ಆರ್ಥಿಕ ಸ್ಥಿರತೆಗೆ ಸಾಮೂಹಿಕ ವಿವಾಹ ಪೂರಕ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಮೇ 16
ದೇಶದ ಮಠ- ಮಂದಿರಗಳು ಸೇರಿದಂತೆ ವಿವಿಧೆಡೆ ಜರುಗುವ ಸಾಮೂಹಿಕ ವಿವಾಹಗಳು ಬಡವರ, ರೈತರ ಜೀವಾಳವಾಗಿದ್ದು, ಇದರಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಜೊತೆಗೆ ದೇಶದ ಆರ್ಥಿಕ ಸ್ಥಿರತೆಗೆ ಪೂರಕವಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದರು.
ತಾಲೂಕಿನ ಬೇಡರ ಕಾರಲಕುಂಟಿ ಗ್ರಾಮದ ರುದ್ರಮುನಿ ಶ್ರೀಗಳ ಕಾಲಜ್ಞಾನ ಮಠದ ಧಾರ್ಮಿಕ ಮಹಾದಾಸೋಹದ 2ನೇ ವಾರ್ಷೀಕೋತ್ಸವದಲ್ಲಿ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತೆಕ್ಕಲಕೋಟೆ ವೀರಭದ್ರ ಶ್ರೀಗಳು, ರಾಯಚೂರು ರಾಚೋಟೇಶ್ವರ ಶಿವಾಚಾರ್ಯ ಮರಳಿ, ಕನ್ನಡಸಿರಿ ಶ್ರೀಮಠದ ಮಲ್ಲಿಕಾರ್ಜುನ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಧಾರ್ಮಿಕ ಆಚರಣೆ ಮತ್ತು ಸಾಮೂಹಿಕ ವಿವಾಹಗಳು ಮಾನವನ ಬದುಕು ಹಸನ ಮಾಡಲು ಸಹಕಾರಿಯಾಗಿವೆ ಎಂದರು. ಫಾದರ್ ವಾಲ್ಟರ್ ಮಿನೇಜಸ್, ಡಾ. ಜಲಾಲುದ್ದೀನ್ ಹಟ್ಟಿ ಹೊಸೂರ ಮಾತನಾಡಿದರು.
ಸನ್ಮಾನ: ಸಮಾರಂಭದಲ್ಲಿ ವೀರಭದ್ರಪ್ಪ, ಹಿರಿಯಣ್ಣ ಮುಸ್ಲಿಕಾರಲಕುಂಟಿ, ಯಮನಪ್ಪ, ಸಣ್ಣ ತಿಮ್ಮಣ್ಣ, ಗ್ಯಾನಪ್ಪ, ಆದಪ್ಪ ಬೇಡರಕಾರಲಕುಂಟಿ, ವೀರಭದ್ರಪ್ಪ ಅಮರಾವತಿ, ಹಸನಸಾಬ ಸಂತೆಕೆಲ್ಲೂರ, ದಶರಥಸಿಂಗ್ ಗೋನವಾರ, ಅಮರೇಶಪ್ಪ ಬಸಾಪುರ, ಚಂದಪ್ಪ ಕುಂಬಾರ, ನಂದಯ್ಯ ಹಿರೇಮಠ ಚಿಂಚೋಡಿ, ಮುದಕಪ್ಪ ಮಡಿವಾಳ ಸಂತೆಕೆಲ್ಲೂರ, ಮಹಾದೇವಪ್ಪ ಹರಿಜನ, ಮಲ್ಲಪ್ಪ ಹಡಪದ ಸೇರಿದಂತೆ 11 ಜನ ಕೃಷಿಕರು ಹಾಗೂ 4 ಜನ ನಾಟಿ ವೈದ್ಯರನ್ನು ಸನ್ಮಾನಿಸಲಾಯಿತು.
ವಿವಿಧ ಕಾರ್ಯಕ್ರಮ: ಬಸವ ಜಯಂತಿ ಪ್ರಯುಕ್ತ ಮೇ 13ರಂದು ನಂದಿ ಧ್ವಜಾರೋಹಣ, ಬಸವ ಬೆಳಗು ಕಾರ್ಯಕ್ರಮ, 14ರಂದು ಮಹಾಂಕಾಳಿ ದೇವಿಗೆ ಪೂರ್ಣಕುಂಭ, ಕಳಸ ಮೆರವಣಿಗೆ, 15ರಂದು ಬೆಳಗ್ಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. 16ರಂದು ಸರ್ವಧರ್ಮ ಸಮ್ಮೇಳನ ಸಭೆ ಹಾಗೂ 17 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿದವು.
ಸಮ್ಮೇಳನ ಸಭೆಯಲ್ಲಿ ಡಾ. ಅನ್ನದಾನ ಶ್ರೀಗಳು, ಶ್ರೀಮಠದ ರುದ್ರಯ್ಯ ತಾತ ಹಾಗೂ ಬಸವರಾಜ ಸ್ವಾಮಿ, ಗುರುನಾಥ ಮಹಾರಾಜರು, ಬಸವರಾಜ ಹಿರೇಮಠ, ಕೆ.ಅಮರೇಗೌಡ, ಶರಣಬಸವ ಪಟ್ಟೇದ, ಜಿಪಂ ಸದಸ್ಯ ಎಚ್.ಬಿ. ಮುರಾರಿ, ದುರುಗಮ್ಮ ಗುಂಡಪ್ಪ ನಾಯಕ, ಅಮರಣ್ಣ ಗುಡಿಹಾಳ, ಮಲ್ಲನಗೌಡ ಹಳ್ಳಿ, ಮಹ್ಮದ್ ಸಾಬ, ನಿರುಪಾದಿಕವಿ, ಎಚ್.ಎನ್. ಪೂಜಾರ, ಶಶಿನಾ ಹೆಸರೂರ, ಅಮರೇಶ ಹೂಗಾರ, ಮಹಾಂತಪ್ಪ ವಿಠ್ಲಾಪೂರ, ಬಾಬು ಪ್ರಸಾದ, ಶರಣಪ್ಪ ಹೊಳೆಯಾಚಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

