ಧಾರ್ಮಿಕ ಕಾರ್ಯಗಳಿಂದ ನೆಮ್ಮದಿ ಸಾಧ್ಯ
ಸಿಂಧನೂರು: ನಿರಂತರವಾಗಿ ಧಾರ್ಮಿಕ ಕಾರ್ಯಗಳು ನಡೆಯುವದರಿಂದ ನೆಮ್ಮದಿ ಸಾಧ್ಯ ಎಂದು ರೌಡಕುಂದಾ ಸಂಸ್ಥಾನ ಮಠದ ಮರಿಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಅಲಬನೂರು ಗ್ರಾಮದಲ್ಲಿ ಬಸವಲಿಂಗ ದೇಶೀ ಕೇಂದ್ರ ಸ್ವಾಮಿಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಪರಹಿತರಾಗಿ: ಇತ್ತೀಚಿನ ದಿನಗಳಲ್ಲಿ ಸ್ವಾರ್ಥತೆ ಬೆಳೆಯುತ್ತಿದೆ. ಇದರಿಂದ ಮಾನವರಲ್ಲಿಯೇ ಕಂದಕ ಸೃಷ್ಟಿಯಾಗುತ್ತಿದೆ. ಒಂದೆಡೆ ಬಡತನ ಕಾಡುತ್ತಿದ್ದರೆ, ಇನ್ನೊಂದೆಡೆ ಶ್ರೀಮಂತಿಕೆ ಇದೆ. ಬಡವರು ತುತ್ತು ಅನ್ನಕ್ಕಾಗಿ ಬಡಿದಾಡಿದರೆ ಇನ್ನೊಂದು ಕಡೆ ತಿನ್ನಲಾಗದೇ ಚಲ್ಲಲಾಗುತ್ತಿದೆ. ಬೆಂಗಳೂರು ಸೇರಿದಂತೆ ಮಹಾನಗರಗಳ ಸ್ಟಾರ್ ಹೋಟೆಲ್ಗಳಲ್ಲಿ ಪ್ರತಿ ದಿನಕ್ಕೆ ಟನ್ಗಟ್ಟಲೇ ಅನ್ನವನ್ನು ಚೆಲ್ಲಲಾಗುತ್ತಿದೆ ಎಂದು ವಿಷಾದಿಸಿದ ಅವರು, ಪ್ರತಿಯೊಬ್ಬರು ಪರ ಹಿತರಾಗಬೇಕಿದೆ. ಧಾರ್ಮಿಕ ಕಾರ್ಯಗಳಿಂದ ಎಲ್ಲರೂ ಒಟ್ಟಾಗಿ ಸೇರುವುದರಿಂದ ಒಬ್ಬೊಬ್ಬರಲ್ಲಿ ಆತ್ಮೀಯತೆ ಬೆಳೆಯುತ್ತದೆ. ಇದರಿಂದ ಗ್ರಾಮದಲ್ಲಿ ಶಾಂತಿ ನೆಲೆಸುತ್ತದೆ ಎಂದರು.
ಮೂರ್ತಿ ಪ್ರತಿಷ್ಠಾಪನೆ: ತೆಕ್ಕಲಕೋಟೆಯ ಕಂಬಳಿಮಠದ ವೀರಭದ್ರ ಶಿವಾಚಾರ್ಯರು ಮೂರ್ತಿ ಪ್ರತಿಷ್ಠಾಪನೆ ಮಾಡಿದರು. ಅಲಬನೂರಿನ ಕಂಬಾಳಿಮಠ(ಉಟಕನೂರು) ಮರಿ ಬಸವರಾಜ ದೇಶೀಕೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ವಳಬಳ್ಳಾರಿಯ ಸಿದ್ದಲಿಂಗ ಸ್ವಾಮೀಜಿ, ನಿಲೋಗಲ್ ಬೃಹನ್ಮಠದ ಶಿವಾಚಾರ್ಯ ಸ್ವಾಮೀಜಿ, ವೀರಾಪುರದ ಮರುಳಸಿದ್ದ ಶಿವಾಚಾರ್ಯರು, ಕರಿಬಸವನಗರದ ಸೋಮನಾಥ ಶಿವಾಚಾರ್ಯರು, ದೇವರ ಭೂಪೂರದ ಗಜದಂಡ ಸ್ವಾಮೀಜಿ, ಅಮರೇಶ್ವರದ ಶಾಂತಮಲ್ಲ ಸ್ವಾಮೀಜಿ, ಹಾಲ್ವಿಯ ಮಹಾಂತ ಸ್ವಾಮೀಜಿ, ಹಳೇಕೋಟೆಯ ಮಲ್ಲಿಕಾರ್ಜುನ ಸ್ವಾಮೀಜಿ, ಯದ್ದಲದೊಡ್ಡಿಯ ಮಹಾಲಿಂಗ ಸ್ವಾಮೀಜಿ, ಅಂಕಲಿಮಠದ ವೀರಭದ್ರ ಸ್ವಾಮೀಜಿ, ಅಡವಿ ಅಮರೇಶ್ವರ ಕ್ಷೇತ್ರದ ಶಾಂತಮಲ್ಲ ಸ್ವಾಮೀಜಿ, ಹಾಲ್ವಿಯ ಮಹಾಂತ ಸ್ವಾಮೀಜಿ, ಹಳೇಕೋಟೆ ತಪೋವನದ ಮಲ್ಲಿಕಾರ್ಜುನ ಸ್ವಾಮೀಜಿ, ಯದ್ದಲದೊಡ್ಡಿಯ ಮಹಾಲಿಂಗ ಸ್ವಾಮೀಜಿ, ಗ್ರಾಮದ ವಿರುಪಾಕ್ಷಪ್ಪ ಸ್ವಾಮಿ, ಪಂಪಯ್ಯ ಸ್ವಾಮಿ ಭಾಗವಹಿಸಿದ್ದರು.
ಇದಕ್ಕೂ ಮುಂಚೆ ಸೋಮವಾರ ಉಟಕನೂರಿನಿಂದ ಆಹ್ವಾನವಾದ ಮೂರ್ತಿಯನ್ನು ಕುಂಭ, ಕಳಸ, ಭಜನೆ, ಮಂಗಳವಾದ್ಯಗಳೊಂದಿಗೆ ಶ್ರೀಗಳ ಮೂರ್ತಿಯನ್ನು ಮೆರವಣಿಗೆ ಮಾಡಲಾಗುವುದು. 14ರಂದು ಸುಪ್ರಭಾತ, ಕರ್ತೃ ಗದ್ದುಗೆಗೆ ಅಭಿಷೇಕ, ಜಲಾಧಿವಾಸ, ಪುಷ್ಪಾದಿವಾಸ ಹಾಗೂ ಪ್ರವಚನ, 15ರಂದು ಧಾನಾಧಿವಾಸ, ವಸ್ತ್ರಾದಿವಾಸ ಹಾಗೂ ಹೋಮ ಮಾಡಲಾಯಿತು. ಇಂದು ಶ್ರೀಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಹಾಗೂ ಮೂರ್ತಿಗೆ ವಿಶೇಷ ಅಭಿಷೇಕ, ಅಲಂಕಾರ, ಪುಷ್ಪಬಿಲ್ವಾರ್ಚನೆ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಿದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

