ರಾಯಚೂರು

ಎಸ್ಸಿ, ಎಸ್ಟಿ ರೈತರಿಗೆ ನೀರಾವರಿ ಸವಲತ್ತು; ಭರವಸೆ

Published On :

ದೇವದುರ್ಗ: ನೀರಾವರಿಯಿಂದ ವಂಚಿತರಾದ ಎಸ್ಸಿ- ಎಸ್ಟಿ ಜನಾಂಗದ ರೈತರ ಕೃಷಿ ಜಮೀನಿಗೆ ಸರ್ಕಾರದಿಂದ ನೀರಾವರಿ ಸೌಲಭ್ಯ ಒದಗಿಸುವುದಾಗಿ ಶಾಸಕ ಎ.ವೆಂಕಟೇಶ ನಾಯಕ ತಿಳಿಸಿದರು.
ತಾಲೂಕಿನ ಅರಷಿಣಿಗಿ, ಹೂನೂರು ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿ ರೈತರಿಂದ ಮನವಿ ಸ್ವೀಕರಿಸಿ ಮಾತ ನಾಡಿದ ಅವರು, ಅರಷಿಣಿಗಿ ಗ್ರಾಮದಲ್ಲಿ ಸಿಸಿ ರಸ್ತೆಗೆ 5 ಲಕ್ಷ ಮಂಜೂರು ಮಾಡಲಾಗುತ್ತದೆ. ಅದೇ ರೀತಿ ನಾರಾಯಣಪುರ ಬಲದಂಡೆ ಕಾಲುವೆಯಿಂದ ರೈತರ ಜಮೀನಿಗೆ ನೀರು ದೊರೆಯುತ್ತಿಲ್ಲ. ಆದರೆ ಗ್ರಾಮದ ಬಳಿಯ ಹಳ್ಳದಿಂದ ಎಸ್ಸಿ, ಎಸ್ಟಿ ಜನಾಂಗದ ರೈತರ ಭೂಮಿಗಳಿಗೆ ನೀರು ಹರಿಸಲು ವಿದ್ಯುತ್ ಸಂಪರ್ಕ ಕಲ್ಪಿಸಲು ಜೆಸ್ಕಾಂಗೆ ಸೂಚಿಸುವುದಾಗಿ ತಿಳಿಸಿದರು.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಬಾಪೂಗೌಡ ಚಿಕ್ಕಹೊನ್ನಕುಣಿ, ವಿಎಸ್ಸೆಸ್ಸೆನ್ ಅಧ್ಯಕ್ಷ ಬಿ.ಲಿಂಗಣ್ಣಗೌಡ ಕೊಪ್ಪರ, ದೇವದುರ್ಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮನಗೌಡ ನಾಗಡದಿನ್ನಿ ಮಾತನಾಡಿದರು.
ಕೊಪ್ಪರ ಗ್ರಾಪಂ ಅಧ್ಯಕ್ಷ ಮರೆಪ್ಪ ನಾಯಕ ಕುರ್ಕಿಹಳ್ಳಿ, ಅರಕೇರಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸ್ಸಯ್ಯ ಶಾಖೆ, ಬಸ್ಸನಗೌಡ ಅರಷಿಣಿಗಿ, ಅಂಬ್ರಯಸ್ವಾಮಿ, ಸಂಜೀವಪ್ಪ, ಹನ್ಮಯ್ಯ ದೊರೆ, ಶಿವಪ್ಪ ಸೇರಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.