ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗದಿರಲಿ
ಸಿಂಧನೂರು: ಸಾಧನೆ ಎನ್ನುವುದು ಸಾಧಕನ ಸೊತ್ತು, ಹೊರತು ಸೋಮಾರಿಯದಲ್ಲ. ಸಾಧನೆ ಮಾಡುವ ಛಲ, ಪರಿಶ್ರಮ ಇದ್ದರೆ ಏನೆಲ್ಲಾ ಸಾಧನೆ ಮಾಡಬಹುದು. ಸಾಧನೆಗೆ ಅಂಗವೈಕಲ್ಯ ಅಡ್ಡಿ ಬರುವುದಿಲ್ಲ ಎಂದು ಬಸವ ಚಾರಿಟಬಲ್ ಟ್ರಸ್ಟ್ನ ಧರ್ಮದರ್ಶಿ ಪಿ.ವೀರಭದ್ರಪ್ಪ ಕುರುಕುಂದಿ ಹೇಳಿದರು.
ನಗರದ ಬಸವ ಚಾರಿಟಬಲ್ ಟ್ರಸ್ಟ್ನಲ್ಲಿ ನಡೆದ 749ನೇ ಮನೆಯಲ್ಲಿ ಮಹಾಮನೆ, ತಿಂಗಳ ಶರಣರ ಕಾರ್ಯಕ್ರಮ ಹಾಗೂ ಲಿಂ. ಶರಣಪ್ಪ ಹಳ್ಳಿಯವರ ನೆನಹು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಷ್ಟದಲ್ಲಿರುವವರಿಗೆ ನೆರವಾಗಿ: ಸಿರಗುಪ್ಪದ ಪರಮೇಶ್ವರಪ್ಪ ತನ್ನ ಎರಡೂ ಕಾಲುಗಳಿಲ್ಲದಿದ್ದರೂ ತೆಂಗಿನಮರ ಏರಿ ಕಾಯಿ ಇಳಿಸುವುದು, ತಾಯಿಗೆ ಅಡಿಗೆ ಮಾಡಿ ಊಟ ಮಾಡಿಸುವುದು. ಕೊಚ್ಚಿಹೋಗುತ್ತಿರುವ ಅನೇಕ ದನಕರುಗಳನ್ನು ಈಜುತ್ತಾ ರಕ್ಷಿಸಿರುವುದು ಸುಲಭವಲ್ಲ. ತಮ್ಮ ಕಾಲುಗಳಿಲ್ಲ ಎಂದು ಅವರು ಸುಮ್ಮನೆ ಕುಳಿತಿಲ್ಲ. ಇರುವ ಅವಯವಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಾ ಸಾಧನೆಯತ್ತ ಸಾಗಿದ್ದಾರೆ. ಅವರು ಆರ್ಥಿಕವಾಗಿ ಸಂಕಷ್ಟದಲ್ಲಿರುವುದರಿಂದ ಟ್ರಸ್ಟ್ನಿಂದ 10 ಸಾವಿರ ಸಹಾಯಧನ ನೀಡಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೆ ಜಂಗಮ ಸೇವೆಯಾಗಲಿದೆ. ಬದಲಿಗೆ ಮಠ- ಮಾನ್ಯಗಳಿಗೆ ಕೊಟ್ಟರೆ ಪ್ರಯೋಜನವಿಲ್ಲ ಎಂದರು.
ಧರ್ಮದರ್ಶಿ ಭೋಳರೆಡ್ಡಿಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀಶೈಲ ಪತ್ತಾರ ಅನುಭಾವ ನೀಡಿದರು. ವರ್ತಕರಾದ ಬಸವರಾಜಪ್ಪ ತೊಂಡಿಹಾಳ, ಶಂಕರಸಾ ಕಬಾಡಿ, ಪಂಪಾಪತಿ ಗುಡದೂರು, ಶಿವರಾಜ, ಫಕೀರಪ್ಪ ತಿಡಿಗೋಳ, ಸಗಟು ವ್ಯಾಪಾರಿ ಎಸ್.ಹುಲುಗಪ್ಪ, ನಿವೃತ್ತ ಆಹಾರ ನಿರೀಕ್ಷಕ ಅಯ್ಯಪ್ಪ, ಪಲ್ಲವಿ ಬಸವರಾಜ, ಬಸವ ಕೇಂದ್ರದ ಅಧ್ಯಕ್ಷ ಗುಂಟಪ್ಪ ಬಳಿಗಾರ, ಟ್ರಸ್ಟ್ನ ಅಧ್ಯಕ್ಷ ಬಸವರಾಜ ಸಾಹುಕಾರ ತುರ್ವಿಹಾಳ, ಧರ್ಮದರ್ಶಿ ಡಾ. ಕೆ.ಶಿವರಾಜ ಸೇರಿದಂತೆ ಅನೇಕರು ಭಾಗಹಿಸಿದ್ದರು.
ಸಂಗೀತಾ ಪ್ರಾರ್ಥಿಸಿದರು. ಆಡಳಿತಾಧಿಕಾರಿ ಪಂಪಣ್ಣ ಹಳ್ಳಿ ಸ್ವಾಗತಿಸಿದರು. ಡಾ. ಶಂಭನಗೌಡ ತಿಡಿಗೋಳ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

