ಪ್ರಾಮಾಣಿಕತೆ ಉತ್ತಮ ವ್ಯಕ್ತಿತ್ವದ ಸಂಕೇತ
ಸಿಂಧನೂರು: ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆಯು ಉತ್ತಮ ವ್ಯಕ್ತಿತ್ವ ಸೂಚಿಸುವ ಸಂಕೇತವಾಗಿವೆ. ಅವು ವ್ಯಕ್ತಿಯ ಗೌರವವನ್ನು ಹೆಚ್ಚಿಸುತ್ತವೆ ಎಂದು ಜಿಪಂ ಸದಸ್ಯೆ ಬಸಮ್ಮ ಕುಂಟೋಜಿ ಹೇಳಿದರು.
ತಾಲೂಕಿನ ತುರುವಿಹಾಳ ಗ್ರಾಮದ ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಅಮಾವಾಸ್ಯೆಯಂದು ನಡೆದ 44 ಬೆಳಕಿನೆಡೆಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಯಕ ಯೋಗಿಗಳಿಗೆ ಕಾಯಕಜೀವಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ನಿಷ್ಠಾವಂತರು ಎಂದೂ ಯಾವುದೇ ಪ್ರಶಸ್ತಿ ಪಾರಿತೋಷಕಗಳಿಗಾಗಿ ಬೆನ್ನುಹತ್ತುವುದಿಲ್ಲ. ಅಂತಹ ಕಾಯಕ ಯೋಗಿಗಳನ್ನು ಗುರುತಿಸಿ ಸತ್ಕರಿಸುತ್ತಿರುವ ಕಾರ್ಯಕ್ಕೆ ಮುಂದಾಗಿರುವ ಸಮಿತಿಯ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.
ಆರೋಗ್ಯ ಇಲಾಖೆಯಲ್ಲಿ ಪ್ರಾಮಾಣಿಕತೆಯಿಂದ ಇಲ್ಲಿಯೇ ಇಲಾಖೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿ ಇಲ್ಲಿಯೇ 34- 35 ವರ್ಷಗಳ ಕಾಲ ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಇಲ್ಲಿಯೇ ನಿವೃತ್ತಿ ಹೊಂದಿರುವ ಗುಂಡಪ್ಪ ಮಹಾದೇವಪ್ಪ ಕಟ್ಟಿಮನಿಯವರ ಕರ್ತವ್ಯ ನಿಷ್ಠೆಗೆ ಹಿಡಿದ ಕನ್ನಡಿಯಾಗಿದೆ. ಇಂತಹ ಕಾಯಕಯೋಗಿಗೆ ಕಾಯಕಜೀವಿ ಪ್ರಶಸ್ತಿ ನೀಡುತ್ತಿರುವುದು ಸಂತಸದ ಸಂಗತಿ ಎಂದರು.
ಮಠದ ಸೇವಾ ಸಮಿತಿ ಅಧ್ಯಕ್ಷ ಬಸನಗೌಡ ಕೆಲ್ಲೂರು ಮಾತನಾಡಿ, ಗುಂಡಪ್ಪ ಕಟ್ಟಿಮನಿ ಹೆಸರಿಗೆ ತಕ್ಕಂತೆ ವ್ಯಕ್ತಿತ್ವ ಹೊಂದಿದವರು. ಅವರು ಇದುವರೆಗೂ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳ ಮನೆಮಾತಾಗಿದ್ದಾರೆ. ಯಾರೊಂದಿಗೂ ಬೆರಳು ಮಾಡಿ ತೋರಿಸಿಕೊಂಡವರಲ್ಲ. ಕರ್ತವ್ಯದಲ್ಲಿ ರಾತ್ರಿ- ಹಗಲು ಎನ್ನದೆ ಯಾವುದೇ ಸಮಯ ಲೆಕ್ಕಿಸದೆ ಎಲ್ಲರನ್ನು ಗೌರವ ಭಾವದಿಂದ ಕಂಡು ಕರ್ತವ್ಯ ನಿರ್ವಹಿಸಿದವರು ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.
ದೇವಣ್ಣ ಕಾನಿಹಾಳ ಉಪನ್ಯಾಸ ನೀಡಿದರು. ಹೊಗರನಾಳ ಅಮರೇಗೌಡ ಮಾ.ಪಾ, ಅಮರಮ್ಮ ಅಮರೇಶಪ್ಪ ಗಾಣಿಗೇರ, ಶರಣಪ್ಪ ಸಾಹುಕಾರ, ಶಿಕ್ಷಕ ಸೋಮಲಿಂಗಪ್ಪ, ನಾಗಪ್ಪ ಹೂವಿನಬಾವಿ, ಶರಬಯ್ಯ ಸ್ವಾಮಿ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

