ಕನ್ನಿಕಾ ಪರಮೇಶ್ವರಿ ಕಳಸಾರೋಹಣ ನಾಳೆ
ಸುರಪುರ: ಇಲ್ಲಿಯ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ಮೇ 20ರಂದು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ದೇವಸ್ಥಾನದಲ್ಲಿ ಶನಿವಾರದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಶನಿವಾರ ಕನ್ನಿಕಾ ಪರಮೇಶ್ವರಿ ಸುಪ್ರಭಾತ, ಲಲಿತಾ ಸಹಸ್ರನಾಮ ಪಾರಾಯಣ, ಪುಣ್ಯಾಹವಾಚನ ಮತ್ತು ಋತ್ವಿಜರಪೂಜೆ, ಅಮ್ಮನವರ ಮೂರ್ತಿಗೆ ಅಭಿಷೇಕ, ಮಹಾಪೂಜೆ, ಮಂಗಳರಾತಿ, ವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಿಂದ ದಾಸವಾಣಿ, ಅಷ್ಟವಧಾನ ಹಾಗೂ ಮಹಮಂಗಳರಾತಿ ಜರುಗಿತು.
ಭಾನುವಾರ ಬೆಳಗ್ಗೆ 5-30ಕ್ಕೆ ಲಕ್ಷ್ಮಿವೆಂಕಟೇಶ ಸುಪ್ರಭಾತ, 6-30ಕ್ಕೆ ವಿಷ್ಣು ಸಹಸ್ರನಾಮ ಪಾರಾಯಣ, 8 ಗಂಟೆಗೆ ಕಳಸ ಪ್ರತಿಷ್ಟಾಂಗ ಹೋಮ, 11ಕ್ಕೆ ಲಕ್ಷ ಕುಂಕುಮಾರ್ಚನೆ, 12ಕ್ಕೆ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಹಾಗೂ ತಂಡದಿಂದ ನಗೆ ಹಬ್ಬ, ರಾತ್ರಿ 8ಕ್ಕೆ ಮಹಾಮಂಗಳಾರತಿ, ಮಂತ್ರಪುಷ್ಪ ಜರುಗಲಿವೆ.
ಮೇ 20ರಂದು ಸೋಮವಾರ ಬೆಳಗ್ಗೆ 5-30ಕ್ಕೆ ಸಾಮೂಹಿಕ ಸುಪ್ರಭಾತ, 6-30ಕ್ಕೆ ಲಕ್ಷ್ಮಿ ಸೋಭಾನ ಕಾರ್ಯಕ್ರಮ, 7ಕ್ಕೆ ಪಂಚಾಮೃತ ಅಭಿಷೇಕ, 9ಕ್ಕೆ ಸ್ಥಬ್ದಚಿತ್ರ ಮೆರವಣಿಗೆ ಹಾಗೂ ದೇವತಾ ಪೂಜೆ ಜರುಗಲಿದೆ. ಮಧ್ಯಾಹ್ನ 12ಕ್ಕೆ ಹುಣಸಿಹೂಳೆ ಕಣ್ವಮಠದ ವಿದ್ಯಾಬಾಸ್ಕರ ತೀರ್ಥರಿಂದ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಗೋಪುರಕ್ಕೆ ಕಳಸಾರೋಹಣ, ನಂತರ ತೀರ್ಥ ಪ್ರಸಾದ ವಿನಿಯೋಗ, ರಾತ್ರಿ 8ಕ್ಕೆ ಅಮ್ಮನವರ ತೊಟ್ಟಿಲೋತ್ಸವದೊಂದಿಗೆ ಕಾರ್ಯಕ್ರಮ ಸಂಪನಗೊಳ್ಳಲಿದೆ.
ಮೂರು ದಿನಗಳವರೆಗೆ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಮಾಜ ಬಾಂಧವರು ಆಗಮಿಸಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಮಾಜದ ಗಣ್ಯರನ್ನು ಸತ್ಕರಿಸಲಾಗುವುದು ಎಂದು ಆರ್ಯವಶ್ಯ ಸಮಾಜದ ಗೌರವಾಧ್ಯಕ್ಷ ಚಂದ್ರಶೇಖರಯ್ಯ ಕೋಸ್ಗಿ, ತಾಲೂಕು ಅಧ್ಯಕ್ಷ ಗೋವಿಂದಯ್ಯ ಮುದಗಲ್, ಯುವ ಅಧ್ಯಕ್ಷ ಗುರುರಾಜ ಕೋಸ್ಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

