ರಾಯಚೂರು

ಯಾವ ಸರ್ಕಾರವೂ ರೈತರ ಸಮಸ್ಯೆಗೆ ಸ್ಪಂದಿಸಿಲ್ಲ

Published On :

ಕನ್ನಡಪ್ರಭ ವಾರ್ತೆ   ಸಿಂಧನೂರು   ಮೇ 19
ಎಲ್ಲ ಜನ ವರ್ಗಗಳು ಸಂಘಟಿತಗೊಳ್ಳುತ್ತವೆ. ತಮ್ಮ ಬೇಕು- ಬೇಡಗಳನ್ನು ಸರ್ಕಾರದ ಮೂಲಕ ಈಡೇರಿಸಿಕೊಳ್ಳುತ್ತವೆ. ಸರ್ಕಾರಗಳೂ ಸಂಘಟಿತ ಸಮುದಾಯಗಳ ಬೇಡಿಕೆಗಳಿಗೆ ಸ್ಪಂದಿಸುತ್ತಾ ಬಂದಿವೆ. ಆದರೆ ರೈತರ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಯತ್ನವನ್ನು ಯಾವುದೇ ಸರ್ಕಾರ ಮಾಡಿಲ್ಲವೆಂದು ಮಾಜಿ ಸಂಸದ ವಿರೂಪಾಕ್ಷಪ್ಪ ಆರೋಪಿಸಿದರು.
ತಾಲೂಕಿನ ತಿಮ್ಮಾಪುರ ಕ್ರಾಸ್ ಬಳಿ ಬಸವ ಕಲ್ಯಾಣಾಶ್ರಮದ ಮಹಾಂತಸ್ವಾಮಿ ಸಾಲಿಮಠ ಅವರ ನೇತೃತ್ವದಲ್ಲಿ ಶರಣ ಸಂಸ್ಕೃತಿ ಮಹಾಮೇಳ, ಜನ-ಮನ ಕಲ್ಯಾಣ ಜಾತ್ರೆಯಲ್ಲಿ ರೈತಪರ ಚಿಂತನಾಗೋಷ್ಠಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದುರಂತ: ಪ್ರತಿಯೊಬ್ಬ ಉತ್ಪಾದಕನು ತನ್ನ ಉತ್ಪಾದನೆಗೆ ಬೇಕಾಗುವ ಖರ್ಚನ್ನು ಗಣನೆಗೆ ತೆಗೆದುಕೊಂಡು ಅದರ ಬೆಲೆಯನ್ನು ತಾನೇ ನಿರ್ಧರಿಸುತ್ತಾನೆ. ಆದರೆ ಈ ದೇಶದ ರೈತನಿಗೆ ಮಾತ್ರ ತಾನು ಬೆಳೆದ ಬೆಳೆಯ ಬೆಲೆಯನ್ನು ನಿರ್ಧರಿಸುವ ಹಕ್ಕು ಇಲ್ಲದಿರುವುದು ದೊಡ್ಡ ದುರಂತ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಬೆಟ್ಟದೂರು ವಿಷಾದ ವ್ಯಕ್ತಪಡಿಸಿದರು.
ಸಂಕಷ್ಟಕ್ಕೆ ಸ್ಪಂದಿಸಿಲ್ಲ: ಕೃಷಿ ಸಮಾಜದ ಹಾನಿಯಿಂದ ಕೇವಲ ಕೃಷಿಕರಿಗೆ ಮಾತ್ರ ಹಾನಿಯಾಗುವುದಿಲ್ಲ. ಇಡೀ ಸಮಾಜಕ್ಕೆ ಅಪಾರ ಹಾನಿಯುಂಟಾಗುತ್ತದೆ. ಆದರೆ, ಸರ್ಕಾರ ಕೃಷಿಕನ ಸಮಸ್ಯೆಯನ್ನು ಕೇವಲ ಅವನ ಸಮಸ್ಯೆಯಾಗಿ ನೋಡುತ್ತಿದೆ ಹೊರತು ಸಮಾಜದ ಸಮಸ್ಯೆಯಾಗಿ ನೋಡುತ್ತಿಲ್ಲ. ಹೀಗಾಗಿ, 67 ವರ್ಷ ಗತಿಸಿದರೂ ರೈತ ಸಮುದಾಯದ ಸಂಕಷ್ಟಕ್ಕೆ ಪರಿಹಾರ ಸಿಕ್ಕಿಲ್ಲವೆಂದು ಹೇಳಿದರು.
ರೌಡಕುಂದಾ, ಮೂರುಮೈಲ್ ಕ್ಯಾಂಪ್, ಗಚ್ಚಿನಮಠ, ಹಾಲವಿ ಶ್ರೀಗಳು ಉಪಸ್ಥಿತರಿದ್ದರು. ಮುಖಂಡರಾದ ಸಂಗಯ್ಯಸ್ವಾಮಿ ಸರಗಣಾಧೀಶ್ವರಮಠ, ಅಮರೇಗೌಡ ಮಟ್ಟೂರು, ಅಮರಣ್ಣ ಗುಡಿಹಾಳ, ಕುರುಕುಂದಿ ಬಸವರಾಜ, ತೆಂಗಿನಕಾಯಿ ಶರಣಪ್ಪ, ಕಟ್ಟೆಪ್ಪ ಗುಂಜಳ್ಳಿ, ಮತ್ತಿತರರು ಭಾಗವಹಿಸಿದ್ದರು. ಬೀರಪ್ಪ ಶಂಭೋಜಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.