ರಾಯಚೂರು

ನವೋದಯ ಸಾಹಿತ್ಯದ ಪ್ರತಿಬಿಂಬ ಕೊಡಗಿನ ಗೌರಮ್ಮ: ರವಿ ಬಣ್ಣನೆ

Published On :

ರಾಯಚೂರು:  ಕನ್ನಡ ನವೋದಯ ಸಾಹಿತ್ಯದ ಆಶಯಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಕವಿತೆಗಳ ಮೂಲಕ ಪ್ರತಿಪಾದಿಸಿದ ಮೊದಲ ಕತೆಗಾರ್ತಿ ಕೊಡಗಿನ ಗೌರಮ್ಮ ಎಂದು ಆವಿಷ್ಕಾರ ವೇದಿಕೆಯ ರಾಜ್ಯ ಘಟಕ ಸದಸ್ಯ ಬಿ. ರವಿ ಸ್ಮರಿಸಿದರು.
ನಗರದಲ್ಲಿ ಬುಧವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ನವೋದಯದ ಮರೆಯಲಾಗದ ಕತೆಗಾರ್ತಿ ಕೊಡಗಿನ ಗೌರಮ್ಮ- ನೂರರ ನೆನಪು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೊಡಗಿನ ಗೌರಮ್ಮ ಅವರು ಬದುಕಿದ್ದು ಕೇವಲ 27 ವರ್ಷ. ಆದರೆ ಕಡಿಮೆ ಅವಧಿಯಲ್ಲಿ ಅವರು 21 ಕತೆ ಬರೆದಿದ್ದಾರೆ. ಸಮಾಜವನ್ನು ಕಾಡುವ ಬಾಲ್ಯ ವಿವಾಹ, ವರದಕ್ಷಿಣೆ ಸಮಸ್ಯೆ, ವಿಧವಾ ವಿವಾಹ, ವೇಶ್ಯಾವೃತ್ತಿ, ಜಾತಿ ಸಮಸ್ಯೆ ಮುಂತಾದವುಗಳನ್ನು ತಮ್ಮ ಕತೆಗಳಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆಂದು ಹೇಳಿದರು.
ಸಾಹಿತಿ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ದಸ್ತಗಿರಿಸಾಬ್ ದಿನ್ನಿ ಮಾತನಾಡಿ, ಕೊಡಗಿನ ಗೌರಮ್ಮ ಬಹಳ ಸಂವೇದನಾಶೀಲ ಲೇಖಕಿಯಾಗಿದ್ದರು. ಅವರ ಕತೆಗಳು ಸರಳ, ಸ್ಪಷ್ಟವಾದವುಗಳಾಗಿವೆ. ಮಹಿಳೆಯರ ತಲ್ಲಣಗಳನ್ನು ಪರಿಣಾಮಕಾರಿಯಾಗಿ ಕತೆಗಳಲ್ಲಿ ಸೆರೆ ಹಿಡಿದಿದ್ದರು ಎಂದರು.
ಕಾಲೇಜಿನ ಹಿರಿಯ ಪ್ರಾಧ್ಯಾಪಕ ಆರ್.ಆರ್. ದಿವಾಣಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆವಿಷ್ಕಾರ ಜಿಲ್ಲಾ ಸಂಚಾಲಕ ಚನ್ನಬಸವ ಜಾನೇಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳು ಹಾಗು ಸಾಹಿತ್ಯಾಸಕ್ತರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.