ತಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ
ಕನ್ನಡಪ್ರಭ ವಾರ್ತೆ ಚಿಂಚೋಳಿ ನ. 1
ಇಲ್ಲಿನ ತಾಪಂ ಅಧ್ಯಕ್ಷೆ ಮಲ್ಲಮ್ಮ ಪಾಟೀಲ್ ವಿರುದ್ಧ ಗುರುವಾರ ನಡೆದ ಅವಿಶ್ವಾಸ ವಿರುದ್ದ ನಿರ್ಣಯ ವಿಶೇಷ ಸಾಮಾನ್ಯ ಸಭೆಯ ಚರ್ಚೆಯ ಸಂದರ್ಭದಲ್ಲಿ ಅಧ್ಯಕ್ಷರ ಮತ್ತು ತಾಲೂಕು ಪಂಚಾಯತ್ ಬಿಜೆಪಿ ಸದಸ್ಯರ ಮಧ್ಯೆ ಮಾತಿನ ಚಕಮತಿ ನಡೆಯಿತು.
ಅಣವಾರ ತಾಪಂ ಬಿಜೆಪಿ ಸದಸ್ಯ ಶರಣಪ್ಪ ಹುಲಿ ಮಾತನಾಡಿ, ಅಧ್ಯಕ್ಷರು ತಾಪಂ ಸ್ಥಾಯಿ ಸಮಿತಿ ರಚನೆ ಮಾಡಿಲ್ಲ ಮತ್ತು ತಾಪಂ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಸಹಕಾರ ನೀಡಲಿಲ್ಲವೆಂದು ಆರೋಪಿಸಿದರು.
ಅಧ್ಯಕ್ಷರ ಅವಿಶ್ವಾಸ ಮತ: ಪರವಾಗಿ 12 ಜನ ತಾಪಂ ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು. 9 ಜನ ತಾಪಂ ಸದಸ್ಯರು ತಾಪಂ ಅಧ್ಯಕ್ಷರ ಅವಿಶ್ವಾಸ ವಿರುದ್ದವಾಗಿ ಬೆಂಬಲ ಸೂಚಿಸಿದರು ಹೀಗಾಗಿ ಅಧ್ಯಕ್ಷರ ವಿರುದ್ದ ಅವಿಶ್ವಾಸ ನಿರ್ಣಯ ಸಭೆಯಲ್ಲಿ ಮಂಡಿಸಲಾಯಿತು.
ತಾಪಂ ಅಧ್ಯಕ್ಷರ ಅವಿಶ್ವಾಸ ಪರವಾಗಿ ತಾಪಂ ಉಪಾಧ್ಯಕ್ಷೆ ತಾರಾಮತಿ ಕುಂಬಾರ, ಬಿಜೆಪಿ ತಾಪಂ ಸದಸ್ಯರಾದ ಶಾಮಸುಂದರ ಪವಾರ, ರಾಮರಾವ ಪಾಟೀಲ್, ಗುಂಡಪ್ಪ ಮಾಳಗಿ, ಶರಣು ಹುಲಿ, ಸುಜಾತಾ ಕೊಡದೂರ, ಸುನಿತಾ ಪಡಶೆಟ್ಟಿ, ಅನುಸೂಯಾದೇವಿ ಪಸ್ತಪುರ, ಅನುಸೂಯಬಾಯಿ ಚಿಮ್ಮನಚೋಡ, ಉಷಾ ಕಾಬಾ, ಕಮಲಮ್ಮ ಕಲ್ಲೂರ, ಶಶಿಕಲಾ ಪಾಟೀಲ್ (ಕಾಂಗ್ರೆಸ್) ಮುಂತಾದವರು ಕೈ ಎತ್ತುವ ಮೂಲಕ ಅಧ್ಯಕ್ಷರ ವಿರುದ್ದ ಅವಿಶ್ವಾಸ ಪರ ಬೆಂಬಲ ವ್ಯಕ್ತಪಡಿಸಿದರು.
ಇನ್ನು ಅಧ್ಯಕ್ಷರ ಅವಿಶ್ವಾಸದ ವಿರುದ್ಧವಾಗಿ ತಾಪಂ ಅಧ್ಯಕ್ಷೆ ಮಲ್ಲಮ್ಮ ಪಾಟೀಲ್, ಕಾಂಗ್ರೆಸ್ ಪಕ್ಷದ ತಾಪಂ ಸದಸ್ಯರಾದ ನರಸಿಂಹಲು ಕುಂಬಾರ, ಜಾನು ನಾಯಕ, ಬಸಯ್ಯ ಸ್ವಾಮಿ, ಸುಧಾ ಗುಡದಾ, ಶಿವಮ್ಮ ರಂಗನೂರ, ಮಾಣಿಕಮ್ಮ ಗೋಸುಲ್, ಮಹೇಶದೊಡ್ಡಿ, ವಿಟ್ಠಲ್ ಕಾರಭಾರಿ ಬೆಂಬಲ ವ್ಯಕ್ತಪಡಿಸಿದರು. ಈ ಮಧ್ಯೆ ತಾಪಂ ಅಧಿಕಾರಿ ಜಗದೇವ ಬೈಗೊಂಡ ತಾಪಂ ಅಧ್ಯಕ್ಷರ ವಿರುದ್ದ ಅವಿಶ್ವಾಸ ನಿರ್ಣಯ ವಿಶೇಷ ಸಾಮಾನ್ಯ ನೋಟಿಸು ಬಗ್ಗೆ 10 ದಿನದೊಳಗೆ ಉತ್ತರ ನೀಡುವಂತೆ ಗುಲ್ಬರ್ಗ ಉಚ್ಛ ನ್ಯಾಯಾಲಯ ತಾಪಂ ಅಧಿಕಾರಿಗೆ ಸೂಚನಾ ಪತ್ರ ನೀಡಿದೆ. ತಾಲೂಕು ಪಂಚಾಯತದಲ್ಲಿ ಒಟ್ಟು 21 ಜನ ಸದಸ್ಯರಲ್ಲಿ 12 ಜನ ಸದಸ್ಯರು ಅಧ್ಯಕ್ಷರ ಅವಿಶ್ವಾಸ ನಿರ್ಣಯ ಪರವಾಗಿ ಬೆಂಬಲ ವ್ಯಕ್ತಪಡಿಸಿದರಿಂದ ಅವಿಶ್ವಾಸಕ್ಕೆ ಪರವಾಗಿದೆ ಎಂದು ತಾಪಂ ಅಧಿಕಾರಿ ಜಗದೇವ ಬೈಗೊಂಡ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

