ರಾಯಚೂರು

ಎಪಿಎಂಸಿ ಸಹಕಾರ್ಯದರ್ಶಿ ರೆಡ್ಡಿಗೆ ಮಾತೃವಿಯೋಗ

Published On :

ಸಿಂಧನೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಹಕಾರ್ಯದರ್ಶಿ ನರಸಿಂಹರೆಡ್ಡಿ ಅವರ ತಾಯಿ ಅನುಲಮ್ಮ ಕನಕರೆಡ್ಡಿ ಬೇರಗಿ ಕನಕಗಿರಿಯಲ್ಲಿ ನಿಧನರಾಗಿದ್ದಾರೆ. ಅವರಿಗೆ 80 ವರ್ಷವಯಸ್ಸಾಗಿತ್ತು. ಅವರು ನರಸಿಂಹ ರೆಡ್ಡಿ ಸೇರಿದಂತೆ ಮನೋಹರ ರಡ್ಡಿ, ಲಕ್ಷ್ಮಿ, ಸತ್ಯಬಾಮಾ, ವಿಜಯ, ಗೀತಾ ಎಂಬ ಒಟ್ಟು ಆರು ಪುತ್ರ-ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಕನಕಗಿರಿಯಲ್ಲಿ ನಡೆಯಿತು. ಅಂತ್ಯಕ್ರಿಯೆಯಲ್ಲಿ ಗಂಗಾವತಿ ಎಪಿಎಂಸಿ ಅಧ್ಯಕ್ಷ ಗಂಗಾಧರ ಸ್ವಾಮಿ, ಸಿಂಧನೂರು ಎಪಿಎಂಸಿ ಸಿಬ್ಬಂದಿ ಭಾಗವಹಿಸಿದ್ದರು. ಸಣ್ಣ ಕರಿಯಪ್ಪ ಹರೇಟನೂರ, ರಾಮಣ್ಣ ಹುಡಾ ಸೇರಿದಂತೆ ನಿರ್ದೇಶಕರು ಸಂತಾಪ ಸೂಚಿಸಿದ್ದಾರೆ.
ಮಾಲನಬೀ ನಿಧನ
ಸಿಂಧನೂರು: ತಾಲೂಕಿನ ಆರ್.ಎಚ್.ಕ್ಯಾಂಪ್ ನಂ.1 ರಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಹುಸೇನಬಾಷಾ ಅವರ ತಾಯಿ ಮಾಲನಬಿ ಬುಧವಾರ ಬೆಳಗ್ಗೆ ಮೃತಪಟ್ಟರು. ಅವರಿಗೆ 80 ವರ್ಷವಯಸ್ಸಾಗಿತ್ತು. ಅವರು ಇಬ್ಬರು ಪುತ್ರರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸಿಂಧನೂರಿನಲ್ಲಿ ಜರುಗಿತು. ಅಂತ್ಯಕ್ರಿಯೆಯಲ್ಲಿ ನೌಕರರ ಸಂಘದ ಮಾಜಿ ಅಧ್ಯಕ್ಷ ವಿ.ಬಸವರಾಜ, ಶಿಕ್ಷಕರಾದ ರಾಜಶೇಖರ ತೆಂಗಿನಕಾಯಿ, ಹನುಮನಗೌಡ ಕಲ್ಮಂಗಿ, ರುದ್ರಮುನಿ, ಗವಿಸಿದ್ದಯ್ಯ, ರಾಜೇಂದ್ರಕುಮಾರ, ವಿರುಪಾಕ್ಷಬಾಬು, ವಿರುಪಾಕ್ಷಪ್ಪ ಮತ್ತಿತರರು ಭಾಗವಹಿಸಿದ್ದರು. ಮಾಲನಬಿ ನಿಧನಕ್ಕೆ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ನಗರಸಭೆ ಅಧ್ಯಕ್ಷ ಸೈಯದ್ ಜಾಫರ್ ಅಲಿ ಜಾಗೀರದಾರ, ನಗರಸಭೆ ಸದಸ್ಯ ಹಾಜಿಮಸ್ತಾನ, ಮಾಜಿ ಸದಸ್ಯ ಶರಣಪ್ಪ ತೆಂಗಿನಕಾಯಿ, ಕಾರ್ಮಿಕ ಮುಖಂಡ ವೆಂಕನಗೌಡ ಗದ್ರಟಗಿ, ಎ.ಐ.ಟಿ.ಯು.ಸಿ. ಮುಖಂಡ ತಿಪ್ಪಯ್ಯ ಶೆಟ್ಟಿ ಸಂತಾಪ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.