ರಾಯಚೂರು

ಕಳಪೆ ಬೀಜ ವಿತರಣೆ: ಪರಿಹಾರಕ್ಕೆ ಆಗ್ರಹ

Published On :

ಕ.ಪ್ರ.ವಾರ್ತೆ, ಲಿಂಗಸ್ಗೂರು ನ.18
ಕೃಷಿ ಇಲಾಖೆಯಿಂದ ಕಳಪೆಮಟ್ಟದ ಶೇಂಗಾ ಹಾಗೂ ಅಂಟು ಚವಳೆ ಬೀಜ ವಿತರಣೆ ಮಾಡಿದ ಪರಿಣಾಮ ಬಿತ್ತನೆ ಮಾಡಿದ ಬೆಳೆಗಳು ವಿಫಲವಾಗಿದ್ದು, ರೈತರಿಗೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಸಹಾಯಕ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದರು.
ಕೃಷಿ ವಿಶ್ವವಿದ್ಯಾಲಯ ಖಾಸಗಿ ಅವರಿಂದ ಅಂಟು ಚವಳೆ ವಿತರಣೆ ಮಾಡಿದ ಬೀಜ ಕಳಪೆಯಿಂದ ಕೂಡಿದ್ದು, ಅಲ್ಲದೆ ಕೃಷಿ ಇಲಾಖೆಯಿಂದ ಉಚಿತವಾಗಿ ವಿತರಣೆ ಮಾಡಿದ ಶೇಂಗಾ ಬೀಜ ಕಳಪೆಯಿಂದ ಕೂಡವೆ. ಇಂತಹ ಬೀಜ ಬಿತ್ತನೆ ಮಾಡಿದ ಪ್ರಯುಕ್ತ ಬೆಳೆಗಳು ವಿಫಲವಾಗಿವೆ. ಇದರಿಂದ ರೈತರನ್ನು ನಷ್ಟಕ್ಕೀಡು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾರಾಯಣಪುರ ಹಾಗೂ ರಾಂಪುರ ಏತನೀರಾವರಿ ಕಾಲುವೆಗಳಿಗೆ ನೀರುಹರಿಸುವ ಸಮಯವನ್ನು ತಕ್ಷಣ ಸಲಹಾ ಸಮಿತಿ ಸಭೆ ಕರೆದು ನಿಗದಿಪಡಿಸಬೇಕು. ಸಭೆಗೆ ರೈತ ಮುಖಂಡರನ್ನು ಕರೆಯಬೇಕು. ಮಸ್ಕಿ ನಾಲಾ ಭರ್ತಿಯಾಗಿದೆ. ಮುಖ್ಯ ಹಾಗೂ ಹೊಲಗಾಲುವೆ ದುರಸ್ತಿ ಮಾಡಿ ನೀರು ಹರಿಸಬೇಕು. ಮಾರುಕಟ್ಟೆ ಮತ್ತು ಉಪ ಮಾರುಕಟ್ಟೆಗಳಲ್ಲಿ ಟೋಲ್ ತೆರಿಗೆ ಸಂಗ್ರಹ ನಿಲ್ಲಿಸಬೇಕು. ಸಹಕಾರ ಸಂಘಗಳಲ್ಲಿ ಸಾಲ ಮನ್ನಾ ಆದ ರೈತರಿಗೆ ಮುಂಗಾರು ಮತ್ತು ಹಿಂಗಾರು ಹಂಗಾಮು ಮುಗಿಯುತ್ತಾ ಬಂದರೂ ಸಾಲ ಕೊಟ್ಟಿರುವುದಿಲ್ಲ. ಕೂಡಲೇ ಸಾಲ ಕೊಡುವ ವ್ಯವಸ್ಥೆ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ತಾಲೂಕು ಅಧ್ಯಕ್ಷ ಅಮರೇಶ ಮಾರಲದಿನ್ನಿ, ಮುಖಂಡರಾದ ಸಂಗಣ್ಣ ಮುದಗಲ್, ಕುಪ್ಪಣ್ಣ ಗೊನವಟ್ಲ, ಚಂದಾವಲಿ ಮುದಗಲ್, ಸಿದ್ದೇಶ ಗೌಡೂರು, ಬಸವರಾಜ ಬಡಿಗೇರ, ಅಮರೇಶಸ್ವಾಮಿ, ರಾಯನಗೌಡ ಸೇರಿದಂತೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.