ಅಸಮರ್ಪಕ ಪಡಿತರ ಪೂರೈಕೆ: ಪರವಾನಗಿ ರದ್ದತಿಗೆ ಆಗ್ರಹ
ಸಿಂಧನೂರು: ನಗರದ ಲಕ್ಷ್ಮೀಕ್ಯಾಂಪ್‌ನಲ್ಲಿರುವ ನ್ಯಾಯಬೆಲೆ ಅಂಗಡಿ ಸಂಚಾಲಕರು ಅಸಮರ್ಪಕ ಆಹಾರಧಾನ್ಯ ವಿತರಿಸುವ ಮೂಲಕ ಪಡಿತರದಾರರಿಗೆ ಮೋಸವೆಸಗುತ್ತಿದ್ದು, ಸಂಚಾಲಕರ ಲೈಸನ್ಸ್ ರದ್ದುಗೊಳಿಸುವಂತೆ ಲಕ್ಷ್ಮೀಕ್ಯಾಂಪ್, ಪಿಡಬ್ಲ್ಯೂಡಿ ಕ್ಯಾಂಪ್ ವ್ಯಾಪ್ತಿಗೊಳಪಡುವ ನೌಕರ ವರ್ಗದವರು ಒತ್ತಾಯಿಸಿದ್ದಾರೆ.
ವಾರ್ಡ್ ನಂ.29, 30 ಮತ್ತು 31ನೇ ವಾರ್ಡ್‌ಗಳ ಪಡಿತರದಾರರು ಹಲವು ದಿನಗಳಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಂಚಾಲಕರು ಪಡಿತರದಾರರಿಗೆ ಆಹಾರ ಧಾನ್ಯಗಳನ್ನು ವಿತರಿಸದೇ ಕಾಳಸಂತೆಯಲ್ಲಿ ಮಾರಿಕೊಳ್ಳುತ್ತಿದ್ದಾರೆಂದು ಆಪಾದಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ 29ನೇ ವಾರ್ಡ್‌ನ ಡಿ. ಮಹೇಶ, 30ನೇ ವಾರ್ಡ್‌ನ ಹಸೇನ್ ನಡುವಿನಮನಿ ದೋಟಿಹಾಳ, 31ನೇ ವಾರ್ಡ್‌ನ ಈಶಪ್ಪ, ಮಹ್ಮದ್ ಯೂಸೂಫ್, ರೇಣುಕಮ್ಮ, ತಾಜುದ್ದೀನ್ ಮತ್ತಿತರರು ತಿಂಗಳಲ್ಲಿ ಎರಡು ದಿನ ಮಾತ್ರ ನ್ಯಾಯಬೆಲೆ ಅಂಗಡಿಯ ಆಹಾರ ಧಾನ್ಯಗಳನ್ನು ವಿತರಿಸುವ ಸಂಚಾಲಕರು ತಿಂಗಳ ಪೂರ್ತಿ ಅಂಗಡಿಯನ್ನು ಮುಚ್ಚಿರುತ್ತಾರೆ. ಕೇವಲ ಎರಡು ದಿನ ಆಹಾರಧಾನ್ಯ ವಿತರಿಸುವುದರಿಂದ ನೂರಾರು ಪಡಿತರದಾರರು ಆಹಾರ ಧಾನ್ಯಗಳಿಂದ ವಂಚಿತರಾಗುತ್ತಿದ್ದೇವೆ ಎಂದವರು ದೂರಿದ್ದಾರೆ.
ಆಹಾರ ಧಾನ್ಯಗಳನ್ನು ಪಡೆಯದ ಕಾರ್ಡ್‌ದಾರರಿಗೆ ನಂತರ ಬಂದ ಸಮಯದಲ್ಲಿ ಕಾರ್ಡ್‌ನಲ್ಲಿ ಆಹಾರ ಧಾನ್ಯ ವಿತರಿಸಿದಂತೆ ನಮೂದಿಸಿ ಸರ್ಕಾರದ ಎಲ್ಲ ಪಡಿತರವನ್ನು ನ್ಯಾಯಬೆಲೆ ಅಂಗಡಿ ಸಂಚಾಲಕರೇ ನುಂಗಿ ಹಾಕುತ್ತಾರೆಂದು ಆಪಾದಿಸಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳು ಮತ್ತು ಸಚಿವರು ತಕ್ಷಣ ನ್ಯಾಯಬೆಲೆ ಅಂಗಡಿ ಸಂಚಾಲಕರ ಮೇಲೆ ಕಠಿಣಕ್ರಮ ಕೈಗೊಳ್ಳಬೇಕು, ಇನ್ನು ಮುಂದೆ ಎಲ್ಲಾ ಪಡಿತರದಾರರಿಗೆ ಅನುಕೂಲವಾಗುವಂತೆ ತಿಂಗಳಾದ್ಯಂತ ನ್ಯಾಯಬೆಲೆ ಅಂಗಡಿಯನ್ನು ತೆರೆಯುವಂತೆ ಆದೇಶಿಸಬೇಕು ಇಲ್ಲದಿದ್ದರೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

