ರಾಜರತ್ನಂಗೆ ಕನ್ನಡವೇ ಉಸಿರಾಗಿತ್ತು: ಈರಣ್ಣ
ಸಿಂಧನೂರು: 'ನರಕಕ್ ಕಳ್ಸಿ, ನಾಲ್ಗೆ ಸೀಳ್ಸಿ, ಬಾಯಿ ಹೊಲಿಸಾಕುದ್ರುವೆ ಮೂಗನ್ಯಾಗ ಕನ್ನಡ ಪದ ಮಾತಾಡ್ತೀನಿ...' ಪದ್ಯದ ಸಾಲಿನಂತೆ ಕನ್ನಡವನ್ನೇ ಉಸಿರಾಗಿಸಿಕೊಂಡಿದ್ದ ಜಿ.ಪಿ. ರಾಜರತ್ನಂ ಕನ್ನಡ ಸಾಹಿತ್ಯದ ಮೇರು ಪ್ರತಿಭೆ ಎಂದು ಖ್ಯಾತ ಶಾಹಿರಿ ಕವಿ ಇಟಗಿ ಈರಣ್ಣ ಬಣ್ಣಿಸಿದರು.
ನಗರದ ಕರಟೂರಿ ಈರಣ್ಣ ನಿವೇಶನದ ಆವರಣದಲ್ಲಿ ಕಸಾಪ ಬೆಂಗಳೂರು ಹಾಗೂ ಜಿಲ್ಲಾ ಸಮಿತಿ ರಾಯಚೂರು ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನವೋದಯ ಕವಿ-ಕಾವ್ಯ-ಗಾಯನ ಚಿಂತನ ಮಾಲೆ ಕಾರ್ಯಕ್ರಮದಲ್ಲಿ ಜಿ.ಪಿ. ರಾಜರತ್ನಂ ಅವರ ಬದುಕು- ಬರೆಹದ ಕುರಿತು ಅವರು ಮಾತನಾಡಿದರು.
ಜಿಪಿಆರ್ ಬಡಕುಟುಂಬದಲ್ಲಿ ಬೆಳೆದು ಯಾತನಾಮಯ ಜೀವನ ನಡೆಸಿದರು. ಸೋಲು ಸವಾಲಾಗಿ ಸ್ವೀಕರಿಸಿ ಪಾಂಡಿತ್ಯ ಮಾಡಿದವರು. ಆಳ ಅಧ್ಯಯನ, ಚಿಂತನಾ ಲಹರಿ ಅವರನ್ನು ಇತರರಿಗಿಂತ ಭಿನ್ನವಾಗಿ ನಿಲ್ಲಿಸಿತು. ಹೆಂಡ ಕುಡುಕರ ಭಾಷೆಯಲ್ಲಿನ ರತ್ನನ ಪದಗಳು, ನಾಗನ ಪದಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ. ಜನರಿಗೆ ತೀರಾ ಹತ್ತಿರವಾದ ಆಡುಭಾಷೆಯಲ್ಲಿ ಪದಮೂಡಿಸಿ ಹೊಸ ಜೀವಂತಿಕೆ ಕೊಟ್ಟ ಕೀರ್ತಿ ಜಿಪಿಆರ್ ಅವರದ್ದು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ, ಕಸಾಪ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ ಮಾತನಾಡಿದರು. ನಗರಸಭೆ ಅಧ್ಯಕ್ಷ ಜಾಫರ್ ಅಲಿ ಜಾಗೀರದಾರ ಅನಿಸಿಕೆ ವ್ಯಕ್ತಪಡಿಸಿದರು.
ಶರಣೇಗೌಡ, ರಂಗಣ್ಣ ಪಾಟೀಲ್ ಅಳ್ಳುಂಡಿ, ಕೆ.ಇ.ನರಸಿಂಹ, ಗಿರಿರಾಜ ಹೊಸಮನಿ, ವಿ.ಎನ್.ಅಕ್ಕಿ, ನರಸಿಂಗರಾವ್, ವಾಸುದೇವರಾವ, ಎಸ್.ದೇವೇಂದ್ರಗೌಡ, ರಮಾದೇವಿ ಶಂಭೋಜಿ ಇದ್ದರು. ದತ್ತಿ ದಾನಿಗಳಿಗೆ ಪರಿಷತ್‌ನ ಸಂಗಮೇಶ ಬಾದವಾಡಗಿ ಅಭಿನಂದನಾ ಪತ್ರ ನೀಡಿದರು. ವೀರೇಶ ಸಾಲಿಮಠ, ಗಾಯಕ ವಾಸುದೇವರಾವ್ ರತ್ನನ್ ಪದಗಳನ್ನು ಹಾಡಿದರು. ಬಸವರಾಜ ಇನ್ನಿತರರು ಸಾಥ್ ನೀಡಿದರು.
100 ಪುಸ್ತಕ: ಪರಿಷತ್‌ಗೆ 100 ವರ್ಷ ತುಂಬುತ್ತಿರುವ ಹಿನ್ನೆಲೆ 100 ಪುಸ್ತಕ ಪ್ರಕಟಿಸುವ ಯೋಜನೆ ಹೊಂದಿರುವುದಾಗಿ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ಘೋಷಿಸಿದರು. ಶತಮಾನೋತ್ಸವ ಭವನ, ನವೋದಯ ಸಂಪುಟ ಪ್ರಕಟಣೆ ಇನ್ನಿತರೆ ಕಾರ್ಯಗಳಿಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಕಸಾಪ 12.85 ಕೋಟಿ ಮಂಜೂರಿಗೆ ಮನವಿ ಮಾಡಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

