ರಾಯಚೂರು

ಎಂಆರ್ಎಚ್ಎಸ್ ಸಭೆ; ಪದಾಧಿಕಾರಿಗಳ ನೇಮಕ

Published On :

ರಾಯಚೂರು: ನಗರದ ಸ್ಪಂದನ ಸರ್ಕಾರಿ ನೌಕರರ ಭವನದಲ್ಲಿ ಇತ್ತೀಚೆಗೆ ಮಾದಿಗ ಮೀಸಲಾತಿ ಹೋರಾಟ ಸಮಿತಿ(ಎಂಆರ್ಎಚ್ಎಸ್)ಯ ಪ್ರಮುಖ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಹೋರಾಟಗಾರ ದಿ. ಶಿವಪುತ್ರಪ್ಪ ಭೇರಿ ಅವರ ಭಾವಚಿತ್ರಕ್ಕೆ ಸಂಘಟನೆಯ ನಗರ ಉಪಾಧ್ಯಕ್ಷ ನಾಗರಾಜ ಫಿರಂಗಿ ಗೌರವ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಸಂಘಟನೆಯಿಂದ ಹೋರಾಟ ರೂಪಿಸುವ ನಿಟ್ಟಿನಲ್ಲಿ ಹಾಗೂ ಸಂಘಟನೆ ಬಲವರ್ಧನೆಗೊಳಿಸುವ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಸಂಘಟನೆಯ ಪ್ರಮುಖರಾದ ಹೇಮರಾಜ ಅಸ್ಕಿಹಾಳ, ಜೆ.ಶರಣಬಸವ, ಸೋಮಶೇಖರ್ ಭಂಡಾರಿ, ಹನುಮೇಶ ಕೊಲಿಮಿ ಮತ್ತಿತರರು ಪಾಲ್ಗೊಂಡಿದ್ದರು.
ಈ ವೇಳೆ ಜಿಲ್ಲಾ ಸಮಿತಿ ಪದಾಧಿಕಾರಿಗಳನ್ನು ನೇಮಿಸಲಾಯಿತು. ಸಂಘಟನೆಯ ಜಿಲ್ಲಾ ವ್ಯವಸ್ಥಾಪಕ ಅಧ್ಯಕ್ಷರಾಗಿ ಜೆ.ಶರಣ ಬಸವ, ಜಿಲ್ಲಾಧ್ಯಕ್ಷರಾಗಿ ಪಿಲಿಪಿರಾಜ್, ಉಪಾಧ್ಯಕ್ಷರಾಗಿ ಹನುಮೇಶ ಕೊಲಿಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೋಮಶೇಖರ್ ಭಂಡಾರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀನಿವಾಸ ಕೊಪ್ಪರ್, ಜಿಲ್ಲಾ ಖಜಾಂಚಿಯಾಗಿ ತಾಯಪ್ಪ ಕಲ್ಮಲಾ, ಕಾನೂನು ಸಲಹೆಗಾರರಾಗಿ ಭೀಮೇಶ ಗಾಣದಾಳ, ಜಿಲ್ಲಾ ಸಮಿತಿ ಸದಸ್ಯರಾಗಿ ಕರೆಪ್ಪ ಪತ್ತೇಪೂರು, ಬಸವರಾಜ ಹೊಸಪೇಟೆ, ನರೇಶ ಕುಮಾರ್, ಚೆಂದಪ್ಪ, ಮಾರ್ತಂಡ ಬೇವಿನಬೆಂಚಿ, ವಿಜಯಕುಮಾರ್, ಹನುಮಂತು, ಮಲ್ಲಿಕಾರ್ಜುನ ಹಾಗೂ ದೇವರಾಜ್ ಅವರನ್ನು ನೇಮಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.