ಮಾಚೀದೇವರ ಭಾವಚಿತ್ರ ಮೆರವಣಿಗೆ
ಲಿಂಗಸ್ಗೂರು: ತಾಲೂಕು ಮಡಿವಾಳ ಸಂಘದಿಂದ 12ನೇ ವಾರ್ಷಿಕ ಮಡಿವಾಳ ಕ್ಷೇಮಾಭಿವೃದ್ಧಿ ಸಮಾವೇಶದ ಅಂಗವಾಗಿ ಮಡಿವಾಳ ಮಾಚೀದೇವರ ಭಾವಚಿತ್ರ ಸೋಮವಾರ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಈಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಡಿವಾಳರ ಭವನದವರೆಗೆ ಸಂಗೀತ ವಾದ್ಯದೊಂದಿಗೆ ಮೆರವಣಿಗೆ ನಡೆಸಲಾಯಿತು. ಸಂಘದ ಅಧ್ಯಕ್ಷ ವೀರಣ್ಣ ಮಡಿವಾಳ, ಬಸವರಾಜ, ಮುದಕಪ್ಪ, ಯಲ್ಲಪ್ಪ, ಶೇಖರ, ಶರಣಪ್ಪ, ವೆಂಕಟೇಶ, ಬೂದೆಪ್ಪ, ವೀರಭದ್ರಪ್ಪ ಸೇರಿದಂತೆ ಭಾಗವಹಿಸಿದ್ದರು.
ಬಸವೇಶ್ವರರ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ
ಯಾದಗಿರಿ: ತಾಲೂಕಿನ ಸೈದಾಪುರದ ಬಸವೇಶ್ವರ ವೃತ್ತದಲ್ಲಿ ವಲಯ ವೀರಶೈವ ಸಮಾಜದ ವತಿಯಿಂದ ಸೋಮವಾರ ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಅಶ್ವಾರೂಢ ಬಸವೇಶ್ವರರ ಕಂಚಿನ ಪುತ್ಥಳಿಯನ್ನು ವಿಶೇಷ ಪೂಜೆಯೊಂದಿಗೆ ಪ್ರತಿಷ್ಠಾಪಿಸಲಾಯಿತು. ಗುಲ್ಬರ್ಗ ಸಿದ್ದಾರೂಢ ಮಠದ ರಾಜಶೇಖರ ಸ್ವಾಮೀಜಿ ಹಾಗೂ ಕಣೇಕಲ್‌ದ ಪಂಪಯ್ಯ ಸ್ವಾಮೀಜಿ ಬಸವೇಶ್ವರರ ಮೂರ್ತಿಗೆ ಪೂಜೆ ನೆರವೇರಿಸಿದರು. ವೀರಶೈವ ಸಮಾಜದ ಹಿರಿಯ ಮುಖಂಡರಾದ ಲಿಂಗಣ್ಣಗೌಡ ಮಲ್ಹಾರ, ದೊಡ್ಡ ಸಿದ್ರಾಮಪ್ಪಗೌಡ ಬೆಳಗುಂದಿ, ಬಸವರಾಜಯ್ಯ ಸ್ವಾಮಿ ಬದ್ದೇಪಲ್ಲಿ, ಮಲ್ಲರಡ್ಡೆಪ್ಪಗೌಡ ಕಣೇಕಲ್, ಮಲ್ಲಣ್ಣಗೌಡ ಕ್ಯಾತನಾಳ, ಸಿದ್ದಣ್ಣಗೌಡ ಕಡೇಚೂರ ಇತರರು ಇದ್ದರು.
ಬೌದ್ಧಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ: ನಾಯಕ
ಸುರಪುರ: ವಿದೇಶಿ ಕ್ರೀಡೆಗಳ ಪ್ರಭಾವದಿಂದ ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿವೆ. ದೇಶಿಯ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಹೆಚ್ಚಿನ ಉತ್ತೇಜನ ನೀಡಬೇಕು. ಕ್ರೀಡೆಗಳು ದೈಹಿಕ ಸದೃಢತೆಯೊಂದಿಗೆ ಬೌದ್ಧಿಕ ಬೆಳವಣಿಗೆಗೂ ಸಹಕಾರಿಯಾಗಿವೆ ಎಂದು ಮಾಜಿ ಸಚಿವ ರಾಜಾ ಮದನಗೋಪಾಲನಾಯಕ ಹೇಳಿದರು. ಇಲ್ಲಿಯ ರಾಣಿ ಜಾನಕಿದೇವಿ ಶಾಲೆಯ ವಿದ್ಯಾರ್ಥಿಗಳು ಕಬಡ್ಡಿ ಸ್ಪರ್ಧೆಯಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಹಮ್ಮಿಕೊಂಡ ಕ್ರೀಡಾ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಇಒ ಎ.ವಿ. ಕೆಂಪರಂಗಯ್ಯ, ಶಾಲೆಯ ಮುಖ್ಯಗುರು ಜಿ.ಸಂಪತಕುಮಾರ, ಜ್ಯೋತಿ ಠಾಕೂರ್, ದೈಶಿ ರಾಜೂ ವಾಟಕರ್, ಶಿಕ್ಷಕರಾದ ಸಂತೋಷ ಕುಲಕರ್ಣಿ, ಮಲ್ಲಿಕಾರ್ಜುನ, ಅಬ್ದುಲ್ ರಜಾಕ್, ಗಂಗೂ ಚಿತ್ರಗಾರ್ ಇದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

