ರಾಯಚೂರು

ಜನಪದರಿಂದ ದಾನ, ದಾಸೋಹಕ್ಕೆ ಮಹತ್ವ: ಬಳಿಗಾರ

Published On :

ಕ.ಪ್ರ. ವಾರ್ತೆ, ಲಿಂಗಸ್ಗೂರು, ನ.6
ಶತಮಾನಗಳಿಂದ ಜನಪದರು ದಾನ- ದಾಸೋಹಕ್ಕೆ ಮಹತ್ವ ನೀಡುವ ಮೂಲಕ ಶ್ರೇಷ್ಠತೆ ಮೆರೆದಿದ್ದಾರೆಂದು ಇಲಕಲ್‌ನ ನಿವೃತ್ತ ಪ್ರಾಚಾರ್ಯ ಡಾ. ಶಂಭು ಬಳಿಗಾರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
  ಪಟ್ಟಣದ ವಿಜಯ ಮಹಾಂತೇಶ್ವರ ಶಾಖಾನುಭವ ಮಂಟಪದಲ್ಲಿ ಲಿಂ. ಚಿತ್ತರಗಿ ವಿಜಯ ಮಹಾಂತ ಶಿವಯೋಗಿಗಳ 102ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಜನಪದದಲ್ಲಿ ಶರಣರು ಎಂಬ ಕುರಿತು ಉಪನ್ಯಾಸ ನೀಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಕುಟುಂಬಗಳ ಭಾವನೆಗಳು, ನಮ್ಮವರು ಎಂಬ ಉದಾರತೆ ಮರೆಯಾಗಿವೆ. ಹೆತ್ತ ತಂದೆ- ತಾಯಿಗಳನ್ನು ವೃದ್ಧಾಶ್ರಮದಲ್ಲಿ ಬಿಟ್ಟು ವೈಭವ ಜೀವನ ನಡೆಸುತ್ತಿರುವ ಮಕ್ಕಳು ಕೇವಲ ಹಣ ಗಳಿಕೆಯಲ್ಲಿ ಮಗ್ನರಾಗಿ ಕೂಡಿ ಬಾಳುವುದನ್ನು ಮರೆಯುತ್ತಿದ್ದಾರೆಂದು ವಿಷಾಧ ವ್ಯಕ್ತಪಡಿಸಿದರು.
  ಜನಪದರು ಹಾಗೂ ಶರಣರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಶರಣರ ಹಾಗೂ ಜನಪದರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ನಡೆಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಇಲಕಲ್ ಡಾ. ವಿಜಯ ಮಹಾಂತೇಶ ಶ್ರೀ, ಗುರುಮಹಾಂತ ಶ್ರೀ, ಶಿರೂರ ಬಸವಲಿಂಗ ಶ್ರೀ, ಯರಡೋಣ ಮುರುಘೇಂದ್ರ ಶ್ರೀ, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ, ಮುಖಂಡ ಲಾಲಅಹ್ಮದ್‌ಸಾಬ, ಪ್ರೇಮಸಿಂಗ್ ಠಾಕೂರ್ ಜೋದಪುರ ಇದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.