'ಕೃಷ್ಣಗೆ ಸಮ್ಮೇಳನಾಧ್ಯಕ್ಷ ಸ್ಥಾನ ನೀಡಿ'
ಸುರಪುರ: ಯಾದಗಿರಿಯಲ್ಲಿ ಜಿಲ್ಲಾ ಕಸಾಪ ಆಯೋಜಿಸಲು ಉದ್ದೇಶಿಸಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಇಲ್ಲಿಯ ಹಿರಿಯ ಸಾಹಿತಿ ಎ.ಕೃಷ್ಣ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ತಾಲೂಕಿನ ವಿವಿಧ ಸಂಘಟನೆಗಳು ಕಸಪಾ ಜಿಲ್ಲಾಧ್ಯಕ್ಷರನ್ನು ಆಗ್ರಹಿಸಿವೆ.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ರಾಜು ಕುಂಬಾರ, ನೃಪತುಂಗ ಶಿಕ್ಷಣ-ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಕನ್ನಡ ಸಾಂಸ್ಕೃತಿಕ ಶಕ್ತಿ ಕೇಂದ್ರ ತಾಲೂಕು ಕಾರ್ಯದರ್ಶಿ ದೇವು ಹೆಬ್ಬಳ್ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರವಿಂದ್ರನಾಥ ಟ್ಯಾಗೋರ್‌ರ ಆಂಗ್ಲ ಭಾಷೆಯ ಗೀತಾಂಜಲಿ ಕೃತಿಯನ್ನು ಎ.ಕೃಷ್ಣ ಕನ್ನಡಕ್ಕೆ ಅನುವಾದಿಸಿದ ಶ್ರೇಷ್ಠ ಕವಿ ಎಂದರು.
ಅಪಾರ ಕೊಡುಗೆ: ಭಾಮಿನಿ ಷಟ್ಪದಿಯಲ್ಲಿ ಚಂದ್ರಲಾಂಭ ಪುರಾಣವನ್ನು ರಚಿಸಿದ ಪ್ರಥಮ ಸಾಹಿತಿ ಇವರಾಗಿದ್ದಾರೆ. ಚಂಪೂ, ಹಳೆಗನ್ನಡ ಸೇರಿದಂತೆ ನವ್ಯ, ನವೋದಯ ಸಾಹಿತ್ಯದಲ್ಲಿ ಹಲವಾರು ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಇವರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.
ಪ್ರಥಮ ಬಾರಿಯ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಎ.ಕೃಷ್ಣ ಅವರನ್ನು ಆಯ್ಕೆ ಮಾಡಿದರೆ ಇಡೀ ಸಗರನಾಡನ್ನು ಗೌರವಿಸಿದಂತ್ತಾಗುತ್ತದೆ. ಪರಿಷತ್‌ನ ಜಿಲ್ಲಾಧ್ಯಕ್ಷರು ಆಸಕ್ತಿ ವಹಿಸಿ ಎ.ಕೃಷ್ಣರನ್ನು ಸಮ್ಮೇಳನದ ಗೌರವಾಧ್ಯಕ್ಷರನ್ನಾಗಿ ಮಾಡಿ ನಿಜವಾದ ಸಾಹಿತಿಗೆ ಗೌರವ ಒದಗಿಸಬೇಕೆಂದು ಆಗ್ರಹಿಸಿದರು.
ಮುಖಂಡರಾದ ರಾಜಗೋಪಾಲ ವಿಭೂತೆ, ತಿಪ್ಪಣ್ಣ ಖ್ಯಾತನಾಳ, ನಾಗೇಶ ಬುದ್ದಿನಿ, ಗೋಣೆಪ್ಪ, ಮಲ್ಲಿಕಾರ್ಜುನ ಹೂಗಾರ, ರಮೇಶ ಪಾಟೀಲ, ಶ್ರೀಧರ, ಪರುಶುರಾಮ, ಸಾಹೇಬಗೌಡ ಪಾಟೀಲ, ಶರಣಬಸಪ್ಪ ಯಾಳವಾರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

