ಶಿಕ್ಷಣಕ್ಕೆಒಲವು ನೀಡಿ: ಮುತ್ತಣ್ಣ
ಸಿಂಧನೂರು: ಪ್ರಚಲಿತ ದಿನಮಾನಗಳಲ್ಲಿ ಎಲ್ಲಾ ಸಹೋದರ ಮತ್ತು ಸಹೋದರಿಯರು ಶಿಕ್ಷಣಕ್ಕೆ ಹೆಚ್ಚಿನ ಆಸಕ್ತಿ ತೋರಬೇಕೆಂದು ವಿದ್ಯಾರ್ಥಿ ಮುತ್ತಣ್ಣ ಪೋ. ಪಾಟೀಲ್ ಜವಳಗೇರಾ ಹೇಳಿದರು.
ಅವರು ನಗರದ ಅನಿಕೇತನ ಸ್ವತಂತ್ರ ಪ.ಪೂ. ಕಾಲೇಜಿನಲ್ಲಿ ಶಿಕ್ಷಕರು ಹಮ್ಮಿಕೊಂಡಿರುವ ಮಕ್ಕಳ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ನೌಕರಿಗಾಗಿ ಅನೇಕರು ಪರದಾಡುವಂತಾಗಿದೆ. ಇಂತಹ ಸನ್ನಿವೇಶದಲ್ಲಿ ನಾವೆಲ್ಲಾ ಅತ್ಯಂತ ಕಾಳಜಿಯಿಂದ ಶಿಕ್ಷಣಕ್ಕೆ ಒತ್ತು ನೀಡಬೇಕಾಗಿದೆ ಎಂದರು.
ಈರಮ್ಮ ಮಾತನಾಡಿ, ಇಂತಹ ವೇದಿಕೆ ನಮಗೆಲ್ಲಾ ಮುಂದಿನ ಸಾಧನೆಗೆ ದಾರಿ ದೀಪವಾಗಲಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಾದ ಶರಣಬಸವ, ಶ್ರೀದೇವಿ, ಭಾರ್ಗವಿ, ರಿಜ್ವಾನ್, ಸಿದ್ದಲಿಂಗಪ್ಪ ವೇದಿಕೆಯ ಮೇಲಿದ್ದರು.
ಗಂಗಮ್ಮ ಪ್ರಾರ್ಥಿಸಿದರು. ಪ್ರಾಚಾರ್ಯ ವೈ,ಎಚ್. ರಕ್ಕಸಗಿ, ಉಪನ್ಯಾಸಕರಾದ ಗ್ಯಾನಪ್ಪ ಕನ್ನಾಪೇಟೆ, ತಿಮ್ಮಣ್ಣ ರಾಮತ್ನಾಳ, ಬಸವರಾಜ ಜವಳಗೇರಾ, ಚಂದ್ರಶೇಖರ ಹಿರೇಮಠ, ಅಯ್ಯಣ್ಣ ಬಡಿಗೇರಾ, ಗುಂಡಮ್ಮ, ಪ್ರವೀಣಕುಮಾರ, ಜಗದೀಶ, ರಾಮಣ್ಣ ಕಾರ್ಯಕ್ರಮದಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

