ರಾಯಚೂರು

ಬೇಸಾಯ ಕ್ರಮ ಅನುಕರಣೆಯಿಂದ ಉತ್ತಮ ಉತ್ಪಾದನೆ

Published On :

ಲಿಂಗಸ್ಗೂರು: ಇತ್ತೀಚಿನ ದಿನಗಳಲ್ಲಿ ಎಣ್ಣೆಕಾಳು ಬೆಳೆಗಳ ಉತ್ಪಾದನೆ ಕಡಿಮೆಯಾಗುತ್ತಿದ್ದು, ರೈತರು ಸರಿಯಾದ ಬೇಸಾಯ ಕ್ರಮಗಳನ್ನು ಅನುಸರಿಸುವುದರಿಂದ ಉತ್ತಮ ಉತ್ಪಾದನೆ ಪಡೆಯಲು ಸಾಧ್ಯ ಎಂದು ಸಹಾಯಕ ಕೃಷಿ ನಿರ್ದೇಶಕಿ ಎನ್. ಸರಸ್ವತಿ ತಿಳಿಸಿದರು.
ತಾಲೂಕಿನ ಮರಗಂಟನಾಳ ಗ್ರಾಮದಲ್ಲಿ ಕೃಷಿ ಇಲಾಖೆ ಲಿಂಗಸ್ಗೂರು ಹಾಗೂ ಸಜ್ಜಲಶ್ರೀ ಸಂಸ್ಥೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಣ್ಣೆಕಾಳು ಉತ್ಪಾದನೆ ಕುರಿತ ರೈತರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರು ಬಿತ್ತನೆಯಿಂದ ಕಟಾವಿನವರೆಗೆ ಬೇಸಾಯ ಕ್ರಮಗಳ ಕುರಿತು ಮಾಹಿತಿ ಪಡೆಯಬೇಕು ಹಾಗೂ ಸಮಗ್ರ ಸಸ್ಯ ಸಂರಕ್ಷಣೆ ಕ್ರಮ ಅನುಸರಿಸುವುದು ಅಗತ್ಯ. ಎಣ್ಣೆಕಾಳು ಬೆಳೆಗಳಿಗೆ ಕಡ್ಡಾಯವಾಗಿ ಜಿಪ್ಸಂ ಬಳಕೆ ಮಾಡುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ. ಸರಿಯಾದ ಕಾಲದಲ್ಲಿ ಬಿತ್ತನೆ ಮಾಡಿ ಸಮತೋಲನಾ ರಸಗೊಬ್ಬರ ಬಳಸಿ ಭೂಮಿಯ ಫಲವತ್ತತೆ ಉಳಿಸಿಕೊಳ್ಳಬೇಕೆಂದು ತಿಳಿಸಿದರು.
ಬೇಸಾಯ ಶಾಸ್ತ್ರ ತಜ್ಞ ಶ್ಯಾಮರಾವ್ ಕುಲಕರ್ಣಿ, ಶೇಂಗಾ ಬೆಳೆಯಲ್ಲಿ ಮುಖ್ಯವಾಗಿ ಬೀಜ ಪರೀಕ್ಷಿಸುವ ಪದ್ಧತಿ ಬಿತ್ತನೆಗೆ ಮುಂಚೆ ಬೀಜಗಳನ್ನು ಪರೀಕ್ಷಿಸುವುದು ಮತ್ತು ಶೇಂಗಾ ಬೆಳೆಯಲ್ಲಿ ಗೊಬ್ಬರದ ಮಹತ್ವ ಕುರಿತು ಲಘು ಪೋಷಕಾಂಶ, ಕಳೆ ನಿಯಂತ್ರಣ ಕುರಿತು ರೈತರಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ತರಬೇತಿ ಸಂಯೋಜಕ ಚೌಧರಿ, ಸಜ್ಜಲಶ್ರೀ ಸಂಸ್ಥೆಯ ಎಸ್.ಎಚ್. ರವಿಕುಮಾರ, ಪ್ರತಿನಿಧಿಗಳಾದ ಶಶಿಧರ, ಕೆ.ನಿಂಗಪ್ಪ, ವೀರೇಶ ಸೇರಿದಂತೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.