ರೈತರಿಗಿನ್ನು 'ಸಾವಯವ ಭಾಗ್ಯ': ಕೃಷ್ಣಬೈರೇಗೌಡ
ಗುಲ್ಬರ್ಗ: ಕಾಂಗ್ರೆಸ್ ಸರ್ಕಾರದ ಜನ ಕಲ್ಯಾಣ ಯೋಜನೆಗಳ ಸರಣಿಗೆ ಇದೀಗ ರೈತರಿಗಾಗಿ ರೂಪಿಸಿರುವ 'ಸಾವಯವ ಭಾಗ್ಯ' ಹೊಸದಾಗಿ ಸೇರ್ಪಡೆಯಾಗಿದೆ.
ರೈತರ ಕಲ್ಯಾಣ ಪರಿಕಲ್ಪನೆಯ ಹೊಸ ಯೋಜನೆ ಇದಾಗಿದ್ದು, ನಾಡಿನ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಈ ಯೋಜನೆಯನ್ನು ಬರುವ ದಿನಗಳಲ್ಲಿ ಸಾವಯವ ಕೃಷಿಗೆ ಒತ್ತುಕೊಡುವ ಉದ್ದೇಶದೊಂದಿಗೆ ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿದ್ದ ಸಾವಯವ ಕೃಷಿ ಮಿಷನ್ ಅಡಿಯಲ್ಲಿ ಜಾರಿಯಲ್ಲಿದ್ದ ಸಾವಯವ ಗ್ರಾಮವನ್ನೇ ಹೋಲುವ 'ಸಾವಯವ ಭಾಗ್ಯ' ಯೋಜನೆಗಾಗಿ ಬಜೆಟ್ನಲ್ಲಿ 100 ಕೋಟಿ ಮೀಸಲಿಡಲಾಗಿದೆ. ಸಾವಯವ ಕೃಷಿಗೆ ಪ್ರೋತ್ಸಾಹಿಸುವುದೇ ಈ ಯೋಜನೆಯ ಉದ್ದೇಶವಾಗಿದ್ದು, ಹಿಂದಿನ ಸರ್ಕಾರದ ಯೋಜನೆಯಲ್ಲಿ ಸ್ವಾರ್ಥಕ್ಕೆ ಹೆಚ್ಚು ಅವಕಾಶವಿತ್ತು. ತಾವು ಜಾರಿಗೆ ತರುತ್ತಿರುವ 'ಸಾವಯವ ಭಾಗ್ಯ'ದಲ್ಲಿ ಅಂಥದ್ದಕ್ಕೆ ಅವಕಾಶವಿಲ್ಲ ಎಂದರು.
ಸಾವಯವ ಕೃಷಿಕರನ್ನು ಗುರುತಿಸಿ ಹೋಬಳಿ ಮಟ್ಟದಲ್ಲಿ ರೈತರ ಕೂಟಗಳ ರಚನೆ, ಪ್ರತಿ ಹೋಬಳಿಯಲ್ಲಿ 100 ಎಕರೆ ಪ್ರದೇಶದಲ್ಲಿ ಸಾವಯವ ಕೃಷಿಗೆ ಪ್ರೋತ್ಸಾಹ, ಹೋಬಳಿ ರೈತರ ಕೂಟಗಳಿಂದ ರಾಜ್ಯಮಟ್ಟ ಒಕ್ಕೂಟ ರಚಿನೆ, ಸಾವಯವ ಉತ್ಪನ್ನಗಳಿಗೆ ಪ್ರತ್ಯೇಕ ಲೇಬಲಿಂಗ್- ಪ್ರಮಾಣೀಕರಣಕ್ಕೂ (ಸರ್ಟಿಫಿಕೇಶನ್) ವ್ಯವಸ್ಥೆ ಹಾಗೂ ರೈತರ ಒಕ್ಕೂಟಗಳ ಸಹಕಾರದಿಂದ ರಾಜ್ಯ ಮಟ್ಟದಲ್ಲಿ ಸಾವಯವ ಉತ್ಪನ್ನಗಳ ಮಾರುಕಟ್ಟೆಗೆ ಈ ಯೋಜನೆಯಡಿಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ರೈತರ ಹೊಲದಲ್ಲಿ ಉತ್ಪಾದನೆ ಹೆಚ್ಚಿಸುವುದೇ ಕಾಂಗ್ರೆಸ್ ಸರ್ಕಾರದ ಗುರಿ. ಬರುವ 5 ವರ್ಷಗಳಲ್ಲಿ ರಾಜ್ಯಾದ್ಯಂತ ಸರಾಸರಿ ಇಳುವರಿಯಲ್ಲಿ ಶೇ.25 ರಿಂದ ಶೇ.30ರಷ್ಟು ಹೆಚ್ಚಳವಾಗುವಂಥ ಯೋಜನೆಗಳನ್ನು ಇಲಾಖೆ ಹೆಣೆಯುತ್ತಿದೆ. ಸಾವಯವ ಕೃಷಿಯಲ್ಲಿಯೂ ರೈತರು ಉನ್ನತಿ ಸಾಧಿಸಲು ಅನುಕೂಲವಾಗುವ ಯೋಜನೆ ಇದಾಗಿದ್ದು ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

