸಿ ಸರ್ಕಾರ ಹೊಸ ಆದೇಶ ಹೊರಡಿಸಿದೆ.
ಆದೇಶ: ನೋಟರಿ ಮತ್ತು ಇ ಸ್ಟ್ಯಾಂಪ್ ಇಲ್ಲದೇ ಸ್ವ ದೃಢೀಕೃತ ಶಾಲಾ ದಾಖಲಾತಿ, ಪಡಿತರ ಚೀಟಿ ಮತ್ತು ಇತರ ಯಾವುದೇ ಐಡಿ ಪ್ರೂಫ್ ಪಡೆದು ಪ್ರಮಾಣ ಪತ್ರಗಳನ್ನು ನೀಡಬೇಕೆಂದು ನೆಮ್ಮದಿ ನಿರ್ದೇಶನಾಲಯದ ಪ್ರಧಾನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.
ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಉಪ ತಹಸೀಲ್ದಾರರಿಗೆ ಈ ಆದೇಶ ನೀಡಲಾಗಿದ್ದು, ಇನ್ನು ಮುಂದೆ ದಲ್ಲಾಳಿಗಳ ಹಾವಳಿ, ಸಾರ್ವಜನಿಕರಿಗೆ ಅಫಿಡವಿಟ್ ತರುವಲ್ಲಿ ಆಗುತ್ತಿದ್ದ ತೊಂದರೆಗಳು ಈ ಆದೇಶದಿಂದ ದೂರವಾಗಲಿದ್ದು, ನಾಗರಿಕರು ನಿಟ್ಟುಸಿರು ಬಿಡುವಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

