ರಾಯಚೂರು

ರಾಮಕೃಷ್ಣಾಚಾರ್ ಗೋನ್ವಾರಗೆ ಅದ್ಧೂರಿ ತುಲಾಭಾರ

Published On :

ಕನ್ನಡಪ್ರಭ ವಾರ್ತೆ  ಸಿಂಧನೂರು  ಮೇ 16
ವಿಜಯಶ್ರೀ ಪ್ರಶಸ್ತಿ ಪುರಸ್ಕೃತ, ನಡೆದಾಡುವ ದಾಸರೆಂದೇ ಅಪಾರ ಅಭಿಮಾನಿಗಳಿಂದ ಕರೆಸಿಕೊಳ್ಳುವ ರಾಮಕೃಷ್ಣಾಚಾರ್ ಗೋನ್ವಾರ ಅವರಿಗೆ ಶ್ರೀರಾಮ ಮಂದಿರದ ಸಭಾಂಗಣದಲ್ಲಿ ಅದ್ಧೂರಿಯಾಗಿ ತುಲಾಭಾರ ನೆರವೇರಿಸಲಾಯಿತು.
ಆಚಾರ್ಯರ ಶಿಷ್ಯ ರಾಘವೇಂದ್ರ ಜೋಷಿ ಚಿಂತಾಮಣಿ ಅವರ ಪುತ್ರರ ಉಪನಯನದ ಕಾರ್ಯಕ್ರಮದಲ್ಲಿ ರಾಮಕೃಷ್ಣಾಚಾರ್ ಅವರನ್ನು ನೂರಾರು ಶಿಷ್ಯವೃಂದ ಹಾಗೂ ಅಪಾರ ಜನಸ್ತೋಮದ ಮಧ್ಯೆ ತುಲಾಭಾರ ನಡೆಸಿ ಗೌರವಿಸಲಾಯಿತು.
ನಡೆದಾಡುವ ದಾಸರೆಂದೇ ಚಿರಪರಿಚಿತರು: ಪೇಜಾವರ ಶ್ರೀಗಳ ವರ್ಧಂತಿ ಉತ್ಸವದಲ್ಲಿ ಸಿಂಧನೂರಿನ ಬ್ರಾಹ್ಮಣ ಸಮಾಜದ ವತಿಯಿಂದ 'ನಡೆದಾಡುವ ದಾಸರು' ಎಂಬ ಬಿರುದನ್ನು ನೀಡಲಾಯಿತು. ಚಿತ್ರದುರ್ಗದ ಸತ್ಯಜ್ಯೋತಿ ಪ್ರಕಾಶನದಿಂದ ಸನ್ಮಾನ, ಸಿಂಧನೂರಿನ ಜ್ಞಾನ ಸತ್ರ ಸಮಿತಿಯಿಂದ 'ಸಜ್ಜನ ಸೇವಕ' ಪ್ರಶಸ್ತಿ ಸೇರಿದಂತೆ ಅನೇಕ ಸಭೆ ಸಮಾರಂಭಗಳಲ್ಲಿ ಗೌರವ ಸನ್ಮಾನಗಳು ದೊರೆತಿವೆ.
ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡದಲ್ಲಿ ಶೇಷದಾಸರ ಆರಾಧನೆಯ ಕಾರಣೀಕರ್ತರಲ್ಲಿ ಇವರೂ ಒಬ್ಬರು. ಅವರ ಗುರುಗಳಾದ ಉಪ್ಪಲಿ ಮಧ್ವರಾಯರ ಆಶಯದಂತೆ ಶೇಷದಾಸರ ಆರಾಧನೆಯಲ್ಲಿ ಚಾಚೂ ತಪ್ಪದೇ ಪಾಲ್ಗೊಂಡು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ವಿಶೇಷ ಸೇವೆ: ವಿದ್ಯಾಮನೋವರ ತೀರ್ಥರು, ವಿದ್ಯಾಭೂಷಣ ತೀರ್ಥರು, ವಿದ್ಯಾತಪೋನಿಧಿ ತೀರ್ಥರು, ವಿದ್ಯಾಭಾಸ್ಕರ ತೀರ್ಥರ ಚಾತುರ್ಮಾಸ ಕಾರ್ಯಕ್ರಮಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ್ದಾರೆ. ಶಾಮಸುಂದರ ದಾಸರು, ರಾಮಾಂಕಿತ ರಾಮದಾಸರು, ಜಗನ್ನಾಥ ದಾಸರು, ವಿಜಯದಾಸರ ಅನುಗ್ರಹಕ್ಕೆ ಪಾತ್ರರಾಗಿರುವ ಆಚಾರ್ಯರ ಅಪಾರ ಜ್ಞಾನ ಸಂಪತ್ತು ಭಕ್ತ ವೃಂದಕ್ಕೆ ಇನ್ನಷ್ಟು ಹರಿಯಲಿ ಎಂದು ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ್ ಕುಲಕರ್ಣಿ ಆಶಯ ವ್ಯಕ್ತಪಡಿಸಿದರು.
ತುಲಾಭಾರ ಕಾರ್ಯಕ್ರಮದಲ್ಲಿ ರಾಮಕೃಷ್ಣಾಚಾರ್ಯರು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಪ್ರ ನೌಕರರ ಸಂಘದ ಅಧ್ಯಕ್ಷ ಪಾಂಡುರಂಗ ದೇಸಾಯಿ, ನಿವೃತ್ತ ಶಿಕ್ಷಕ ತಿರುಮಲರಾವ್ ಕುಲಕರ್ಣಿ ಮಾತನಾಡಿ, ಆಚಾರ್ಯರ ವಿವಿಧ ಸಾಧನೆಗಳನ್ನು, ತಮ್ಮ ಒಡನಾಟದ ಅನೇಕ ಪ್ರಸಂಗಗಳನ್ನು ನೆನಪು ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಸಮಾಜದ ಉಪಾಧ್ಯಕ್ಷ ನರಸಿಂಗರಾವ್ ಚನ್ನಳ್ಳಿ, ಮಠಾಧಿಕಾರಿ ನರಸಿಂಹಾಚಾರ್ ಪುರೋಹಿತ, ಹನುಮೇಶಾಚಾರ್ ಬಾದರ್ಲಿ, ಮನೋಹರರಾವ್ ಕುಲಕರ್ಣಿ, ಹನುಮಂತಾಚಾರ್ ಮಸ್ಕಿ, ನಗರಸಭೆ ಸದಸ್ಯರಾದ ಕೆ.ಮರಿಯಪ್ಪ, ವೆಂಕಟರಾವ್ ಬಂಡಿ, ಮಾಜಿ ಸದಸ್ಯ ಕೆ.ಗೋವಿಂದರಾವ್,  ಗೋಪಾಲರಾವ್ ಕುಲಕರ್ಣಿ, ಜಿ.ವಿ. ಜೋಷಿ, ಶ್ರೀಧರ ಕುಲಕರ್ಣಿ, ರಾಘವೇಂದ್ರರಾವ್ ಕುಲಕರ್ಣಿ, ಹನುಮಂತರಾವ್ ಚನ್ನಳ್ಳಿ, ನರಸಿಂಹ ದೇಶಪಾಂಡೆ ಸೇರಿದಂತೆ ಅನೇಕ ಗಣ್ಯರು, ವಿವಿಧ ಭಜನಾ ಮಂಡಳಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.