ರಾಯಚೂರು

ಬತ್ತಕ್ಕೆ 2500, ಹತ್ತಿಗೆ 6500 ಬೆಂಬೆಲೆ ನೀಡಿ

Published On :

ಸಿಂಧನೂರು ತಹಸೀಲ್ದಾರ್ ಕಚೇರಿ ಎದುರು ಜೆಡಿಎಸ್ ಧರಣಿ ಶುರು
ಕನ್ನಡಪ್ರಭ ವಾರ್ತೆ ಟಿ ಸಿಂಧನೂರು ಟಿ ನ.15
ಬತ್ತ ಮತ್ತು ಹತ್ತಿಗೆ ವೈಜ್ಞಾನಿಕ ಬೆಲೆ ನೀಡಬೇಕೆಂದು ಆಗ್ರಹಿಸಿ ಜೆಡಿಎಸ್ನಿಂದ ತಹಸೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಶುಕ್ರವಾರ ಧರಣಿ ಸತ್ಯಾಗ್ರಹ ಆರಂಭವಾಯಿತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ವಿರೋಧಿ ಸರ್ಕಾರಗಳಾಗಿವೆ. ಯಾವೊಬ್ಬ ರೈತರೂ ಈ ಸರ್ಕಾರದಿಂದ ನೆಮ್ಮದಿಯಿಂದ ಬಾಳಲು ಸಾಧ್ಯವಾಗುತ್ತಿಲ್ಲ. ಭಾರತದ ಬೆನ್ನಲುಬು ಆಗಿರುವ ರೈತನು ಇಂದು ಸಂಕಷ್ಟ ಅನುಭವಿಸುವ ಸ್ಥಿತಿ ಉಂಟಾಗಿದೆ ಎಂದರು.
3 ದಿನಗಳ ಸತ್ಯಾಗ್ರಹ: ಕಷ್ಟಪಟ್ಟು ಬೆಳೆದ ಬತ್ತಕ್ಕೆ ಉತ್ತಮ ಬೆಲೆ ಸಿಗುತ್ತಿಲ್ಲ. ಇದನ್ನರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಬಗ್ಗೆ ಚಿಂತನೆ ನಡೆಸಲು ಮುಂದಾಗುತ್ತಿಲ್ಲ. ಒಂದು ವೇಳೆ ರೈತರು ರೊಚ್ಚಿಗೆದ್ದರೆ ಸರ್ಕಾರವು ಅತಂತ್ರವಾಗುವ ಸ್ಥಿತಿ ಉಂಟಾಗುತ್ತದೆ. ಕೂಡಲೇ ಸರ್ಕಾರವು ಬತ್ತಕ್ಕೆ 2,500, ಹತ್ತಿಗೆ 6,500 ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಮೂರು ದಿನಗಳ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ನ.17ರಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಿಂಧನೂರಿಗೆ ಆಗಮಿಸಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲಿಸಿ ಮಾತನಾಡಲಿದ್ದಾರೆ ಎಂದು ಹೇಳಿದರು.
ಧರಣಿ ಸತ್ಯಾಗ್ರಹದಲ್ಲಿ ಜಿಪಂ ಮಾಜಿ ಸದಸ್ಯ ಸಂಗಮೇಶ ನಾಡಗೌಡ, ಎಪಿಎಂಸಿ ಸದಸ್ಯರಾದ ಲಿಂಗರಾಜ ಪಾಟೀಲ, ರಾಮರಾವ್, ಜೆಡಿಎಸ್ ತಾಲೂಕಾಧ್ಯಕ್ಷ ಎಂ.ಲಿಂಗಪ್ಪ ಸಾಹುಕಾರ, ಪ್ರಧಾನ ಕಾರ್ಯದರ್ಶಿ ಸಾಯಿರಾಮಕೃಷ್ಣ, ತಾಪಂ ಸದಸ್ಯ ಚಂದ್ರು ನಾಡಗೌಡ, ನಗರಸಭೆ ಮಾಜಿ ಉಪಾಧ್ಯಕ್ಷ ಜಿಲಾನಿಪಾಷ, ನಗರಸಭೆ ಸದಸ್ಯರಾದ ಬಸವರಾಜ ನಾಡಗೌಡ, ಮಹೆಬೂಬ್, ಸಣ್ಣವೀರಭದ್ರಪ್ಪ ಕುರುಕುಂದಿ, ಶರಣಬಸವ ಗೊರೇಬಾಳ, ಗ್ರಾಪಂ ಅಧ್ಯಕ್ಷ ಸಿಂಹಾದ್ರಿ ಕೃಷ್ಣಮೂರ್ತಿ, ಮುಖಂಡರಾದ ಅಯ್ಯನಗೌಡ ಆಯನೂರು, ರುದ್ರಗೌಡ ನಾಡಗೌಡ, ರಾಜಶೇಖರ ನಾಡಗೌಡ, ಮಲ್ಲನಗೌಡ ಮಾವಿನಮಡು, ಜಗನ್ ಬೂತಲದಿನ್ನಿ, ದಾಸರಿ ಸತ್ಯನಾರಾಯಣ, ವೆಂಕಟೇಶ ನಂಜಲದಿನ್ನಿ, ಲಿಂಗರಾಜ, ಸುಮಿತ್ ತಡಕಲ್, ವೆಂಕಾರೆಡ್ಡಿ.ಕೆ, ಶಿವು ನಾಡಗೌಡ, ವೀರೇಶ, ವೆಂಕೋಬ ಕಲ್ಲೂರ, ಜಹೀರುದ್ದೀನ್ ವಕೀಲರು, ಕೊಮಾರೆಪ್ಪ ಭೋವಿ, ಉದಯಕುಮಾರ ನೂರಾರು ರೈತರು ಪಾಲ್ಗೋಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.