ರಾಯಚೂರು

ಕಳ್ಳನ ಬಂಧನ: 7 ಬೈಕ್ ವಶ

Published On :

ಸಿಂಧನೂರು ಶಹರ ಠಾಣೆ ಪೊಲೀಸರ ಕಾರ್ಯಾಚರಣೆ
ಸಿಂಧನೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ಬೈಕ್‌ಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ತಾಲೂಕಿನ ಹೆಡಗಿಬಾಳಕ್ಯಾಂಪ್ ನಿವಾಸಿ ಶೇಖರ ತಂದೆ ವೆಂಕನಗೌಡ ಎನ್ನಲಾಗಿದೆ. ಆರೋಪಿಯಿಂದ 2.55 ಲಕ್ಷ ಮೌಲ್ಯದ 7 ಬೈಕ್ ವಶಪಡಿಸಿಕೊಳ್ಳಲಾಗಿದೆ. ಮಾನವಿಯ ನಾಲ್ಕು, ರಾಯಚೂರಿನ ಒಂದು ಹಾಗೂ ಸಿಂಧನೂರಿನ ಎರಡು ಬೈಕ್‌ಗಳನ್ನು ಕಾರ್ಯಾಚರಣೆಯಲ್ಲಿ ಜಪ್ತಿ ಮಾಡಲಾಗಿದೆ. ಡಿವೈಎಸ್ಪಿ ಸೂರ್ಯವಂಶಿ, ಸಿಪಿಐ ಶೇಖರಪ್ಪ, ಅಪರಾಧ ವಿಭಾಗದ ಪಿಎಸ್‌ಐ ಸುನೀಲ್‌ಕುಮಾರ ಹಾಗೂ ಸಿಬ್ಬಂದಿ ಇದ್ದರು.

ಆಯುಷ್ ಶಿಬಿರ ಪ್ರಯೋಜನವಾಗಲಿ
ಸಿಂಧನೂರು: ಆಯುಷ್ ಉಚಿತ ಶಿಬಿರದ ಲಾಭ ಪಡೆದುಕೊಳ್ಳಬೇಕೆಂದು ಜಿಲ್ಲಾ ಆಯುಷ್ ಅಧಿಕಾರಿ ಜೀಡಿ ಅಮರಗುಂಡಪ್ಪ ಹೇಳಿದರು. ನಗರದ ಸುಕಾಲಪೇಟೆ ರಸ್ತೆಯಲ್ಲಿರುವ ಸರ್ಕಾರಿ ಯೂನಾನಿ ಚಿಕಿತ್ಸಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉಚಿತ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಯುಷ್ ಇಲಾಖೆಯಿಂದ ಅನೇಕ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಿಂದ ಬಡ ರೋಗಿಗಳಿಗೂ ಅನುಕೂಲವಾಗುತ್ತಿದೆ. ದೀರ್ಘ ಕಾಲದ ವ್ಯಾಧಿಗಳಾದ ಮಧುಮೇಹ, ರಕ್ತದೊತ್ತಡ, ಪಾರ್ಶ್ವವಾಯು, ದಮ್ಮು ರೋಗಿಗಳಿಗೆ ಆಯುಷ್‌ನಲ್ಲಿ ಉತ್ತಮ ಚಿಕಿತ್ಸೆಗಳಿದ್ದು ಅಡ್ಡ ಪರಿಣಾಮ ಬೀರಲಾರವು ಎಂದರು.
ನಗರಸಭೆ ಸದಸ್ಯ ಇಕ್ಬಾಲ್‌ಸಾಬ, ಸ್ಥಳೀಯ ವೈದ್ಯ ಡಾ.ಅಮ್ಜದ್ ಶರೀಫ್, ತಜ್ಞ ವೈದ್ಯ ಡಾ. ವಿಶ್ವನಾಥರೆಡ್ಡಿ, ಡಾ.ಚಂದ್ರಶೇಖರ ಸುವರ್ಣಗಿರಿಮಠ, ಡಾ. ಹುಸೇನಿ, ಡಾ. ಅಸ್ಲಾಂ, ಡಾ. ಫಯಾಜ್, ನೋಡಲ್ ಅಧಿಕಾರಿ ಡಾ.ಬಸವರಾಜ ಕುರುಕುಂದ, ಡಾ. ಶಂಕರಗೌಡ ಪಾಟೀಲ್, ಡಾ. ನಿರ್ಮಲಾ ಇದ್ದರು.  
ಶಿಬಿರದಲ್ಲಿ 265 ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು.

ಜಯ ಕರ್ನಾಟಕ ಸಂಘಟನೆಗೆ ಆಯ್ಕೆ
ರಾಯಚೂರು: ಜಯ ಕರ್ನಾಟಕ ಸಂಘಟನೆಯ ಮಾನವಿ ತಾಲೂಕಿನ ಚೀಕಲಪರ್ವಿ ಗ್ರಾಮ ಘಟಕದ ಪದಾಧಿಕಾರಿಗಳನ್ನು ಈಚೆಗೆ ಆಯ್ಕೆ ಮಾಡಲಾಯಿತು.
ಗ್ರಾಮ ಘಟಕಕ್ಕೆ ಅಮರೇಶ ಕರಗಲ್(ಗೌರವಾಧ್ಯಕ್ಷ), ಮಹಾದೇವ ನಾಯಕ ಮ್ಯಾಳೂರ್ ಗೌರವ ಕಾರ್ಯದರ್ಶಿ), ನಾಗರಾಜ ಶೆಟ್ಟಿ(ಅಧ್ಯಕ್ಷ), ದೊಡ್ಡನಗೌಡ(ಪ್ರಧಾನ ಕಾರ್ಯದರ್ಶಿ), ವೀರಭದ್ರಪ್ಪ ವಿಶ್ವಕರ್ಮ(ಉಪಾಧ್ಯಕ್ಷ), ಗರುಡಪ್ಪ ರಂಗದಾಳ (ಉಪಾಧ್ಯಕ್ಷ), ವಿಶ್ವನಾಥಸ್ವಾಮಿ (ಕಾರ್ಯದರ್ಶಿ) ನೇಮಕಗೊಂಡಿದ್ದಾರೆ.
ಅದೇ ರೀತಿ ಸಂಘಟನೆಯ ಸದಸ್ಯರಾಗಿ ಬಸಯ್ಯಸ್ವಾಮಿ, ಮಹಾಂತೇಶಗೌಡ, ಕುಮಾರಸ್ವಾಮಿ, ವೀರೇಶ್ ಬಾರಕೇರ್, ಮಹಾಂತೇಶ್ ಹುಡೇದ್, ಶಿವರಾಯ ನಾಯಕ, ಶೀನಪ್ಪ ನಾಯಕ ಆಯ್ಕೆಯಾಗಿದ್ದಾರೆಂದು ಸಂಘಟನೆಯ ಮಾನವಿ ತಾಲೂಕು ಅಧ್ಯಕ್ಷ ಗುರುರಾಜ ನಾಗ್ಲಾಪೂರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.