ಪುಂಡ ಎಂಇಎಸ್ ಶಾಸಕರ ವಜಾಕ್ಕೆ ಆಗ್ರಹ
ಕ.ಪ್ರ.ವಾರ್ತೆ ಮಸ್ಕಿನ.29
ಬೆಳಗಾವಿಯ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಇಲ್ಲಿನ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟನಾ ರ್ಯಾಲಿ ಶುಕ್ರವಾರ ನಡೆಸಿದರು.
ಪಟ್ಟಣದ ಗಚ್ಚಿನಮಠದ ಹತ್ತಿರದಿಂದ ಪ್ರಾರಂಭಗೊಂಡ ಪ್ರತಿಭಟನಾ ರ್ಯಾಲಿ ಹಳೇ ಬಸ್ ನಿಲ್ದಾಣದ ಮೂಲಕ ಸಾಗಿ ಎಂಇಎಸ್ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಶಾಸಕ ಸಂಬಾಜಿ ಸಂಭಾಜಿ ಪಾಟೀಲ್ ಪ್ರತಿಕೃತಿ ದಹಿಸಿದರು.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ಪದೇ ಪದೇ ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿರುವ ಎಂಇಎಸ್ ಸಂಘಟನೆ ಪುಂಡಾಟಿಕೆ ಮಿತಿಮೀರಿದೆ. ಕನ್ನಡಿಗರ ಬಗ್ಗೆ ಅವಹೇಳನಕಾರಿ ಮಾತನಾಡಲು ಸಂಭಾಜಿ ಪಾಟೀಲ್‌ಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಎಚ್ಚರಿಸಿದರು.
ಮರಾಠಿ ಶಾಸಕನ ಕೃತ್ಯ ಖಂಡನೀಯ. ಕೂಡಲೇ ಶಾಸಕನನ್ನು ಆ ಸ್ಥಾನದಿಂದ ವಜಾ ಮಾಡಬೇಕು. ಶಾಸಕ ಸಂಭಾಜಿ ಪಾಟೀಲ್ ಅವರನ್ನು ಬಂಧಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಗಡಿಪಾರು ಮಾಡಬೇಕು. ಎಂಇಎಸ್ ಸಂಘಟನೆ ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಯಮನೂರು ಒಡೆಯರ್, ಕಿರಣಮುರಾರಿ, ಮಲ್ಲಪ್ಪ ಸಾನಬಾಳ, ಗಂಗಾಧರ ಮುರಾರಿ, ಬಸವರಾಜ ಕೆಳಗೇರಿ, ಸಿದ್ದು ಮುರಾರಿ, ಜಗದೀಶ ಪಟ್ಟಣ ಶೆಟ್ಟಿ, ರಾಮು ಆಟೋ ಮತ್ತಿತರರಿದ್ದರು.
ಮರಾಠಿ ಶಾಸಕರ ಪ್ರವೇಶ ನಿಷೇಧಕ್ಕೆ ಕನ್ನಡ ಸೇನೆ ಮನವಿ
ಲಿಂಗಸ್ಗೂರು: ಬೆಳಗಾವಿ ಮತ್ತು ಬೆಂಗಳೂರು ವಿಧಾನಸೌಧಕ್ಕೆ ಎಂಇಎಸ್ ಶಾಸಕರ ಪ್ರವೇಶ ನಿಷೇಧಿಸಬೇಕೆಂದು ಆಗ್ರಹಿಸಿ ಕನ್ನಡ ಸೇನೆ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರ ಕಚೇರಿ ಸಿಬ್ಬಂದಿಗೆ ಗುರುವಾರ ಮನವಿ ಸಲ್ಲಿಸಿದರು.
ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಎಂಇಎಸ್ ಶಾಸಕರು ಅವಿವೇಕತನದಿಂದ ನಾಡದ್ರೋಹಿ ಹೇಳಿಕೆ ನೀಡಿ ಕನ್ನಡಿಗರನ್ನು ಕೆರಳಿಸುವಂತೆ ಮಾಡಿದ್ದಾರೆ. ಕನ್ನಡ ನಾಡಿನ ನೆಲ, ಜಲ, ಭಾಷೆ ಕುರಿತು ಅತಿರೇಕತ ಮಾತನಾಡದ ಶಾಸಕರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಇಲ್ಲದಿದ್ದರೆ ಸಂಘಟನೆಯಿಂದ ರಾಜ್ಯಾದ್ಯಂತ ಹೋರಾಟ ನಡೆಸಲು ಹಿಂಜರಿಯುವುದಿಲ್ಲವೆಂದು ರಾಜ್ಯಪಾಲರಿಗೆ ಬರೆದ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಸಂಘಟನೆ ತಾಲೂಕಾಧ್ಯಕ್ಷ ಹನುಮಂತರಾಯ ನೆಲೋಗಿ, ಜಿಲ್ಲಾ ಉಪಾಧ್ಯಕ್ಷ ವೀರಭದ್ರಪ್ಪ ನಾಯಕ, ಮುಖಂಡರಾದ ಪ್ರತಾಪಸಿಂಗ್, ರವಿ, ಸುರೇಶ, ಮಲ್ಲುರಡ್ಡಿ, ಗದ್ದೆಪ್ಪ ಕುಪ್ಪಿಗುಡ್ಡ, ಖಾದರಸಾಬ, ಅರುಣ್, ಚಿಕ್ಕಹೆಸರೂರು, ಶಿವರಾಜ, ಆಂಥೋನಿ, ದೀಪಕ್, ದೇವಣ್ಣ, ಮಾರುತಿ, ದೇವರಡ್ಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

